ಶಿಲ್ಲಾಂಗ್: ಇನ್ನು ಮುಂದೆ ಕಚೇರಿಯಿಂದ ಮನೆಗೆ ಮತ್ತು ಮನೆಯಿಂದ ಕಚೇರಿಗೆ ಸಂಚರಿಸುವುದಕ್ಕೆ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸುವುದಾಗಿ ಮೆಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಶುಕ್ರವಾರ ತಿಳಿಸಿದ್ದಾರೆ.
ಹಾಗೆಯೇ ರಾಜ್ಯದ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ನಾಗರಿಕರಿಗೂ ಎಲೆಕ್ಟ್ರಿಕ್ ವಾಹನ ಬಳಸಲು ಅವರು ಕರೆ ಕೊಟ್ಟಿದ್ದಾರೆ. “ಎಲೆಕ್ಟ್ರಿಕ್ ವಾಹನ ಬಳಕೆಯಿಂದಾಗಿ ನಾವು ಇಂಧನ ಉಳಿತಾಯ ಮಾಡುವುದಷ್ಟೇ ಅಲ್ಲದೆ ಪರಿಸರ ರಕ್ಷಣೆಯಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸಿದಂತಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಬಿಬಿಎಂಪಿ ಚುನವಣೆಯಲ್ಲಿಯೂ ನಮ್ಮ ಗೆಲವು :ಆರ್.ಅಶೋಕ್
ಕೆಲ ದಿನಗಳ ಹಿಂದೆ ಸಿಎಂ ಅವರ ಕಾರ್ಯದರ್ಶಿಗಳು ಸಿಎಂ ಅವರಿಗಾಗಿ ಎಲೆಕ್ಟ್ರಿಕ್ ವಾಹನ ಬುಕ್ಕಿಂಗ್ ಮಾಡಿದ್ದು, ಅದು ಶುಕ್ರವಾರ ಸಿಎಂ ಕಚೇರಿ ತಲುಪಿದೆ.