ನವದೆಹಲಿ: ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಮಾಡುವುದಾಗಿ ಬುಧವಾರ(ಜನವರಿ 18) ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದ ಬೆನ್ನಲ್ಲೇ ಮೇಘಾಲಯದಲ್ಲಿ ಐವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಯೂನೈಟೆಡ್ ಡೆಮೊಕ್ರಟಿಕ್ ಪಕ್ಷ ಸೇರಲು ಸಿದ್ಧರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಪಿಟಿ ಸ್ವಾಕ್ಮಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಯುಡಿಪಿ ಸೇರಲು ಸಜ್ಜಾಗಿದ್ದಾರೆ. ಹಿಲ್ ಸ್ಟೇಟ್ ಪೀಪಲ್ಸ್ ಪಕ್ಷಕ್ಕೆ ಶಾಸಕ ರೇನಿಕ್ಟೋನ್ ಎಲ್ ಟಾಂಗ್ ಕರ್ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನಿಂದ ಅಮಾನತುಗೊಂಡಿರುವ ಶಾಸಕರಾದ ಮೈರಾಲ್ ಬೋರ್ನ್ ಸೈಯೆಮ್, ಟಿಎಂಸಿಯ ಶಿಟ್ಲಾಂಗ್ ಪಾಲೇ ಮತ್ತು ಪಕ್ಷೇತರ ಅಭ್ಯರ್ಥಿ ಲಾಂಬೊರ್ ಮಲ್ ಗಿಯಾಂಗ್ ರಾಜೀನಾಮೆ ನೀಡಿರುವುದಾಗಿ ವರದಿ ವಿವರಿಸಿದೆ.
ಕಾಂಗ್ರೆಸ್ ಮತ್ತು ಎಚ್ ಎಸ್ ಪಿಡಿಪಿ ಯ ಶಾಸಕರು ರಾಜೀನಾಮೆ ನೀಡುವ ಮೂಲಕ ರಾಜ್ಯದಲ್ಲಿ ಈ ಪಕ್ಷದ ಅಧಿಕೃತ ಯಾವುದೇ ಶಾಸಕರು ಇಲ್ಲದಂತಾಗಿದೆ. ಮೇಘಾಲಯದ 11ನೇ ವಿಧಾನಸಭೆಯಲ್ಲಿ 18 ಜನ ಶಾಸಕರು ಪಕ್ಷವನ್ನು ತೊರೆದಿದ್ದರು.
Related Articles
ಆರು ಪಕ್ಷಗಳ ಮೇಘಾಲಯ ಡೆಮೊಕ್ರಟಿಕ್ ಮೈತ್ರಿಕೂಟದ(ಎಂಡಿಎ) ಸರ್ಕಾರದ ಭಾಗವಾಗಿರುವ ಭಾರತೀಯ ಜನತಾ ಪಕ್ಷ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ.