ಪುಣೆ: ಪುಣೆ ಬಂಟರ ಸಂಘದ 40 ವರ್ಷಗಳ ಇತಿಹಾಸದಲ್ಲಿ ಸಮಸ್ತ ಪುಣೆ ಬಂಟ ಬಾಂಧವರ ತಮ್ಮದೇ ಆದ ಸುಸಜ್ಜಿತ ಸಾಂಸ್ಕೃತಿಕ ಭವನವೊಂದನ್ನು ಹೊಂದುವ ಕನಸು ಇದೀಗ ನನಸಾಗುವ ಸುವರ್ಣ ಸಂಧಿಯ ಕ್ಷಣಗಣನೆ ಆರಂಭಗೊಂಡಿದೆ. ಏಪ್ರಿಲ್ 7 ಹಾಗೂ 8 ರಂದು ನಮ್ಮ ಭವನವು ಉದ್ಘಾಟನೆಗೊಂಡು ಲೋಕಾರ್ಪಣೆಗೊಳ್ಳಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಿಂದ ಈ ಕಾರ್ಯಕ್ಕೆ ಚಾಲನೆ ಸಿಗಲಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಲಿ¨ªಾರೆ. ಅಂತೆಯೇ ಸಮಾಜದ ಗಣ್ಯಾಥಿಗಣ್ಯ ಅತಿಥಿಗಳ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಿದ್ದು ಭವನಕ್ಕೆ ದೇಣಿಗೆ ನೀಡಿದ ಮಹಾ ದಾನಿಗಳ ಸಮ್ಮಾನ ಕಾರ್ಯವೂ ನಡೆಯಲಿದೆ.
ಎರಡು ದಿವಸಗಳ ಕಾಲ ನಡೆಯಲಿರುವ ಕಾರ್ಯ ಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆ ಯಲಿದ್ದು, ಸಮಸ್ತ ಬಂಟ ಸಮಾಜ ಬಾಂಧವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸ್ಮರಣೀಯ ಕಾರ್ಯಕ್ರಮವಾಗಿಸುವಲ್ಲಿ ಸಂಘದ ಎÇÉಾ ಪದಾಧಿ ಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಯ ಪಾದಾಧಿ ಕಾರಿಗಳಲ್ಲದೆ ಪಿಂಪ್ರಿ ಚಿಂಚಾÌಡ್ ಹಾಗೂ ಬಂಟ್ಸ್ ಅಸೋಸಿ ಯೇಶನ್‌ನ ಬಂಧುಗಳು ಸಹಕಾರ ನೀಡಬೇಕೆಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಸಂತೋಷ್ ಶೆಟ್ಟಿ ಕರೆ ನೀಡಿದರು.
ಮಾ. 1 ರಂದು ಬಂಟರ ಭವನದ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದ ವಿಶೇಷ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಹಿರಿಯರು ಸಮಾಜದ ಉನ್ನತಿಯನ್ನು ಬಯಸಿ ಸಮಾಜವನ್ನು ಒಗ್ಗಟ್ಟಾಗಿಸಿ ಆ ಮೂಲಕ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಸೇವಾ ಭಾವವನ್ನು ಅನುಷ್ಠಾನಗೊಳಿಸಲು ಪುಣೆ ಬಂಟರ ಸಂಘವನ್ನು ಒಂದು ಆದರ್ಶ ತಳಹದಿಯ ಮೇಲೆ ಕಟ್ಟಿದ್ದು ನಂತರದ ದಿನಗಳಲ್ಲಿ ಪ್ರತಿಯೋರ್ವ ಅಧ್ಯಕ್ಷರೂ ಸಂಘವನ್ನು ಬೆಳೆಸುವಲ್ಲಿ ತಮ್ಮಿಂದಾದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತಾರೆ. ಅದೇ ರೀತಿ ನನಗೆ ಸಮಾಜ ಬಾಂಧವರ ಆಶೋತ್ತರದಂತೆ ಕಾರ್ಯ ನಿರ್ವಹಿಸುವ ಅವಕಾಶವೊಂದು ಒದಗಿ ಬಂದಿದ್ದು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳುವಾಗ ಭವನವನ್ನು ಕಟ್ಟಿ ಪೂರ್ಣಗೊಳಿಸುವ ದೊಡ್ಡ ಸವಾಲು ಎದುರಾಗಿತ್ತು. ಆರ್ಥಿಕ ಕ್ರೋಡೀಕರಣ ದೊಡ್ಡ ಸವಾಲಾದರೆ ಭವನದ ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ನಡೆಸಿ ಸುಸಜ್ಜಿತವಾಗಿ ಭವನದ ನಿರ್ಮಾಣವನ್ನು ಮಾಡುವ ಜವಾಬ್ದಾರಿಯಿತ್ತು. ಆದರೆ ಹಗಲಿರುಳು ಈ ಬಗ್ಗೆ ಸಂಘದ ಪದಾಧಿಕಾರಿಗಳೊಂದಿಗೆ, ಹಿರಿಯರೊಂದಿಗೆ ಚಿಂತನ ಮಂಥನ ನಡೆಸಿ ಪುಣೆಯಾದ್ಯಂತ ಮಾತ್ರವಲ್ಲದೆ ಊರು, ಮುಂಬಯಿಯ ಸಮಾಜದ ಹೃದಯವಂತ ದಾನಿಗಳನ್ನು ಸಂಪರ್ಕಿಸಿ ದೇಣಿಗೆಯನ್ನು ಕ್ರೋಡೀಕರಿಸಿಕೊಂಡು ಭವನದ ಕಾಮಗಾರಿಗಳಿಗೆ ಕಾನೂನು ಸಂಬಂಧ ತೊಡಕುಗಳನ್ನು ನಿವಾರಿಸಿಕೊಂಡು ಭವನದ ಕಾಮಗಾರಿಗೆ ಸಂಬಂಧಪಟ್ಟ ತಜ್ಞರ ಸಲಹೆಗಳನ್ನು ಸ್ವೀಕರಿಸಿಕೊಂಡು ಸರ್ವ ರೀತಿಯಲ್ಲಿ ವ್ಯವಸ್ಥಿತವಾಗಿ ಸುಸಜ್ಜಿತವಾಗಿ ಭವನವನ್ನು ನಿರ್ಮಿಸುವ ಕಾರ್ಯ ಪೂರ್ಣಗೊಂಡಿದೆ.
ಸಂಘದ ಮಾಜಿ ಅಧ್ಯಕ್ಷರುಗಳ, ಪದಾಧಿಕಾರಿಗಳ, ಮಹಿಳಾ ವಿಭಾಗ, ಯುವ ವಿಭಾಗ, ದಕ್ಷಿಣ ಮತ್ತು ಉತ್ತರ ಪ್ರಾದೇಶಿಕ ಸಮಿತಿಗಳ ಸಹಕಾರ, ಮಹಾದಾನಿಗಳ ದೇಣಿಗೆ ಹಾಗೂ ಪ್ರತಿಯೋರ್ವ ಸಮಾಜ ಬಾಂಧವರ ಸಹಕಾರದೊಂದಿಗೆ ಭವನ ಕಾರ್ಯ ನೆರವೇರಿದ್ದು ಎಲ್ಲರಿಗೂ ಇದರ ಶ್ರೇಯಸ್ಸು ಸಲ್ಲಬೇಕಾಗಿದೆ. ಇದು ಪ್ರತಿಯೋರ್ವ ಬಂಟ ಬಾಂಧವರಿಗೆ ಅಭಿಮಾನದ ಸಂಗತಿಯಾಗಿದ್ದು ನಮ್ಮ ನಿಸ್ವಾರ್ಥವಾದ ಸಮಾಜ ಸೇವೆಗೆ ದೈವ ದೇವರ ಅನುಗ್ರಹದಂತೆ ಪ್ರಾಪ್ತಿಯಾದ ಫಲವಾಗಿದೆ. ಈಗಾಗಲೇ ಸಮಾರಂಭದ ಆಮಂತ್ರಣ ಪತ್ರಿಕೆಯು ಅಚ್ಚಾಗುತ್ತಿದ್ದು ಆದಷ್ಟು ಬೇಗ ಆಮಂತ್ರಣ ಪತ್ರಿಕೆಯನ್ನು ವಿತರಿಸುವ ಕಾರ್ಯಕ್ಕೂ ನಾವು ಮುಂದಾಗಬೇಕಿದೆ. ಉದ್ಘಾಟನಾ ಸಮಾರಂಭವನ್ನು ಶಿಸ್ತುಬದ್ಧವಾಗಿ ಯಶಸ್ವಿಯಾಗಿ ನಿರ್ವಹಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು. ಪ್ರತಿಯೊಬ್ಬರೂ ಜವಾಬ್ದಾ ರಿಯನ್ನು ಸ್ವೀಕರಿಸಿ ಸ್ವಯಂ ಪ್ರೇರಣೆಯೊಂದಿಗೆ ಕಾರ್ಯ ನಿರ್ವಹಿಸಿ ಸಹಕಾರ ನೀಡಬೇಕು. ಇದೊಂದು ದೇವರ ಕಾರ್ಯ ವೆಂದು ಪರಿಗಣಿಸಿ ನಮ್ಮ ಸಮಾಜದ ದೇಗುಲದ ಪುಣ್ಯ ಕಾರ್ಯದಲ್ಲಿ ಪ್ರತಿಯೋರ್ವರೂ ಸೇವೆಯನ್ನು ಸಲ್ಲಿಸಿ ಸಮಾರಂಭವನ್ನು ಸ್ಮರಣೀಯವಾಗಿಸಲು ಶ್ರಮಿಸಿ ಎಂದರು. ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ಇವರು ಮಾತನಾಡಿ, ನಮ್ಮ ಕಾರ್ಯಾವಧಿಯಲ್ಲಿ ನಮಗೆ ದೊರೆತ ಒಂದು ಪುಣ್ಯದ ಕಾರ್ಯ ಇದಾಗಿದ್ದು ಸಂಘದ ಅಧ್ಯಕ್ಷರು ಹಗಲಿರುಳೆನ್ನದೆ ನಿಸ್ವಾರ್ಥ ಶ್ರಮದಿಂದ ಭವನದ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಸಂಪೂರ್ಣವಾದ ಸಮಯವನ್ನು ವಿನಿಯೋಗಿಸಿ¨ªಾರೆ.
ಅವರೊಂದಿಗೆ ನಾವೆಲ್ಲರೂ ಉದ್ಘಾಟನಾ ಸಮಾರಂಭದ ಎರಡು ದಿನಗಳ ಕಾಲ ಸ್ವಯಂ ಪ್ರೇರಣೆಯೊಂದಿಗೆ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಸೇವಾ ಬದ್ಧರಾಗೋಣ ಎಂದು ನುಡಿದು, ಉದ್ಘಾಟನಾ ಸಮಾರಂಭಕ್ಕೆ ರಚಿಸಲಾದ ವಿವಿಧ ಸಮಿತಿಗಳ ವಿಸ್ತೃತ ಮಾಹಿತಿಗಳನ್ನು ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಕೆ. ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಪಿಂಪ್ರಿ ಚಿಂಚಾÌಡ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಬಜಗೋಳಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಶೆಟ್ಟಿ, ಸತೀಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಶಶಿಧರ ಶೆಟ್ಟಿ, ಪ್ರಶಾಂತ್ ಎ. ಶೆಟ್ಟಿ, ವಿವೇಕಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ತಾರಾನಾಥ ಕೆ. ರೈ, ವಿಶ್ವನಾಥ್ ಶೆಟ್ಟಿ, ಮೋಹನ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಕಾರ್ಯದರ್ಶಿ ಸುಲತಾ ಎಸ್. ಶೆಟ್ಟಿ, ಕೋಶಾಧಿಕಾರಿ ಸುಚಿತ್ರಾ ಎಸ್. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಅಜಿತ್ ಹೆಗ್ಡೆ, ಕ್ರೀಡಾ ಕಾರ್ಯಾಧ್ಯಕ್ಷೆ ಸಾರಿಕಾ ಸಿ. ಶೆಟ್ಟಿ ಮತ್ತು ಸಮಿತಿ ಸದಸ್ಯರು, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್ ಜೆ. ಶೆಟ್ಟಿ ಮತ್ತು ಪದಾಧಿಕಾರಿಗಳು ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಮತ್ತು ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂಪಾ ಎಸ್. ಶೆಟ್ಟಿ ಮತ್ತು ಸದಸ್ಯರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಬೈಲೂರು ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ ಮತ್ತು ಸದಸ್ಯರು, ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಯುವ ವಿಭಾಗದ ಆಕಾಶ್ ಜೆ. ಶೆಟ್ಟಿ ಮತ್ತು ಸದಸ್ಯರು, ಬಂಟ್ಸ್ ಅಸೋಸಿಯೇಶನ್ ಪುಣೆ ಇದರ ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರದೀಪ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ – ವರದಿ : ಕಿರಣ್ ಬಿ. ರೈ ಕರ್ನೂರು