ಮೇರಠ್: ವಾಹನ ಸವಾರರು ಕಾನೂನು ಉಲ್ಲಂಘಿಸಿದರೆ ಈಗ ಭರ್ಜರಿ ದಂಡ ಬೀಳೋದು ಗೊತ್ತೇ ಇದೆ. ಉತ್ತರ ಪ್ರದೇಶದ ಮೇರಠ್ ನಲ್ಲಿ ಹೆಲ್ಮೆಟ್ ಹಾಕದೇ ಬೈಕ್ ಚಾಲನೆ ಮಾಡಿದ ಯುವಕನೊಬ್ಬನಿಗೆ ಪೊಲೀಸರು ದಂಡ ವಿಧಿಸಿದ್ದು, ಪರಿಣಾಮ ಅವರೆಲ್ಲ ಸವಾರನ ನಾಟಕ ನೋಡುವಂತಾಗಿದೆ.
Advertisement
ದಂಡ ವಿಧಿಸಿದ್ದನ್ನು ವಿರೋಧಿಸಿ ಯುವಕ ಬೈಕ್ ಅನ್ನು ಅಡ್ಡಾದಿಡ್ಡಿ ಮಗುಚಿ ಹಾಕಿ ಬಳಿಕ ಅದರ ಮೇಲೆಯೇ ಕುಳಿತು ಅತ್ತಿದ್ದಾನೆ. ಕೊನೆಗೆ ಪೊಲೀಸರೇ ಆತನನ್ನು ಸಮಾಧಾನಪಡಿಸಿದ್ದಾರೆ.
ಈ ವೀಡಿಯೋವನ್ನು ಸ್ಥಳೀಯರು ಚಿತ್ರಿಸಿದ್ದು, ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದಾರೆ. ಅಲ್ಲಿ ಇದು ವೈರಲ್ ಆಗಿದೆ. ಕೆಲವರು ಯುವಕನ ಪರ ಸಹಾನುಭೂತಿಯನ್ನೂ ವ್ಯಕ್ತಪಡಿಸಿದ್ದಾರೆ.