Advertisement
ಗ್ರೀನ್ ಮ್ಯಾನ್ ಆಫ್ ಲೂಧಿಯಾನ ಎಂದೇ ಖ್ಯಾತರಾಗಿರುವ 41 ವರ್ಷದ ರೋಹಿತ್ ಮೆಹ್ರಾ ಎರಡೇ ವರ್ಷದಲ್ಲಿ 500 ಅಡಿಯಿಂದ 4 ಎಕ್ರೆ ಪ್ರದೇಶಗಳಲ್ಲಿ 25 ಮಿನಿ ಕಾಡುಗಳನ್ನು ನಿರ್ಮಿಸಿದ್ದಾರೆ. ಪಂಜಾಬ್‌ನಾದ್ಯಂತ ಇಲ್ಲಿಯವರೆಗೆ 75 ಲಂಬ ಉದ್ಯಾನವನಗಳನ್ನು ನಿರ್ಮಿಸಿದ ಖ್ಯಾತಿ ಇವರದ್ದಾಗಿದೆ.
ಎರಡೇ ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸುವುದು ಸುಲಭದ ಮಾತಲ್ಲ. ಇದರ ಅನುಭವ ಕೂಡ ಇವರಿಗೆ ಇರಲಿಲ್ಲ. ಇದಕ್ಕಾಗಿ ಸಾಕಷ್ಟು ಅಧ್ಯಯನವನ್ನು ನಡೆಸಿದರು. ಪ್ರಾಚೀನ ವಿಜ್ಞಾನವನ್ನು ಅರಿಯಲು ಮುಂದಾದರೂ ವೃಕ್ಷಾಯುರ್ವೇದ ಕೃತಿ ಆಧಾರದಲ್ಲಿ ಅರಣ್ಯ ನಿರ್ಮಿಸಿದರು. ಆಶ್ಚರ್ಯವೆಂದರೆ ಈ ಕೃತಿಯಲ್ಲಿ ಮಿಯಾವಕಿ ಮಾದರಿಯ ಉಲ್ಲೇಖವಿತ್ತು.
Related Articles
ಲೂಧಿಯಾನದಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿನ ತೆರೆದ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಮಾಲಿನ್ಯವನ್ನು ತಗ್ಗಿಸುವ ರೋಹಿತ್ ಅವರ ಕಾರ್ಯಕ್ಕೆ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕೂಡ ಕೈಜೋಡಿಸಿದೆ. ರೋಹಿತ್ ಅವರ ಮಾರ್ಗದರ್ಶನದಲ್ಲಿ ಸೃಷ್ಟಿಯಾದ 15 ಅರಣ್ಯಗಳಲ್ಲಿ ಎಂಟು ಕಾಡುಗಳು ಕೈಗಾರಿಕಾ ಪ್ರದೇಶಗಳಲ್ಲಿಯೇ ಇವೆ.
Advertisement
ವರ್ಟಿಕಲ್ ಗಾರ್ಡನ್ಲೂಧಿಯಾನ ಆಯುಕ್ತರ ಭವನದಲ್ಲಿ ನಗರದ ಮೊದಲ ವರ್ಟಿಕಲ್ ಗಾರ್ಡನ್ ಸೃಷ್ಟಿಸಿದ ಖ್ಯಾತಿ ಇವರದ್ದು. ಕೈಗಾರಿಕೋದ್ಯಮಿಯೊಬ್ಬರು ತಮ್ಮ 6,000 ಚದರ ಅಡಿ ಅಗಲದ ನಿವೇಶನವನ್ನು ಅರಣ್ಯವನ್ನಾಗಿ ಪರಿವರ್ತಿಸುವಂತೆ ಮೆಹ್ರಾ ಅವರನ್ನು ಕೋರಿದ್ದರು ಎಂದರೆ ಅವರು ಬೀರಿರುವ ಪ್ರಭಾವ ಎಂಥದ್ದು ಎಂದು ಅರಿವಾಗುತ್ತದೆ. ಜನರು ಈ ವರ್ಟಿಕಲ್ ಗಾರ್ಡನ್ ಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ, ತಮ್ಮ ಜಮೀನುಗಳಲ್ಲಿನ ಉಳಿದ ಭಾಗಗಳನ್ನು ಅರಣ್ಯವನ್ನಾಗಿ ಪರಿವರ್ತಿಸಿಕೊಡವಂತೆಯೂ ಕೋರುತ್ತಿದ್ದಾರೆ ಎಂದು ರೋಹಿತ್ ಹೇಳುತ್ತಾರೆ. ಇದೀಗ ಅನೇಕ ಸಂಘ,ಸಂಸ್ಥೆಗಳು ರೋಹಿತ್ ಮೆಹ್ರಾ ಜತೆ ಕೈಜೋಡಿಸಿದೆ. *ಧನ್ಯಾ