Advertisement

ಗಡಿಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣ ನಮ್ಮ ಗುರಿ

06:39 PM Jul 12, 2021 | Team Udayavani |

ಮುಳಬಾಗಿಲು: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ಗಳು ನಡೆಯದಂತೆ ಕಡಿವಾಣ ಹಾಕುವುದೇ ತಮ್ಮ ಮುಖ್ಯ ಉದ್ದೇಶ ಎಂದು ಎಸ್ಪಿ ಕಿಶೋರ್‌ಬಾಬು ತಿಳಿಸಿದರು.

Advertisement

ನಗರದ ನಗರಸಭೆ ಕಚೇರಿಯಲ್ಲಿ ಕೆಜಿಎಫ್ ಮತ್ತು ಆಂಧ್ರದ ಚಿತ್ತೂರು ಜಿಲ್ಲಾ ಪೊಲೀಸರೊಂದಿಗೆ ನಡೆದ ಗಡಿ ಅಪರಾಧ ತಡೆ ಸಭೆಯಲ್ಲಿ ಮಾತನಾಡಿ, ಜಿಲ್ಲೆಗೆ ಆಂಧ್ರ ಮತ್ತು ತಮಿಳುನಾಡಿನಿಂದ ಅಕ್ರಮ ವಾಗಿ ಸರಬರಾಜು ಆಗುವ ಗಾಂಜಾ, ರಕ್ತ ಚಂದನ, ಜಾನುವಾರು ಸಾಗಾಣಿಕೆ, ಕಳವು ಪ್ರಕರಣಗಳ ಕುರಿತು ಮಾಹಿತಿ, ಕಾಣೆಯಾದ ವ್ಯಕ್ತಿಗಳ ವಿವರ, ಅಕ್ರಮ ಮದ್ಯ, ಮರಳು ಸಾಗಾಣಿಕೆ ಮಾಡುವು ದನ್ನು ತಡೆಯಲು ಸಹರಿಸುವುದು ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು.

ಪರಾರಿ ಆದವರ ಪತ್ತೆಗೆ ನೆರವು: ರಾಜ್ಯ ಮತ್ತು ಹೊರ ರಾಜ್ಯಗಳ ವಾರೆಂಟ್‌ ವಿಚಾರದಲ್ಲಿ ಸಹಕಾರ, ಅಪರಿಚಿತ ಮೃತ ದೇಹಗಳ ಪತ್ತೆ ಕಾರ್ಯದಲ್ಲಿ ಈರ್ವರೂ ಸಹಕಾರ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಪರಾರಿಯಾಗುವ ಆಸಾಮಿಗಳ ವಿವರವನ್ನು ಸಿದ್ಧಗೊಳಿಸಿ ಎರಡೂ ರಾಜ್ಯಗಳಪೊಲೀಸರುವಿನಿಮಯಮಾಡಿಕೊಳ್ಳಲು ತಿಳಿಸಿದರು.

ಅಲ್ಲದೇ,ಕೋವಿಡ್‌ಕಡಿವಾಣಕ್ಕಾಗಿ ಈಗಾಗಲೇ ಜಿಲ್ಲೆಯ ಸರಹದ್ದಿನಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕ ಲಾಗಿದ್ದು, ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಎಲ್ಲಾ ಅಧಿಕಾರಿಗಳು ಕಂಕಣಬದ್ಧರಾಗಬೇಕು ಎಂದು ವಿವರಿಸಿದರು.

ನಿರ್ದಾಕ್ಷಿಣ್ಯ ಕ್ರಮ: ಅಲ್ಲದೇ, ಜನಸಾಮಾನ್ಯರು ತಮ್ಮ ಸುತ್ತಮುತ್ತಲೂ ಯಾವುದಾದರೂ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ತಮಗಾಗಲಿ ಅಥವಾ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸಿ ಅಕ್ರಮಗಳಿಗೆ ಕಡಿವಾಣ ಹಾಕಲು ಪೊಲೀಸರೊಂ ದಿಗೆ ಕೈ ಜೋಡಿಸಬೇಕು. ಯಾವುದೇ ಪೊಲೀಸರು ಕುಮ್ಮಕ್ಕು ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

Advertisement

ಕೆಜಿಎಫ್ ಎಸ್‌ಪಿ ಇಲಾಕಿಯ ಕರುಣಾಗರನ್‌, ಎಎಸ್ಪಿ ನಾರಾಯಣಸ್ವಾಮಿ, ಮುಳಬಾಗಿಲು ಡಿವೈ ಎಸ್‌ಪಿ ಗಿರಿ, ಕೆಜಿಎಫ್ ಡಿವೈಎಸ್ಪಿ ಉಮೇಶ್‌, ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯ, ಆಂಧ್ರದ ಮದ ನಪಲ್ಲಿ ಡಿವೈಎಸ್‌ಪಿ ರವಿಮೋಹನಾಚಾರಿ, ಪಲ ಮನೇರು ಡಿವೈಎಸ್‌ಪಿ ಗಂಗಯ್ಯ, ಚಿತ್ತೂರು ಡಿಸಿ ಆರ್‌ಬಿ ಶರಶ್ಚಂದ್ರ, ಜಿಲ್ಲೆಯ ಎಲ್ಲಾ ಸಿಪಿಐಗಳಾದ ಗೋಪಾಲ್‌ನಾಯ್ಕ, ಮಾರ್ಕಂಡಯ್ಯ, ಆಂಜಿನಪ್ಪ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next