Advertisement
ನಾಸಾದ ಮಹತ್ವಾಕಾಂಶೆಯ ಯೋಜನೆಯೆಂದು ಹೇಳಲಾಗುತ್ತಿದ್ದ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿರುವಲ್ಲಿ ಭಾರತ ಮೂಲದ ಮಹಿಳೆಯೋರ್ವರ ಪಾಲಿರುವುದು ಇಡೀ ಭಾರತೀಯರಿಗೆ ಹೆಮ್ಮೆ ತರುವಂತಹ ವಿಚಾರವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
Related Articles
Advertisement
ಡಾ. ಸ್ವಾತಿ ಮೋಹನ್ ಯಾರು..?
ಅಮೇರಿಕಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಕನ್ನಡಿಗರಾದ ಜ್ಯೋತಿ ಹಾಗೂ ಮೋಹನ್ ದಂಪತಿಗಳ ಪುತ್ರಿ, ಡಾ. ಸ್ವಾತಿ ಮೋಹನ್.
ಕ್ಯಾಲಿಫೋರ್ನಿಯಾದ ನಾಸಾದ ನಿಯಂತ್ರಣ ಕೊಠಡಿಯಲ್ಲಿ ಗೈಡೆನ್ಸ್ ಆ್ಯಂಡ್ ನೇವಿಗೇಶನ್ ಹಾಗೂ ಕಂಟ್ರೋಲ್ ಯೋಜನೆಯ ತಂಡದ ನಡುವೆ ಸ್ವಾತಿ ಯಶಸ್ವಿಯಾಗಿ ರೋವರ್ ನ್ನು ಮಂಗಳನ ಅಂಗಳಕ್ಕೆ ಇಳಿಸಿದ್ದಾರೆ.
ನಾಸಾ ವಿಜ್ಞಾನಿ ಡಾ ಮೋಹನ್ ಅವರು ಕೇವಲ ಒಂದು ವರ್ಷದವರಾಗಿದ್ದಾಗ ಭಾರತದಿಂದ ಅಮೆರಿಕಕ್ಕೆ ತಮ್ಮ ತಂದೆ ತಾಯಿಯವರೊಂದಿಗೆ ವಲಸೆ ಬಂದರು. ಸ್ವಾತಿ, ತಮ್ಮ ಬಾಲ್ಯದ ಬಹು ಭಾಗವನ್ನು ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ ಕಳೆದಿದ್ದಾರೆ. 9ನೇ ವಯಸ್ಸಿನಲ್ಲಿ, ಮೊದಲ ಬಾರಿಗೆ ವೀಕ್ಷಿಸಿದ ‘ಸ್ಟಾರ್ ಟ್ರೆಕ್'(ಅಮೇರಿಕನ್ ಟೆಲಿವಿಷನ್ ಸೀರೀಸ್) ಸ್ವಾತಿಯವರನ್ನು ಪ್ರಭಾವಿಸಿತು.
ಓದಿ : ಯಕ್ಷರಂಗದ ಸಿಡಿಲಮರಿ ಡಾ.ಶ್ರೀಧರ ಭಂಡಾರಿ ನಿಧನ: ಕೊಳ್ತಿಗೆ ನಾರಾಯಣ ಗೌಡರಿಂದ ನುಡಿ ನಮನ
ಸ್ವಾತಿ, ತನ್ನ 16 ವರ್ಷದ ತನಕ ಶಿಶು ವೈದ್ಯರಾಗಲು ಬಯಸಿದ್ದರು. ಆದಾಗ್ಯೂ, ಅವರ ಮೊದಲ ಭೌತಶಾಸ್ತ್ರ ತರಗತಿ ಮತ್ತು ಅವರಿಗಿದ್ದ ಉತ್ತಮ ಶಿಕ್ಷಕರ ಸಲಹೆಯ ಮೇರೆಗೆ, ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಆಸಕ್ತಿಯನ್ನು ಮುಂದುವರಿಸುವ ಉದ್ದೇಶದಿಂದ “ಎಂಜಿನಿಯರಿಂಗ್” ಕ್ಷೇತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು.
ಡಾ. ಸ್ವಾತಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದಿದ್ದಾರೆ ಮತ್ತು ಏರೋನಾಟಿಕ್ಸ್ ಎಂ ಐ ಟಿ ಯಿಂದ ಎಂ ಎಸ್ ಮತ್ತು ಪಿ ಎಚ್ ಡಿ ಪೂರ್ಣಗೊಳಿಸಿದ್ದಾರೆ. ಸಿಎ ಪಾಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯಲ್ಲಿ ಮೊದಲಿನಿಂದಲೂ ಸ್ವಾತಿ ರೋವರ್ ಮಿಷನ್ ನ ವಿಜ್ಞಾನಿಗಳ ತಂಡದಲ್ಲಿದ್ದರು, ಡಾ.ಮೋಹನ್ ಅವರು ನಾಸಾದ ವಿವಿಧ ಪ್ರಮುಖ ಕಾರ್ಯಗಳಲ್ಲಿ ಪಾಲ್ಪಡೆದಿದ್ದಾರೆ. ಭಾರತೀಯ-ಅಮೇರಿಕನ್ ವಿಜ್ಞಾನಿ ಡಾ. ಸ್ವಾತಿ ಕ್ಯಾಸಿನಿ (ಶನಿಯ ಒಂದು ಮಿಷನ್) ಮತ್ತು ಗ್ರೇಲ್ (ಚಂದ್ರನಲ್ಲಿಗೆ ಒಂದು ಜೋಡಿ ರಚನೆಯ ಬಾಹ್ಯಾಕಾಶ ನೌಕೆಯ ಉಡಾವಣೆ) ಯೋಜನೆಗಳಲ್ಲಿ ಕೆಲಸ ಮಾಡಿದ್ದು, ನುರಿತ ವಿಜ್ಞಾನಿಯಾಗಿದ್ದಾರೆ.
ಇನ್ನು, ಬರೋಬ್ಬರಿ 203 ದಿನಗಳನ್ನು ತೆಗೆದುಕೊಂಡು ಈ ರೋವರ್ ಮಂಗಳನ ಅಂಗಳಕ್ಕಿಳಿದಿದೆ. ಸುಮಾರು 470 ರಿಂದ 472 ಮಿಲಿಯನ್ ಕಿಲೋಮೀಟರ್ ದೂರ ಈ ರೋವರ್ ತಲುಪಿದೆ. ಸದ್ಯಕ್ಕೆ ಪ್ರಾಥಮಿಕ ಹಂತದ ಯಶಸ್ವಿ ಕಂಡಿದ್ದು, ಮಂಗಳನ ಮೇಲ್ಮೈನಲ್ಲಿ ಏನ್ಶಿಯಂಟ್ ಸೂಕ್ಷ್ಮ ಜೀವಿಗಳ ವಾಸದ ವಿಚಾರವನ್ನೊಳಗೊಂಡು ಅಲ್ಲಿನ ಹಲವು ಮಾಹಿತಿಗಳನ್ನು ಭೂಮಿಗೆ ಕಳುಹಿಸಲಿದೆ.