Advertisement

ಸೈನಿಕ ವಿಠ್ಠಲ್‌ ವೈದ್ಯಕೀಯ ಚಿಕಿತ್ಸೆಗೆ ಕೇಂದ್ರ ಸಚಿವ ಖೂಬಾ ಸ್ಪಂದನೆ

12:51 PM Jun 13, 2022 | Team Udayavani |

ಕಲಬುರಗಿ: ಆಳಂದ ತಾಲೂಕಿನ ಹೀರೊಳಿ ಗ್ರಾಮದ ಯೋಧ ವಿಠ್ಠಲ್‌ ಶಾಂತಪ್ಪಾ ವಾಡೆದ ಅವರ ಮನೆಗೆ ಭಾನುವಾರ ಕೇಂದ್ರ ಸಚಿವ ಭಗವಂತಾ ಖೂಬಾ ಭೇಟಿ ನೀಡಿ ಯೋಧನ ಆರೋಗ್ಯ ವಿಚಾರಿಸಿದರು.

Advertisement

ಅಲ್ಲದೆ, ಉಗ್ರರೊಂದಿಗೆ ಸೆಣಸಿ ಜೀವನ್ಮರಣದ ಹೋರಾಟದಲ್ಲಿ ತೋರಿದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಾಯಗೊಂಡಿರುವ ಸೈನಿಕನ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಕೂಡಲೇ ರಾಜ್ಯದ ಹಿರಿಯ ವೈದ್ಯರು ಮತ್ತು ಹಿರಿಯ ಸಿಐಎಸ್‌ ಎಫ್‌ ಅಧಿಕಾರಿಗಳೊಂದಿಗೆ ಸ್ಥಳದಿಂದಲೇ ದೂರವಾಣಿಯಲ್ಲಿ ಮಾತನಾಡಿ, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ವೇಳೆ ಹಾಜರಿದ್ದ ಕುಟುಂಬ ಸದಸ್ಯರು, ಸಹೋದರ ಕಾಶಿನಾಥ, ತಾಯಿಗೆ ಧೈರ್ಯ ತುಂಬಿದರು. ಆನಂದ ಪಾಟೀಲ, ಹರ್ಷಾನಂದ ಗುತ್ತೇದಾರ್‌, ಸಿದ್ದು ಪಾಟೀಲ ಸಕ್ಕರಗಾ, ಸಂಜಯ ಮಿಸ್ಕಿನ್‌ ಇತರರು ಇದ್ದರು.

ವಿಠ್ಠಲ ವಾಡೇದ್‌ನಂತಹ ಸೈನಿಕರು ನಮ್ಮ ದೇಶದ ಹೆಮ್ಮೆ ಮತ್ತು ನಮ್ಮ ಅಭಿಮಾನ. ಅವರಿಗೆ ಎದೆಗೆ ಮತ್ತು ಭುಜಕ್ಕೆ ಗುಂಡು ಬಿದ್ದಿದ್ದರೂ, ಗ್ರೆನೇಡ್‌ ಚೂರುಗಳು ದೇಹ ಹೊಕ್ಕಿದ್ದರೂ, ಉಸಿರು ಜತನ ಮಾಡಿಕೊಂಡು ಊರಿಗೆ ಬಂದಿರುವ ಅವರಿಗೆ ಉತ್ತಮ ಚಿಕಿತ್ಸೆ ಕೊಡಬೇಕಾದದ್ದು ಸರಕಾರ ಮತ್ತು ನಮ್ಮ ಹೊಣೆ. ಕೂಡಲೇ ಅಗತ್ಯ ಚಿಕಿತ್ಸೆ ಕೊಡಿಸಲು ಬದ್ಧ. -ಭಗವಂತ ಖೂಬಾ, ಕೇಂದ್ರ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next