Advertisement

ಹೊಳೆಹೊನ್ನೂರು: ಕಲುಷಿತ ನೀರಿನಿಂದ ವಾಂತಿ ಭೇದಿ; ವೈದ್ಯಾಧಿಕಾರಿಯಿಂದ ಔಷಧಿ ವಿತರಣೆ

06:19 PM Jun 13, 2022 | Suhan S |

ಹೊಳೆಹೊನ್ನೂರು: ಮೈದೊಳಲಿನಲ್ಲಿ ವಾಂತಿ ಭೇದಿ ಪ್ರಕರಣಗಳು ದಿಢೀರ್ ಹೆಚ್ಚಾದ ಹಿನ್ನೆಲೆ ತಾಲೂಕು ವೈದ್ಯಾಧಿಕಾರಿ ಅಶೋಕ್ ನೇತೃತ್ವದ ತಂಡ ಗ್ರಾಮದಲ್ಲಿ ಸರ್ವೆ ನಡೆಸಿ ಅಸ್ವಸ್ಥರ ಆರೋಗ್ಯ ವಿಚಾರಿಸಿ ಔಷಧಿಗಳನ್ನು ವಿತರಿಸಿದರು.

Advertisement

ತಾಲೂಕು ವೈದ್ಯಾಧಿಕಾರಿ ಅಶೋಕ್ ಮೈದೊಳಲಿನ ಕುಡಿಯುವ ನೀರಿನ ಮೂಲಗಳನ್ನು ಗ್ರಾಪಂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ರಾಜಭಕ್ಷವಾಲಿ ದೇವಸ್ಥಾನದ ಹಿಂಭಾಗದ ಟ್ಯಾಂಕ್ ನಿಂದ ಬಿಡುವ ನೀರು ಕುಡಿದವರ ಆರೋಗ್ಯದಲ್ಲಿ ಏರುಪೇರಾಗಿದೆ. ಟ್ಯಾಂಕ್ ಪರೀಶಿಲಿಸಿದಾಗ ಟ್ಯಾಂಕ್‌ನ ವಾಲ್‌ನಲ್ಲಿ ಉಂಟಾಗಿದ ಪ್ಯಾಚ್‌ನಿಂದ ತ್ಯಾಜ್ಯ ನೀರು ಟ್ಯಾಂಕ್ ಸೇರಿರಬಹುದು ಎಂದು ಶಂಕಿಸಿ. ಇನ್ನೆರಡು ದಿನ ಟ್ಯಾಂಕ್‌ನಿಂದ ನಲ್ಲಿಗಳಿಗೆ ನೀರು ಹರಿಸದಂತೆ ಹೇಳಿದರು.

ಅಲ್ಲದೆ ಗ್ರಾಮದ ನೀರಿನ ಮೂಲಗಳನ್ನು ಖುದ್ದಾಗಿ ಪರಿಶೀಲಿಸಿ ಕೊಳವೆ ಬಾವಿಗಳ ನೀರಿನ ಸ್ಯಾಂಪಲ್‌ಅನ್ನು ಪರೀಕ್ಷೆಗೆ ಕಳಿಸುವಂತೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ತಿಳಿಸಿದರು. ರೋಗಿಗಳ ಆರೋಗ್ಯ ಹಾಗೂ ಔಷದೋಪಚಾರದ ಬಗ್ಗೆ ಶುಶೃಕಿಯರಿಂದ ಮಾಹಿತಿ ಪಡೆದು ಅಸ್ವಸ್ಥರಾದವರ ಮನೆಗಳಿಗೆ ಬೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.

ಕಳೆದ ಶನಿವಾರದಿಂದ ಹೊಟ್ಟೆ ನೋವು ಭೇದಿಯಿಂದ 65 ಕ್ಕೂ ಹೆಚ್ಚು ಜನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭಾನುವಾರ ಮಲ್ಲಾಪುರ ಹಾಗೂ ಆನವೇರಿಯ ಖಾಸಗಿ ಕ್ಲಿನಿಕ್‌ಗಳಲ್ಲಿ 250 ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದಿದ್ದಾರೆ. ತೀರಾ ಅಸ್ವಸ್ಥರಾದ 3-4 ಜನ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

Advertisement

ಕಳೆದ ಮೂರು ವರ್ಷಗಳ ಹಿಂದೆ ಕಲುಷಿತ ನೀರು ಸೇವನೆಯಿಂದ ಉಂಟಾಗಿದ ಕಾಲರಕ್ಕೆ ತುತ್ತಾಗಿ ಗ್ರಾಮದಲ್ಲಿ ಸಾವು ನೋವುಗಳು ಸಂಭವಿಸಿದರು ಗ್ರಾಪಂ ಎಚ್ಚೆತ್ತುಕೊಂಡಿಲ್ಲ. ಕಳೆದ ಮಂಗಳವಾರ ಬುಧವಾರ ಮೈದೊಳಲಿನಲ್ಲಿ ಹಬ್ಬ ನಡೆದ ಪ್ರಯುಕ್ತ ಗ್ರಾಪಂ ಎರಡ್ಮೂರು ಕೊಳವೆ ಬಾವಿಗಳ ನೀರನ್ನು ಒಟ್ಟಿಗೆ ಸೇರಿಸಿ ಸರಬರಾಜು ಮಾಡಿದರಿಂದ ಗ್ರಾಮಸ್ಥರಲ್ಲಿ ಅನಾರೋಗ್ಯ ಉಂಟಾಗಿದೆ. ಗ್ರಾಪಂನ ಅವ್ಶೆಜ್ಞಾನಿಕ ನೀರು ನಿರ್ವಹಣೆಯಿಂದಲೆ ಶೀತಜ್ವರ, ವಾಂತಿ ಭೇದಿ ಪ್ರಕರಣಗಳು ಹೆಚ್ಚಾದವು ಎಂದು ಕೆಲ ಗ್ರಾಮಸ್ಥರು ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಪರೀಶಿಲನೆಗೆ ಬಂದ ಗ್ರಾಪಂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next