Advertisement

ಮೊದಲ ಬಾರಿ ಮಗಳ ಮುಖ ರಿವೀಲ್‌ ಮಾಡಿದ ಪಿಂಕಿ: ವೈರಲ್‌ ಆಯಿತು ಕ್ಯೂಟ್‌ ಮಾಲ್ತಿ ಫೋಟೋ

09:32 AM Jan 31, 2023 | Team Udayavani |

ವಾಷಿಂಗ್ಟನ್:‌ ಸೆಲೆಬ್ರಿಟಿಗಳು ತಮ್ಮ ಮಗುವಿನ ಮುಖವನ್ನು ಸಾರ್ವಜನಿಕರ ಮುಂದೆ ಸುರಕ್ಷತೆಯ ದೃಷ್ಟಿಯಿಂದ ಕೆಲ ಸಮಯ ರಿವೀಲ್‌ ಮಾಡಲು ಹೋಗುವುದಿಲ್ಲ. ಖ್ಯಾತ ಪ್ರಿಯಾಂಕ ಚೋಪ್ರಾ – ನಿಕ್‌ ಜೋನಾಸ್‌ ದಂಪತಿಯೂ ತಮ್ಮ ಮಗಳ ಮುಖವನ್ನು ತೋರಿಸಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಮುಖವನ್ನು ರಿವೀಲ್‌ ಮಡಿದ್ದಾರೆ.

Advertisement

ನಿಕ್‌ ಜೋನಸ್‌ ಸಹೋದರರು ಲಾಸ್ ಎಂಜಲೀಸ್ ನ ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್ಸ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ  ಪಿಂಕಿ ತಮ್ಮ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್‌ ಮಾಡಿದ್ದಾರೆ.

ಇದನ್ನೂ ಓದಿ: ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

ಪ್ರಶಸ್ತಿ ಪಡೆದ ಪತಿ ನಿಕ್‌ ಜೋನಸ್‌ ಹಾಗೂ ಸಹೋದರರಿಗೆ ಅಭಿನಂದನೆ ಸಲ್ಲಿಸಿರುವ ಪ್ರಿಯಾಂಕ ತನ್ನ ಮಗಳ ಮುಖವನ್ನು ಸಾರ್ವಜನಿಕರ ಮುಂದೆ ಮೊದಲ ಬಾರಿ ರಿವೀಲ್‌ ಮಾಡಿದ್ದಾರೆ. ಸದ್ಯ ಮಗಳ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

2018 ರ ಡಿ.1,2 ರಂದು ಹಿಂದೂ – ಕ್ರಿಶ್ಚಿಯನ್‌ ಸಂಪ್ರದಾಯದಲ್ಲಿ ಜೋಧ್‌ ಪುರದಲ್ಲಿ ಪ್ರಿಯಾಂಕ – ನಿಕ್‌ ಜೋನಸ್‌ ದಾಂಪತ್ಯಕ್ಕೆ ಕಾಲಿಟ್ಟಿದ್ದರು. 2022 ರ ಜನವರಲ್ಲಿ ಬಾಡಿಗೆ ತಾಯ್ತಾನದ ಮೂಲಕ ಮೊದಲ ಮಗುವನ್ನು ಪ್ರೀತಿಯಿಂದ ದಂಪತಿ ಬರಮಾಡಿಕೊಂಡಿದ್ದರು.

Advertisement

ʼಆಲ್‌ ಕಮಿಂಗ್‌ ಬಾಕ್‌ ಟು ಮಿʼ, ʼಸಿಟಾಡೆಲ್ʼ ಎಂಬ ಹಾಲಿವುಡ್‌ ಪ್ರಾಜೆಕ್ಟ್‌ ಗಳಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next