Advertisement

ಕೋವಿಡ್ ಸೋಂಕು ತಡೆಗೆ ಔಷಧಿ ಮುಖ್ಯ

09:15 AM Jul 10, 2020 | Suhan S |

ಬಸವಕಲ್ಯಾಣ: ದೇಶ ಮಹಾಮಾರಿ ಕೋವಿಡ್ ವೈರಸ್‌ನಿಂದ ಮುಕ್ತಿಯಾಗಬೇಕಾದರೆ ಔಷಧಿ ತುಂಬಾ ಅವಶ್ಯಕವಾಗಿದೆ ಎಂದು ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಹೇಳಿದರು.

Advertisement

ತಾಲೂಕಿನ ಹಾರಕೂಡ ಮಠದಲ್ಲಿ ಡಿಸಿಸಿ ಬ್ಯಾಂಕ್‌, ಕಾಸ್ಕರ್ಡ್‌ ಮತ್ತು ಪಿಕೆಪಿಎಸ್‌ ಸಂಯುಕ್ತಾಶ್ರಯದಲ್ಲಿ ನಡೆದ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ನಿರ್ದೇಶನದಂತೆ ಮತ್ತು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾರ್ಗದರ್ಶನ ದಂತೆ ಆಶಾ ಕಾರ್ಯಕರ್ತೆಯರ ಸೇವೆ ಪರಿಗಣಿಸಿ ಬ್ಯಾಂಕ್‌ ವತಿಯಿಂದ ಧನ ಸಹಾಯ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ| ಚನ್ನವೀರ ಶಿವಾಚಾರ್ಯರು ಮಾತನಾಡಿ, ಮಹಾಮಾರಿ ಕೋವಿಡ್ ವೈರಸ್‌ ಹರಡುವುದು ಆರಂಭವಾಗಿನಿಂದಲೂ ಈವರೆಗೆ ಜಿಲ್ಲೆಯಲ್ಲಿ ಜೀವದ ಹಂಗು ತೊರೆದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತಿಯರನ್ನು ಗುರುತಿಸಿ ಪ್ರೋತ್ಸಾಹ ಧನ ಜತೆಗೆ ಪ್ರಶಸ್ತಿ ಪತ್ರ ನೀಡುತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ವಿಠuಲರೆಡ್ಡಿ ಎಡಮಲ್ಲೆ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಣಮಂತರಾವ ಪಾಟೀಲ,ಸಿಡಿಒ ಮಲ್ಲಿನಾಥ ಮಠಪತಿ, ಸೋಮಶೆಂಖರ ಬಿರಾದಾರ, ಸಂಗಮೇಶ, ಕೃಷ್ಣಮೂರ್ತಿ, ಡಿಒ ಬಸವರಾಜ ಇಲ್ಲಾಮಲ್ಲೆ, ವ್ಯವಸ್ಥಾಪಕ ರಘುನಾಥ ರೆಡ್ಡಿ, ಗೋವಿಂದರಾವ ಕುಲಕರ್ಣಿ, ಪಿಕೆಪಿಎಸ್‌ ಅಧ್ಯಕ್ಷ ಶಿವಶರಣಪ್ಪ ಜಮಾದಾರ, ಅಶೋಕ ಖೆಲಜಿ, ಶಿವಶಂಕರ ಬಿರಾದಾರ, ಗೋವಿಂದರಾವ ಹಾಗೂ ನಾಗರಾಳೆ ಇದ್ದರು. ವೀರಯ್ಯಸ್ವಾಮಿ ನಿರೂಪಿಸಿದರು. ಉಮೇಶ ಕುಂಬಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next