Advertisement

Hats off; 50 ಅಮರನಾಥ ಯಾತ್ರಿಕರ ಜೀವ ಉಳಿಸಿದ ಬಸ್ ಚಾಲಕ ಸಲೀಂ

01:29 PM Jul 11, 2017 | Sharanya Alva |

ಅಹಮ್ಮದಾಬಾದ್: ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ ಯಾತ್ರೆ ತೆರಳಿದ್ದ ಭಕ್ತರ ಮೇಲೆ ಲಷ್ಕರ್ ಉಗ್ರರು ದಾಳಿ ನಡೆಸಿ 7 ಮಂದಿಯನ್ನು ಹತ್ಯೆಗೈದಿದ್ದರು. ಏತನ್ಮಧ್ಯೆ ಉಗ್ರರ ದಾಳಿ ವೇಳೆ ಬಸ್ ಚಾಲಕ  ತನ್ನ ಜೀವದ ಹಂಗು ತೊರೆದು ಸುಮಾರು 50 ಮಂದಿ ಅಮರನಾಥ ಯಾತ್ರಿಕರ ಜೀವ ಉಳಿಸಿದ ಘಟನೆ ಬೆಳಕಿಗೆ ಬಂದಿದೆ.

Advertisement

ಗುಜರಾತ್ ಮೂಲದ ಬಸ್ ಚಾಲಕ ಸಲೀಂ 50 ಮಂದಿ ಅಮರನಾಥ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಬಸ್ ಚಾಲಕ ಸಲೀಂ ಧೈರ್ಯ ಗುಂದದೆ ಬಸ್ ಚಲಾಯಿಸಿ 50 ಯಾತ್ರಾರ್ಥಿಗಳ ಪ್ರಾಣ ಉಳಿಸಿ ಹೀರೋ ಆಗಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ, ಭಯೋತ್ಪಾದಕರು ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದದ್ದು ಚಾಲಕ ಸಲೀಂ ಗಮನಕ್ಕೆ ಬಂದಿತ್ತು. ತಮ್ಮ ಬಸ್ ಅನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವುದನ್ನು ಅರಿತ ಸಲೀಂ ಬಸ್ ಅನ್ನು ಚಲಾಯಿಸುತ್ತಿದ್ದಾಗಲೇ ಗುಂಡುಗಳು ಹಾರತೊಡಗಿವೆ. ಸಲೀಂ ಕೂಡಲೇ ಬಸ್ ನ ಬಾಗಿಲನ್ನು ಭದ್ರವಾಗಿ ಹಾಕಿದ್ದರು. ಈ ಹಂತದಲ್ಲಿ ಬಸ್ ಅನ್ನು ನಿಲ್ಲಿಸಿದ್ದರೆ ಉಗ್ರರು ಹಲವು ಅಮಾಯಕ ಯಾತ್ರಾರ್ಥಿಗಳನ್ನು ಹತ್ಯೆಗೈಯುತ್ತಿದ್ದರು ಎಂದು ಸಲೀಂ ಮಾಧ್ಯಮದ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next