Advertisement

ಪಾರ್ವತಿ ದೇಶದ ಮೊದಲ ತೃತೀಯಲಿಂಗಿ ಅಂಚೆ ಮಹಿಳೆ

10:14 AM Dec 12, 2022 | Team Udayavani |

ತಿರುವನಂತಪುರ: ಕೇರಳದ ಕೊಲ್ಲಂನ “ಪಾರ್ವತಿ’ ದೇಶದ ಮೊದಲ ತೃತೀಯಲಿಂಗಿ ಅಂಚೆ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ದಟ್ಟ ಕಾಡು, ಕಡಿದಾದ ಸೇತುವೆಗಳು, ಆನೆ ಕಾರಿಡಾರ್‌, ಹರಿಯುವ ತೊರೆಗಳು, ಕಾಡು ಪ್ರಾಣಿಗಳು ಸಹಿತ ಎಲ್ಲ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಿ, ಅಂಚೆ ಇಲಾಖೆ ತನಗೆ ನೀಡಿರುವ ಕರ್ತವ್ಯವನ್ನು ಪಾರ್ವತಿ ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದಾರೆ. ಪ್ರತೀ ದಿನ 12 ಕಿ.ಮೀ. ಅರಣ್ಯ ಹಾದಿಯಲ್ಲಿ ಕ್ರಮಿಸಿ, ಪತ್ರಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ “ಕುಮಾರೇಶನ್‌’ ಆಗಿದ್ದ ಅವರು, ತಾನು ಲಿಂಗವನ್ನು ಬದಲಿಸಿಕೊಂಡಿದ್ದಾರೆ. ಕೊಲ್ಲಂ ನಿವಾಸಿ­ಯಾಗಿರುವ ಟಿ.ಎಸ್‌. ಕುಮಾರೇಶನ್‌ 2012ರಲ್ಲಿ ಪೋಸ್ಟ್‌ ಮ್ಯಾನ್‌ ಆಗಿ ಸೇರ್ಪಡೆಯಾದರು. ದೀರ್ಘ‌ ಹೋರಾಟದ ಅನಂತರ ಮಹಿಳೆಯಾಗಿ ಬದಲಾ ಗಬೇಕು ಎಂದು ತೀರ್ಮಾನಿಸಿ ಸದ್ಯ “ಪಾರ್ವತಿ’ ಆಗಿದ್ದಾರೆ.

ಲಿಂಗ ಬದಲಾವಣೆಯ ಈ ತೀರ್ಮಾನಕ್ಕೆ ಭಾರ ತೀಯ ಅಂಚೆ ಇಲಾಖೆ ಇವರ ಬೆನ್ನಿಗೆ ನಿಂತಿದ್ದು, ಸೇವಾ ದಾಖಲೆಯಲ್ಲಿ ಇವರ ಹೆಸರನ್ನು “ಪಾರ್ವತಿ’ ಎಂದು ಬದಲಿಸಿದೆ. ಪ್ರಸ್ತುತ ಇವರು ಕೊಲ್ಲಂನ ರೊಸೆಮಾಲಾ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next