Advertisement

ಅವರಿಬ್ಬರು ಅವಳಿ-ಜವಳಿ; ಆದರೆ ಹುಟ್ಟಿದ್ದು ಬೇರೆ- ಬೇರೆ ವರ್ಷದಲ್ಲಿ!

07:02 PM Jan 03, 2022 | Team Udayavani |

ಅಮೆರಿಕ: ಅವರಿಬ್ಬರು ಅವಳಿ-ಜವಳಿ. ಆದರೆ ಹುಟ್ಟಿದ್ದು ಬೇರೆ ಬೇರೆ ವರ್ಷಗಳಲ್ಲಿ!

Advertisement

ಅಮೆರಿಕದ ಕ್ಯಾಲಿಫೋರ್ನಿಯಾದ ಫಾತಿಮಾ ಮಾದ್ರಿಗಲ್‌ ಹೆಸರಿನ ಮಹಿಳೆ ಈ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

2021ರ ಡಿ.31ರಂದು ನಾಟಿವಿಡಾಡ್‌ ಆಸ್ಪತ್ರೆಗೆ ದಾಖಲಾದ ಅವರಿಗೆ ಮಧ್ಯರಾತ್ರಿ 11.45ಕ್ಕೆ ಗಂಡು ಮಗು ಜನಿಸಿದೆ.

ಅದಾಗಿ 15 ನಿಮಿಷಗಳ ಬಳಿಕ ಅಂದರೆ 2022ರ ಜ.1ರಂದು 12 ಗಂಟೆಯಾಗಿ ಕೆಲವು ಸೆಕೆಂಡುಗಳಿಗೆ ಹೆಣ್ಣು ಮಗು ಹುಟ್ಟಿದೆ.

ಅವರಿಬ್ಬರು ಅವಳಿ ಜವಳಿಯಾದರೂ, ಹುಟ್ಟಿದ್ದು ಬೇರೆ ದಿನ, ಬೇರೆ ವರ್ಷ ಎಂದು ಫಾತಿಮಾ ಸಂತಸದಿಂದ ಹೇಳಿಕೊಂಡಿದ್ದಾರೆ.

Advertisement

ಮಕ್ಕಳ ಫೋಟೋವನ್ನು ಆಸ್ಪತ್ರೆಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ:ಈ ತಿಂಗಳ 20 ರೊಳಗೆ ಸಂಪುಟ ಬದಲಾವಣೆ ಖಚಿತ: ಮತ್ತೆ ಯತ್ನಾಳ್ ಗುಡುಗು

Advertisement

Udayavani is now on Telegram. Click here to join our channel and stay updated with the latest news.

Next