Advertisement

Thalapathy 68: ದಳಪತಿ – ವೆಂಕಟ್‌ ಪ್ರಭು ಚಿತ್ರಕ್ಕೆ ಟಾಲಿವುಡ್‌ ಬೆಡಗಿ ನಾಯಕಿ?

12:27 PM Oct 02, 2023 | Team Udayavani |

ಚೆನ್ನೈ: ದಳಪತಿ ವಿಜಯ್‌ ಅವರ ʼಲಿಯೋʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಇದೇ ತಿಂಗಳಿನಲ್ಲಿ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈ ನಡುವೆ ಅವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದೆ.

Advertisement

ವಿಜಯ್‌ – ವೆಂಕಟ್‌ ಪ್ರಭು ಅವರ ಸಿನಿಮಾ ಅನೌನ್ಸ್‌ ಆಗಿರುವುದು ಗೊತ್ತೇ ಇದೆ. ಈ ಸಿನಿಮಾ ಈಗಾಗಲೇ ಹೈಪ್‌ ಕ್ರಿಯೇಟ್‌ ಮಾಡಿದ್ದು, ಸಿನಿಮಾದ ಕುರಿತಾದ ಪ್ರತಿಯೊಂದು ಅಪ್ಡೇಟ್‌ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ʼದಳಪತಿ69ʼ ಸಿನಿಮಾದ ನಾಯಕಿ ಆಯ್ಕೆ ಕುರಿತು ಕಳೆದ ಕೆಲ ದಿನಗಳಿಂದ ಚರ್ಚೆ ನಡೆಯುತ್ತಿದೆ. ವಿಜಯ್‌ ಅವರ ಸಿನಿಮಾದಲ್ಲಿ ಟಾಲಿವುಡ್‌ ಬೆಡಗಿಯೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮಹೇಶ್‌ ಬಾಬು ಅವರ ಬಹು ನಿರೀಕ್ಷಿತ ʼಗುಂಟೂರು ಕಾರಮ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿರುವ ಮಾಡೆಲ್‌ ಕಂ ನಟಿ ಮೀನಾಕ್ಷಿ ಚೌಧರಿ ದಳಪತಿ ಸಿನಿಮಾದಲ್ಲಿ ಹೀರೋಯಿನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಮೀನಾಕ್ಕಿ ಚೌಧರಿ ಈಗಾಗಲೇ ಕಾಲಿವುಡ್‌ ನಲ್ಲಿ ವಿಜಯ್ ಆಂಟೋನಿ ಅವರ ‘ಕೊಲೈ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಮೀನಾಕ್ಕಿ ನಟಿಸಿರುವ ಮತ್ತೊಂದು ಕಾಲಿವುಡ್‌ ಸಿನಿಮಾ ‘ಸಿಂಗಪುರ ಸಲೂನ್’ ಬಿಡುಗಡೆಗೆ ಸಿದ್ಧವಾಗಿದೆ. ವಿಶ್ವರ್ಕ್ ಸೇನ್ ಅವರೊಂದಿಗಿನ ಹೆಸರಿಡದ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.

ದಳಪತಿ ಅವರ ಸಿನಿಮಾದಲ್ಲಿ ಮೀನಾಕ್ಕಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕಾಲಿವುಡ್‌ ರಂಗದಲ್ಲಿ ವೈರಲ್‌ ಆಗಿದೆ. ಸದ್ಯ ಅಧಿಕೃತವಾಗಿ ಚಿತ್ರತಂಡ ಈ ಬಗ್ಗೆ ಇನ್ನಷ್ಟೇ ಅನೌನ್ಸ್‌ ಮಾಡಬೇಕಿದೆ.

Advertisement

ಮಹೇಶ್‌ ಬಾಬು ಅವರ ʼಗುಂಟೂರು ಕಾರಮ್’ ಜನವರಿ 12 , 2024 ರ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next