Advertisement

ಇವಿಎಂ ಅಪನಂಬಿಕೆ ನಿವಾರಣೆಗೆ ಸಭೆ: ಜೈದಿ

11:12 AM Apr 30, 2017 | |

ಚಂಡೀಗಢ: ಹಲವು ಪಕ್ಷಗಳು ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಬಗ್ಗೆ ಎತ್ತಿರುವ ತಕರಾರು ಹಾಗೂ ಅಪನಂಬಿಕೆ ನಿವಾರಣೆಗೆ  ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯುವುದಾಗಿ ಚುನಾವಣಾ ಆಯೋಗದ ಮುಖ್ಯಸ್ಥ ನಸೀಂ ಜೈದಿ ಹೇಳಿದ್ದಾರೆ.

Advertisement

ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಎಂಬುದನ್ನು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿಕೊಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಪಾರದರ್ಶಕತೆ ಮತ್ತು ಮತದಾರರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ  ವಿವಿ ಪ್ಯಾಟ್‌ ಯಂತ್ರ ಬಳಸಲು ನಿರ್ಧರಿಸಲಾಗಿದೆ. ರಾಜಕೀಯ ಪಕ್ಷಗಳು ಇವಿಎಂಗಳ ಮೇಲೆ ಅನುಮಾನ ಪಡಬೇಕಿಲ್ಲ. ನಾವು ಸಾಕಷ್ಟು ಕಾಲಾವಕಾಶ ಕೊಡುತ್ತೇವೆ, ಆರೋಪಿಸುವ ವರು ಇದನ್ನು ತಿರುಚಿ ತೋರಿಸಲಿ ಎಂದು ಮತ್ತೂಮ್ಮೆ ಸವಾಲು ಹಾಕಿದ್ದಾರೆ. 

ಮುಂದಿನ ಲೋಕಸಭೆ ಚುನಾವಣೆಗೆ ಯಾವುದೇ ತೊಂದರೆಯಾಗದಂತೆ 15 ಲಕ್ಷ ವಿವಿಪ್ಯಾಟ್‌ ಯಂತ್ರ ಖರೀದಿಗೆ ಆದೇಶಿಸಿದ್ದೇವೆ. ಅವು ಸಕಾಲಕ್ಕೆ ನಮ್ಮ ಕೈಸೇರಲಿವೆ ಎಂದಿದ್ದಾರೆ ಜೈದಿ.

Advertisement

Udayavani is now on Telegram. Click here to join our channel and stay updated with the latest news.

Next