Advertisement

ಬಿದಿರು ಸ್ಟ್ರೆಚರ್ ನಲ್ಲಿ 7 ಕಿ.ಮೀ. ಸಾಗಿದ ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ!

05:59 PM Sep 20, 2020 | Hari Prasad |

ಗೌಹಾತಿ: ದೇಶದ ಹಲವು ಭಾಗಗಳಲ್ಲಿ ಇನ್ನೂ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ.

Advertisement

ಇದಕ್ಕೆ ಪೂರಕವಾಗಿರುವ ಘಟನೆಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.

ಇನ್ನು ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಇವತ್ತಿಗೂ ಸಮರ್ಪಕವಾದ ಸಂಪರ್ಕ ವ್ಯವಸ್ಥೆಗಳಿಲ್ಲ.

ಇದಕ್ಕೊಂದು ನಿದರ್ಶನವೆಂಬಂತೆ ಮೇಘಾಲಯ ರಾಜ್ಯದ ಈಸ್ಟ್ ಗಾರೋ ಹಿಲ್ಸ್ ಪ್ರದೇಶದಲ್ಲಿ ನಡೆದಿರುವ ಘಟನೆಯಲ್ಲಿ ಗರ್ಭಿಣಿಯೊಬ್ಬರನ್ನು ಸುಮಾರು 7 ಕಿಲೋ ಮೀಟರ್ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಿದಿರಿನ ಸ್ಟ್ರೆಚರ್ ನಲ್ಲಿ ಹೊತ್ತೊಯ್ಯಲಾಗಿದೆ. ಅಲ್ಲಿ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುತೂಹಲಕಾರಿ ಮಾಹಿತಿಯನ್ನು ಅಲ್ಲಿನ ಸರಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ಸುದ್ದಿ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ.

Advertisement

ಜಿಲ್ಲಾ ಕೇಂದ್ರದಿಂದ ಸುಮಾರು 94 ಕಿಲೋ ಮೀಟರ್ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಮಹಿಳೆ ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ತಾಯಿ ಮತ್ತು ನವಜಾತ ಶಿಶುಗಳು ಆರೋಗ್ಯವಾಗಿದ್ದಾರೆ.

ಗಿಲ್ಮಟ್ ಡ್ಯಾಂ ಗ್ರಾಮಸ್ಥರು ತೋರಿಸಿರುವ ಈ ಸಾಹಸ ಕಾರ್ಯದಿಂದಾಗಿ ಗರ್ಭಿಣಿ ಮತ್ತು ಆಕೆಯ ಅವಳಿ ಜವಳಿ ಶಿಶುಗಳು ಆರೋಗ್ಯವಾಗಿದ್ದಾರೆ ಮತ್ತು ಆಕೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಹೆರಿಗೆ ಮಾಡಿಸುವ ನಿರ್ಧಾರವನ್ನು ಆಕೆಯ ಮನೆಯವರು ತೆಗೆದುಕೊಂಡ ಕಾರಣ ಈ ಸಾಹಸವನ್ನು ನಡೆಸಬೇಕಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗರ್ಭಿಣಿಯನ್ನು ಸ್ಟ್ರೆಚರ್ ನಲ್ಲಿ ಹೊತ್ತುಕೊಂಡು ಗ್ರಾಮಸ್ಥರು ಸುಮಾರು 7 ಕಿಲೋಮೀಟರ್ ದೂರ ಸಾಗಿದ್ದಲ್ಲದೇ ನದಿಯೊಂದನ್ನು ದಾಟುವ ಸಾಹಸವನ್ನೂ ಮಾಡಿದರು ಎಂದು ರಾಷ್ಟ್ರೀಯ ಆರೋಗ್ಯ ಯೋಜನೆಯ ಫೇಸ್ಬುಕ್ ಪುಟದಲ್ಲಿ ನಮೂದಿಸಲಾಗಿದೆ.

ಈ ಘಟನೆಯನ್ನು ವಿವರಿಸಿರುವ ಪೋಸ್ಟ್ ಗೆ ಎಲ್ಲಾ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸುಸಜ್ಜಿತ ಆರೋಗ್ಯ ವ್ಯವಸ್ಥೆಯನ್ನು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ತುರ್ತು ಅಗತ್ಯವಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next