Advertisement
ವಿವಿಧ ಸಂಶೋಧನೆಗಳ ಪ್ರಕಾರ ಧ್ಯಾನವನ್ನು ದಿನನಿತ್ಯ ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮಿದುಳಿನಲ್ಲಿ ನರ ಮಾರ್ಗಗಳನ್ನು ಪುನರ್ಜೀವಗೊಳಿಸಲು ಸಹಾಯ ಮಾಡುತ್ತದೆ. ಬೆಳಗ್ಗಿನ ಸಮಯ ಧ್ಯಾನ ಮಾಡುವುದು ಉತ್ತಮ. ಪ್ರತಿದಿನ ಇಪ್ಪತ್ತು ನಿಮಿಷಗಳ ಕಾಲ ಧ್ಯಾನವನ್ನು ಮಾಡಿದ್ದಲ್ಲಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಬಹುದು ಹಾಗೂ ಯಾವುದೇ ರೋಗವನ್ನು ಪವಾಡದ ರೀತಿ ಗುಣಪಡಿಸುವ ಶಕ್ತಿ ಧ್ಯಾನದಲ್ಲಿದೆ . ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ದೇಹಕ್ಕೆ ಮಾತ್ರವಲ್ಲದೆ ನಮ್ಮ ಜೀವನಕ್ಕೂ ಪ್ರಯೋಜನಕಾರಿಯಾಗಿದೆ.
· ಮಾನಸಿಕ ಒತ್ತಡ ಹಾಗೂ ಖನ್ನತೆಯನ್ನು ಕಡಿಮೆ ಮಾಡುವ ಸುಲಭ ವಿಧಾನ.
· ಉಸಿರಾಟ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ.
· ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ.
· ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
· ನರಕೋಶ ಮತ್ತು ಮಿದುಳಿನ ಆರೋಗ್ಯವನ್ನು ರಕ್ಷಿಸುತ್ತದೆ.
· ಬುದ್ಧಿ ಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
· ಹಾರ್ಮೋನ್‌ಗಳ ಸಮತೋಲನಕ್ಕೆ, ಸುಧಾರಿತ ನಿದ್ರೆ ಹಾಗೂ ವಿಶ್ರಾಂತಿ ಏಕಾಗ್ರತೆಯನ್ನು ಅಭಿವೃದ್ಧಿ ಪಡಿಸಲು, ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
· ನರಮಂಡಲಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಕೆಲಸ ಮಾಡಲು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ.
· ಮಾನಸಿಕ ಪ್ರಕ್ರಿಯೆಗಳನ್ನು ಹೆಚ್ಚಿನ ಸ್ವಯಂಪ್ರೇರಿತ ನಿಯಂತ್ರಣದಲ್ಲಿ ತರುತ್ತದೆ.
· ಗಮನ, ಸ್ವಯಂ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. - ಡಾ| ರೇಷ್ಮಾ ಭಟ್, ಬೆಂಗಳೂರು