Advertisement

ಮೀರಾ-ಭಾಯಂದರ್‌ ಮಹಾನಗರ ಪಾಲಿಕೆ ಸಭಾಪತಿಯಾಗಿ ಅರವಿಂದ್‌ ಎ. ಶೆಟ್ಟಿ 

04:09 PM Jul 22, 2018 | |

ಮುಂಬಯಿ: ಮೀರಾ-ಭಾಯಂದರ್‌ ಪಾಲಿಕೆ  ಸಭಾಪತಿಯಾಗಿ ಕನ್ನಡಿಗ ಬಿಜೆಪಿಯ ನಗರ ಸೇವಕ, ಮೀರಾ- ಡಹಾಣೂ ಬಂಟ್ಸ್‌ನ ಅಧ್ಯಕ್ಷ ಅರವಿಂದ ಎ. ಶೆಟ್ಟಿ ಅವರು  ಮೀರಾರೋಡ್‌ ಕನಕಿಯಾ ರೋಡ್‌ನ‌ಲ್ಲಿರುವ ಮಹಾನಗರ ಪಾಲಿಕೆಯ ಕಾರ್ಯಾಲಯದಲ್ಲಿ ಪಾಲಿಕೆಯ ಮೇಯರ್‌ ಡಿಂಪಲ್‌ ಮೆಹ್ತಾ ಅವರಿಂದ ಅಧಿಕಾರ ಸ್ವೀಕರಿಸಿದರು.

Advertisement

ಬೆಳಗ್ಗೆ ನೂತನ ಕಾರ್ಯಾಲಯದಲ್ಲಿ ಪೂಜಾ ವಿಧಾನಗಳು ಅರವಿಂದ್‌ ಶೆಟ್ಟಿ ದಂಪತಿಯ ನೇತೃತ್ವದಲ್ಲಿ ನಡೆದ ಬಳಿಕ, ಮೀರಾ-ಭಾಯಂದರ್‌ ಶಾಸಕ ನರೇಂದ್ರ ಮೆಹ್ತಾ ಅವರು ನೂತನ ಕಾರ್ಯಾಲಯನ್ನು ರಿಬ್ಬನ್‌ ಕತ್ತರಿಸಿ ಉದ್ಘಾಟಿಸಿ ಶುಭಹಾರೈಸಿದರು. ಪಾಲಿಕೆಯ ಮೇಯರ್‌ ಹಾಗೂ ನಗರ ಸೇವಕರುಗಳ ಉಪಸ್ಥಿತಿಯಲ್ಲಿ ಸಭಾಪತಿ ಅಧಿಕಾರವನ್ನು ಅರವಿಂದ್‌ ಶೆಟ್ಟಿ ಸ್ವೀಕರಿಸಿದರು.

ಮೀರಾ-ಭಾಯಂದರ್‌ ಮಹಾನಗರ ಪಾಲಿಕೆಯಲ್ಲಿ ಒಟ್ಟು 95 ನಗರ ಸೇವಕರಿದ್ದು, 61 ಬಿಜೆಪಿ ನಗರ ಸೇವಕರು ಹಾಗೂ 21 ಶಿವಸೇನೆಯ ನಗನ ಸೇವಕರು ಹಾಗೂ 13 ಕಾಂಗ್ರೆಸ್‌ನ ನಗರ ಸೇವಕರನ್ನು ಹೊಂದಿದ್ದಾರೆ. ಮಹಾನಗರ ಪಾಲಿಕೆಯ ಒಟ್ಟು 6 ಜನ ಸಭಾಪತಿಗಳು ಹೊಂದಿದ್ದು, ಅದರಲ್ಲಿ ಐದು ವಾರ್ಡ್‌ಗಳ 20 ನಗರ ಸೇವಕರುಗಳನ್ನು ಹೊಂದಿರುವ ದೊಡ್ಡ ಘಟಕದ ಸಭಾಪತಿಯಾಗಿ ಅರವಿಂದ್‌ ಎ. ಶೆಟ್ಟಿ, ಒಂದು ವರ್ಷದ ಅವಧಿಗೆ ಅಧಿಕಾರವನ್ನು ಸ್ವೀಕರಿಸಿದರು.

ಮೀರಾ-ಭಾಯಂದರ್‌ ಮಹಾನಗರ ಪಾಲಿಕೆಯಲ್ಲಿ ಪ್ರಥಮ ಬಾರಿಗೆ ಕನ್ನಡಿಗ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ, ಶಿವಸೇನೆಯ ಬಲಿಷ್ಟ ಅಭ್ಯರ್ಥಿ ಪ್ರದೀಪ್‌ ಜಂಗಮ ಅವರನ್ನು ಭಾರೀ ಅಂತರಗಳಿಂದ ಸೋಲಿಸಿ ನಗರ ಸೇವಕರಾಗಿ ಆಯ್ಕೆಗೊಂಡಿದ್ದರು. ಇದೀಗ ಮಹಾನಗರ ಪಾಲಿಕೆಗೆ ಬಿಜೆಪಿ ಪಕ್ಷ ಅರವಿಂದ ಶೆಟ್ಟಿ ಅವರ ನಾಯಕತ್ವದ ಜನಪರ ಸೇವೆಗಳನ್ನು ಗುರುತಿಸಿ ಸಭಾಪತಿ ಹುದ್ದೆ ನೀಡಿದೆ. ಮಹಾನಗರ ಪಾಲಿಕೆಗೆ ಒಟ್ಟು ಮೂರು ಜನ ನಗರ ಸೇವಕರಾಗಿ ಆಯ್ಕೆಗೊಂಡಿದ್ದು, ಅವರಲ್ಲಿ ಗಣೇಶ್‌ ಶೆಟ್ಟಿ, ದಿಶಾ ಮೆಲ್ವಿನ್‌ ಡಿಸೋಜಾ ಹಾಗೂ ಅರವಿಂದ್‌ ಶೆಟ್ಟಿ ಸೇರಿದ್ದಾರೆ.

ಈ ಮೊದಲು ಗಣೇಶ್‌ ಶೆಟ್ಟಿ ಅವರು 6 ದೇ ಘಟಕದ ಸಭಾಪತಿಯಾಗಿ ಆಯ್ಕೆಗೊಂಡು ಅಧಿಕಾರದಿಂದ ನಿರ್ಗಮಿಸಿದ್ದರು. ಮೀರಾ-ಭಾಯಂದರ್‌ ಮಹಾನಗರ ಪಾಲಿಕೆಯ ವಿವಿಧ ವಾರ್ಡ್‌ಗಳ ನಗರ ಸೇವಕರುಗಳು ಅರವಿಂದ ಶೆಟ್ಟಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರನ್ನು ಅರವಿಂದ್‌ ಶೆಟ್ಟಿ, ಮಹಾಪೌರೆ ಡಿಂಪಲ್‌ ಮೆಹ್ತಾ ಮತ್ತು ನರೇಂದ್ರ ಮೆಹ್ತಾ ಅವರು ಗೌರವಿಸಿದರು.

Advertisement

ಅರವಿಂದ ಶೆಟ್ಟಿ ಅವರ ತಾಯಿ ಬ್ರಹ್ಮಾವರ ಹೇರಿಂಜೆ ಲಕ್ಷಿ¾à ಆನಂದ ಶೆಟ್ಟಿ, ಪತ್ನಿ ಪಲ್ಲವಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ಟ್ರಸ್ಟಿ ಗಂಧರ್ವ ಸುರೇಶ್‌ ಶೆಟ್ಟಿ, ಉದ್ಯಮಿ ಸಂತೋಷ್‌ ಪುತ್ರನ್‌, ಉದ್ಯಮಿ ಗುಣಪಾಲ್‌ ಶೆಟ್ಟಿ, ಗಣೇಶ್‌ ಆಳ್ವ, ದೀಪಕ್‌ ಹಾಸ್ಪಿಟಲ್‌ನ ಮಾಲಕ ಡಾ| ಭಾಸ್ಕರ ಶೆಟ್ಟಿ, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಸಂಚಾಲಕ ಅರುಣೋದಯ ರೈ, ಬಿಜೆಪಿಯ ದಕ್ಷಿಣ ಭಾರತೀಯ ಮೀರಾ-ಭಾಯಂದರ್‌ ಜಿಲ್ಲಾಧ್ಯಕ್ಷ ಎಲಿಯಾಳ ಉದಯ ಹೆಗ್ಡೆ, ಮಾಜಿ ಅಧ್ಯಕ್ಷ ಮಹಾಬಲ ಸಮಾನಿ, ಜಿಲ್ಲಾ ಕಾರ್ಯದರ್ಶಿ ಪೆಲತ್ತೂರು ಉದಯ ಶೆಟ್ಟಿ, ಬಿಜೆಪಿಯ ಗುಣಕಾಂತ್‌ ಶೆಟ್ಟಿ ಕರ್ಜೆ, ಮಹಿಳಾ ವಿಭಾಗದ ಲೀಲಾ ಪೂಜಾರಿ, ಶಾಲಿನಿ ಶೆಟ್ಟಿ, ಮೀರಾ-ಭಾಯಂದರ್‌ನ ಕನ್ನಡಿಗರಾಗದ ಗಣೇಶ್‌ ಆಳ್ವ, ಸಂತೋಷ್‌ ಶೆಟ್ಟಿ, ಕೃಷ್ಣ ಜಿ. ಶೆಟ್ಟಿ, ಸಂತೋಷ್‌ ರೈ ಬೆಳ್ಳಿಪಾಡಿ, ದಿನೇಶ್‌ ಶೆಟ್ಟಿ ಕಾಪುಕಲ್ಯ, ವಸಂತ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next