ಮುಂಬಯಿ: ಮೀರಾರೋಡ್ ಶ್ರೀ ಶನೀಶ್ವರ ಮಂದಿರದಲ್ಲಿ ತಿಂಗಳ ಮಂಗಳಾಧ್ಯಯ ಮಹಾಪೂಜೆಯ ಅಂಗವಾಗಿ ಮೂರನೇ ಶನಿವಾರದ ವಿಶೇಷ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಹನುಮಾನ್ ಚಾಲೀಸ್ ಮತ್ತು ಶ್ರೀ ಶನೀಶ್ವರ ಜಪ, ಶ್ರೀ ಶನೀಶ್ವರ ಭಜನ ಸಮಿತಿಯಿಂದ ಭಜನೆ, ರಾತ್ರಿ 7 ಗಂಟೆಯಿಂದ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನೆರವೇರಿತು.
ವಿಶೇಷ ಪೂಜೆಯಲ್ಲಿ ಪ್ರಸಿದ್ಧ ಭಜನ ಗಾಯಕ ಮಧುಕರ್ ಅಮೀನ್ ಅವರನ್ನು ಮಂದಿರದಲ್ಲಿ ಅಲಂಕಾರ ಸೇವೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಸಂದರ್ಭ ಗೌರವ ಅಧ್ಯಕ್ಷ ವಿನೋದ್ ವಾಘಸಿಯಾ ಅವರು ಶಾಲು ಹೊದೆಸಿ, ಪ್ರಸಾದವನ್ನು ನೀಡಿ ಗೌರವಿಸಿದರು. ಈ ಸಂದರ್ಭ ಅಧ್ಯಕ್ಷೆ ವಿದ್ಯಾ ಅಶೋಕ್ ಕರ್ಕೇರ, ಉಪಾಧ್ಯಕ್ಷ ಗುಣಕಾಂತ್ ಶೆಟ್ಟಿ ಕರ್ಜೆ, ಮಹಿಳಾ ಸಮಿತಿಯ ಉಪಾಧ್ಯಕ್ಷೆ ರಾಧಾ ಸುರೇಶ್ ಕೋಟ್ಯಾನ್, ಕೋಶಾಧಿಕಾರಿ ಅಚ್ಯುತ ಕೋಟ್ಯಾನ್, ಜತೆ ಕೋಶಾಧಿಕಾರಿ ಜಯಕರ್ ಶೆಟ್ಟಿ ಮುದ್ರಾಡಿ, ಜತೆ ಕಾರ್ಯದರ್ಶಿ ಉಷಾ ದಿನೇಶ್ ಶೆಟ್ಟಿಗಾರ್, ಜತೆ ಕೋಶಾಧಿಕಾರಿ ಭಾರತಿ ಅಂಚನ್, ಪೂಜಾ ಸಮಿತಿಯ ಉಪಾಧ್ಯಕ್ಷೆ ಜಯಲಕ್ಷ್ಮೀ ಸುವರ್ಣ, ಪೂಜಾ ಸಮಿತಿಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಮಹಿಳಾ ಸಮಿತಿಯ ಯಶೋಧಾ ಪೂಜಾರಿ, ಭಾರತಿ ಮಧುಕರ್ ಅಮೀನ್, ಲಲಿತಮ್ಮ ಶೆಟ್ಟಿಗಾರ್, ಸುಜಾತಾ ಶೆಟ್ಟಿ, ಆರತಿ ರಾವ್ ಉಪಸ್ಥಿತರಿದ್ದರು.
ಯುವ ಸಮಿತಿಯ ಜಯೇಶ್ ಸುವರ್ಣ, ರಿಚಿನ್ ಅಮೀನ್, ಕಾವ್ಯಾ ಶೆಟ್ಟಿಗಾರ್, ಹಿಮಾಂಶ್ ಅಮೀನ್, ಪ್ರಜ್ಞಾ ಶೆಟ್ಟಿಗಾರ್, ವಿಜೇತಾ ಪೂಜಾರಿ, ಪ್ರಿಯಾ ವಿ. ಗುಪ್ತ, ಅರ್ಚಕ ನಿರಾವ್ ಭಟ್ ಮತ್ತು ಶುಶಿಲ್ ಮಿಶ್ರಾ, ವಿಘ್ನಹರ್ತ ಡೆವಲಪರ್‌ನ ವಿವೇಕಾನಂದ ಜಾ ಹಾಗೂ ಮತ್ತಿತರರು ಉಪಸ್ಥಿತರಿದ್ದು, ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕಾರಿಸಿದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮ ನೆರವೇರಿತು. ಗುಣಕಾಂತ್ ಶೆಟ್ಟಿ ಕರ್ಜೆ ವಂದಿಸಿದರು.