Advertisement

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

04:07 PM Sep 21, 2021 | Team Udayavani |

ಲಕ್ಷ ಮಂದಿ ಬರೆಯುವ ಯುಪಿಎಸ್‌ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ತೇರ್ಗಡೆಯಾಗುವುದು ಕನಸಿನ ಮಾತು ಎಂಬ ಮಾತನ್ನು ಕೇಳುತ್ತಲೇ ಬೆಳೆದವಳು ಆಕೆ. ಆದರೆ ಮನಸ್ಸು ಧನಾತ್ಮಕ ಯೋಚನೆಯನ್ನು ಮಾತ್ರ ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದ್ದರಿಂದ ಆ ಮಾತುಗಳೆಲ್ಲ ಗಾಳಿಯಲ್ಲೇ ತೇಲಿ ಹೋದವು. ಆ ಮಾತುಗಳೆಲ್ಲ ಸುಳ್ಳೆಂಬಂತೆ ಆಕೆ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ ಪರೀಕ್ಷೆಯನ್ನು ತೇರ್ಗಡೆಯಾದಳು. ಅದೂ 5 ನೇ ರ್‍ಯಾಂಕ್‌ನೊಂದಿಗೆ. ಸಾಧನೆಗೆ ಪ್ರಯತ್ನ ಮತ್ತು ಏಕಾಗ್ರತೆ ಮಾತ್ರ ಮುಖ್ಯ ಎಂಬುದನ್ನು ಅವಳು ನಿರೂಪಿಸಿದ್ದಳು.

Advertisement

ಆಕೆಯ ಹೆಸರು ಸೃಷ್ಟಿ ದೇಶ್‌ಮುಖ್‌. ರಾಜಸ್ತಾನದ ಬೋಪಾಲ ಆಕೆಯ ಊರು. 2018ರ ಯುಪಿಎಸ್‌ ಫ‌ಲಿತಾಂಶ ಪ್ರಕಟವಾದಾಗ ಆಕೆಗೆ 23 ವಯಸ್ಸು. ಚಂಚಲ ಮನಸ್ಸಿನ ಜತೆ ಓಲಾಡುವ ಯುವ ಜನತೆಗೆ ಆಕೆ ಮಾದರಿ. ಪಡೆದದ್ದು ದೇಶದಲ್ಲಿ ಐದನೇ ರ್‍ಯಾಂಕ್‌. ಹೆತ್ತವರೇ ನಿರೀಕ್ಷಿಸದ ಸಾಧನೆಯದು. ಐಐಟಿ ಯ ಎಂಟ್ರೆನ್ಸ್‌ ಪರೀಕ್ಷೆಯನ್ನು ಪಾಸಾಗದ ಹುಡುಗಿ ಐಎಎಸ್‌ ಪರೀಕ್ಷೆಯಲ್ಲಿ 5 ನೇ ರ್‍ಯಾಂಕ್‌ ಪಡೆದಳೆಂದರೆ ನಂಬುವುದು ಕಷ್ಟವೇ. ಆದರೆ ಸಾಧನೆಗೆ ಯಾವುದೇ ಹಂಗಿಲ್ಲ.

ಬಾಲ್ಯದ ಕನಸು
ಐಎಎಸ್‌ ಅಧಿಕಾರಿ ಆಗಬೇಕೆಂಬು ಆಕೆಯ ಬಾಲ್ಯದ ಕನಸು. ಎಲ್ಲ ಮಕ್ಕಳು ತಮ್ಮ ಆಟದಲ್ಲಿ ನಿರತರಾಗಿದ್ದರೆ ಸೃಷ್ಟಿ ಮಾತ್ರ ಓದುತ್ತಿದ್ದಳು. ಕೇಳಿದರೆ ನಾನು ಐಎಎಸ್‌ ಅಧಿಕಾರಿ ಆಗಬೇಕೆನ್ನುತ್ತಿದ್ದಳು ಎಂಬುದನ್ನು ಆಕೆಯ ತಾಯಿ ನೆನಪಿಸಿಕೊಳ್ಳುತ್ತಾರೆ. ಇಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ ಐಎಎಸ್‌ ತರಬೇತಿಗೆ ಸೇರ್ಪಡೆಗೊಂಡ ಸೃಷ್ಟಿ ಅದಕ್ಕಾಗಿ ಮೀಸಲಿಟ್ಟದ್ದು ತಮ್ಮ ಜೀವನದ ಅಮೂಲ್ಯ 2 ವರ್ಷಗಳನ್ನು. ದಿನದ ಐದಾರು ಗಂಟೆಗಳನ್ನು ಕೇವಲ ಓದಿಗಾಗಿ ಮೀಸಲಿಡುತ್ತಿದ್ದರು. ಸ್ತ್ರೀ ಸಶಕ್ತೀಕರಣದ ಕುರಿತು ಒಂದಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದ ಸೃಷ್ಟಿಗೆ ಅದನ್ನು ಕಾರ್ಯ ರೂಪಕ್ಕೆ ತರಬೇಕಾದರೆ ಅಧಿಕಾರ ಬೇಕೆಂಬುದು ಸ್ಪಷ್ಟವಾಗಿತ್ತು. ಗುರಿ ಸ್ಪಷ್ಟವಿದ್ದಾಗ ಯಾವುದೇ ಪರೀಕ್ಷೆಗಳೂ ಕಷ್ಟವಾಗುವುದಿಲ್ಲ.

ದಿನ ಪತ್ರಿಕೆಯೇ ಹೆಚ್ಚು ಸಹಾಯಕ
ದಿನ ಪತ್ರಿಕೆಯನ್ನು ದಿನಾ ಓದುತ್ತಿದ್ದೆ. ಜತೆಗೆ ಇದ ಸುದ್ದಿ ವಾಹಿನಿಗಳನ್ನೂ ವೀಕ್ಷಿಸುತ್ತಿದ್ದೆ. ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದರೆ ಸಾಧನೆಯ ಹಾದಿ ಸುಲಭ ಎನ್ನುತ್ತಾರೆ ಸೃಷ್ಟಿ. ಯುವ ಭಾರತ ಇಂದು ತಂತ್ರಜ್ಞಾನಗಳಿಗೆ ದಾಸರಾಗುತ್ತಿರುವ ಬಗ್ಗೆ ಆಕೆ ಖೇದ ವ್ಯಕ್ತ ಪಡಿಸುತ್ತಾರೆ. ತಂತ್ರಜ್ಞಾನಗಳನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಬೇಕೆಂಬುದು ಸೃಷ್ಟಿಯ ಮಾತು.

Advertisement

Udayavani is now on Telegram. Click here to join our channel and stay updated with the latest news.

Next