Advertisement
ಭಾರತೀಯ ಸಂಸ್ಕೃತಿಯ ಭಾಗವಾಗಿರುವ, ಆರೋಗ್ಯದಾಯಕವೂ ಆಗಿರುವ ಮೆಹಂದಿ ಹಚ್ಚಿಕೊಳ್ಳು ವುದನ್ನು ಹಬ್ಬ, ಮದುವೆ ವಿಶೇಷ ಸಮಾರಂಭಗಳಲ್ಲಿ ಕಂಡಿದ್ದೆವು. ಮೆಹಂದಿ ಉತ್ಸವದಲ್ಲಿ ತಾಲೂಕಿನ ಇಡೀ ಕುಟುಂಬಗಳು ಭಾಗವಹಿಸುವ ಮೂಲಕ ಅವಿಸ್ಮರಣೀಯ ವಾಗಲಿದೆ. ಬುಧವಾರ ಬೆಳಗ್ಗೆಯಿಂದ ರಾತ್ರಿ ತನಕ ಗಂಡು-ಹೆಣ್ಣು ಬೇಧವಿಲ್ಲದೆ ಎಲ್ಲರೂ ಕೈಗಳಿಗೆ ಮೆಹಂದಿ ಹಚ್ಚುವ ಕಾರ್ಯ ನಡೆಸಲಿದ್ದಾರೆ.
ವಸ್ತು ಪ್ರದರ್ಶನದಲ್ಲಿ ಶಿಲ್ಪಕಲೆ, ಲಲಿತ ಕಲೆ, ಖಾದಿ ರಾಜ್ಯ ಹೊರರಾಜ್ಯಗಳ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆ ಗಳು ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಬಿದಿರಿನ ಚಾಪೆ, ತಟ್ಟಿ, ಮುಟ್ಟಾಳೆ, ಗೆರಸೆ, ಹುರಿಹಗ್ಗ, ಪಡಿಮಂಚಕ್ಕೆ ಭತ್ತದ ಸೂಡಿ ಬಡಿಯುವ ಮಹಿಳೆಯರು, ಹಳ್ಳಿ ಮಕ್ಕಳ ಆಟದ ಜತೆಗೆ ಕಾವಲು ನಿಂತ ನಾಯಿ, ಹಸು ಕರುವಿನ ಕಲಾಕೃತಿಗಳು ಹಳ್ಳಿ ಸೊಗಡಿನ ಸೊಬಗು ಪ್ರದರ್ಶಿಸುತ್ತಿದೆ.
Related Articles
Advertisement
ಇಂದು ಗೂಡುದೀಪ ಉದ್ಘಾಟನೆಮಾ.16ರಿಂದ ಸ್ವರಾಜ್ ಮೈದಾನದಲ್ಲಿ ಗೂಡುದೀಪ ಉದ್ಘಾಟನೆಯಾಗಲಿದೆ. ಕಾರ್ಕಳ ಕ್ಷೇತ್ರದ 1ರಿಂದ 10 ನೇ ತರಗತಿಯ ಮಕ್ಕಳಿಗೆ ಪ್ರತೀ ಶಾಲೆಯಿಂದ ತಲಾ ಒಂದು ಗೂಡುದೀಪದ ನೋಂದಾವಣೆಯೊಂದಿಗೆ ಸ್ಪರ್ಧೆ ನಡೆಯುತ್ತದೆ. ಸಾಂಪ್ರದಾಯಿಕ ಅಥವಾ ಆಧುನಿಕ ಗೂಡುದೀಪಗಳ ಸ್ಪರ್ಧೆಗೆ ಅವಕಾಶವಿದೆ. ವಿಜೇತರಿಗೆ ಬಹುಮಾನವಿದೆ. ಸ್ಪರ್ಧೆಯಲ್ಲಿ ಗೂಡುದೀಪಗಳಲ್ಲದೆ, ಮಂಗಳೂರು ನಮ್ಮ ಕುಡ್ಲ ತಂಡದಿಂದ ಸುಮಾರು 100 ದೊಡ್ಡ ಗಾತ್ರದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪಗಳ ಪ್ರದರ್ಶನವಿರುತ್ತದೆ. ಇಂದು ಪ್ರಾಣೇಶ್ ತಂಡದಿಂದ ಹಾಸ್ಯ
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ಬಸವರಾಜ ಮಹಾಮನಿ, ಗಂಗಾವತಿ ನರಸಿಂಹ ಜೋಶಿ, ಯಶವಂತ ಸರ್‌ದೇಶ್ ಪಾಂಡೆ ಇವರಿಂದ ಸಂಜೆ 6ರಿಂದ ಕನ್ನಡ ಹಾಸ್ಯ, ರಾಜಸ್ಥಾನ, ಕಾಶ್ಮೀರ ಮಹಾರಾಷ್ಟ್ರ ರಾಜ್ಯಗಳ ಚಡಯ್, ತೇರತಾಲಿ, ರೌಫ್, ವಚನಾಗಿಯಾ, ತರ್ಪಾ ಜಾನಪದ ನೃತ್ಯಗಳು ನಡೆಯಲಿವೆ. ರಾತ್ರಿ 8.45ರಿಂದ ತುಳು ನಾಟಕ ನಮಸ್ಕಾರ ಮೇಸ್ಟ್ರೇ ಪ್ರದರ್ಶನಗೊಳ್ಳಲಿದೆ. ಉತ್ಸವ ಸೇನಾನಿಗಳಿಗೆ ಮೆಚ್ಚುಗೆಯ ಸುರಿಮಳೆ
ಕಾರ್ಕಳ ಉತ್ಸವದ ಯಶಸ್ವಿಗೆ 37 ಸಮಿತಿಗಳು, ಸ್ವಯಂ ಸೇವಕರು ಅಹರ್ನಿಶಿ ದುಡಿಯುತ್ತಿದ್ದಾರೆ. ಇವರ ಜತೆಗೆ ಮೆಸ್ಕಾಂ, ಪೊಲೀಸ್ ಇಲಾಖೆ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬಂದಿ ಹಗಲಿರುಳೆನ್ನದೆ ಬೆವರು ಹರಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇಲ್ಲೆ ಮೊಕ್ಕಾಂ ಹೂಡಿದ್ದಾರೆ. ಎಲ್ಲಿಯೂ ಎಳ್ಳಷ್ಟು ಗೊಂದಲಗಳು ಏರ್ಪಡದಂತೆ ನಿರ್ವಹಣೆ ಮಾಡುತ್ತಿದ್ದಾರೆ. ಸ್ವತ್ಛತೆಯ ಕಾರ್ಮಿಕರು, ತಂಡದವರು ಇಷ್ಟೊಂದು ಜನಸಂದಣಿಯ ಮಧ್ಯೆ ನಗರ, ಸ್ವರಾಜ್ ಮೈದಾನ, ಗಾಂಧಿ ಮೈದಾನಗಳಲ್ಲಿ ಕಸ ಕಣ್ಣಿಗೆ ಕಾಣದಂತೆ ತೆರವುಗೊಳಿಸಿ ಸ್ವತ್ಛವಾಗಿಟ್ಟಿರುವುದು ಸಾಧನೆ ಎನ್ನುವಂತಿದೆ. ಸ್ವತ್ಛತೆ, ಅಚ್ಚುಕಟ್ಟಾದ ನಿರ್ವಹಣೆ ಕಂಡು ಹೊರ ಭಾಗದಿಂದ ಬಂದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.