ವಾಷಿಂಗ್ಟನ್: ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ಭಾರತೀಯರ ನೇಮಕ ಹೆಚ್ಚುತ್ತಿದೆ. ಹೊಸ ನೇಮಕ ವೊಂದರಲ್ಲಿ ಅಮೆರಿಕದ ಅಂತಾರಾಷ್ಟ್ರೀಯ ಹಣಕಾಸು ಅಭಿವೃದ್ಧಿ ಆಯೋಗದ ಉಪ ಮುಖ್ಯಸ್ಥ ಹುದ್ದೆಗೆ ಭಾರತೀಯ ಮೂಲದ ನಿಶಾ ದೇಸಾಯಿ ಬಿಸ್ವಾಲ್ ಅವರನ್ನು ಬೈಡನ್ ಆಡಳಿತ ನಾಮನಿರ್ದೇಶಿಸಿದೆ.
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತದಲ್ಲಿ ಮಧ್ಯ ಮತ್ತು ದಕ್ಷಿಣ ಏಷ್ಯಾ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಿಸ್ವಾಲ್, ಅಮೆರಿಕ ವಿದೇಶಾಂಗ ನೀತಿ, ಕಾರ್ಯನಿರ್ವಾಹಕ ಶಾಖೆ, ಅಂತಾರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿನ ಸೇವೆ ಸೇರಿದಂತೆ 30 ವರ್ಷಗಳ ಆಡಳಿತಾನುಭವ ಹೊಂದಿದ್ದಾರೆ.
ಪ್ರಸಕ್ತ ಅಮೆರಿಕ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಅಂತಾರಾಷ್ಟ್ರೀಯ ಕಾರ್ಯತಂತ್ರ ಹಾಗೂ ಜಾಗತಿಕ ನೀತಿ ನಿರೂಪಣಾ ವಿಭಾಗದಲ್ಲಿ ಹಿರಿಯ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಶ್ವೇತಭವನ ತಿಳಿಸಿದೆ.