Advertisement

ಮೆಡಿಕಲ್‌ ಟೂರಿಸಂ

06:00 AM Sep 23, 2018 | Team Udayavani |

ಭಾರತವು ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿದ್ದು, ವೈದ್ಯಕೀಯ ರಂಗವೂ ಇದಕ್ಕೆ ಹೊರತಾಗಿಲ್ಲ. ನವನವೀನ ತಂತ್ರಜ್ಞಾನ, ಕುಶಲತೆ ಮತ್ತು ನಿರ್ವಹಣೆಗಳ ಮೂಲಕ ಹೊಸ ಸಾಧ್ಯತೆಗಳತ್ತ ವೈದ್ಯಕೀಯ ರಂಗ ಮುಖ ಮಾಡುತ್ತಿದೆ. ನಮ್ಮಲ್ಲಿನ ಉತ್ತಮ ಗುಣಮಟ್ಟದ ವೈದ್ಯಕೀಯ ಸಂಸ್ಥೆಗಳಿಗೆ ಬರೀ ಭಾರತೀಯರು ಮಾತ್ರವಲ್ಲದೆ, ಚಿಕಿತ್ಸೆಗೆಂದು ಬರುವ ವಿದೇಶೀ ಯಾತ್ರಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕ್ಯಾನ್ಸರ್‌, ಹೃದಯ ಸಂಬಂಧಿಗಳಂತಹ ಗಂಭೀರ ಸಮಸ್ಯೆಗಳಿಗೆ ಪಡೆಯುವ ತುರ್ತು ಚಿಕಿತ್ಸೆ ಮಾತ್ರವಲ್ಲದೇ, ಆಯುರ್ವೇದ, ಯುನಾನಿ, ಸಿದ್ಧ ಪಂಚಕರ್ಮ, ನ್ಯಾಚುರೋಪತಿಯಂತಹ ಆಪತ್ಕಾಲೀನವಲ್ಲದ ಸಮಗ್ರ ಚಿಕಿತ್ಸಾ ಪದ್ಧತಿಗಳು ವಿದೇಶಿಯರನ್ನು ಆಕರ್ಷಿಸುತ್ತಿವೆ. ಚಿಕಿತ್ಸೆಗಾಗಿ ಭಾರತಕ್ಕೆ ಬರುವವರ ಸಂಖ್ಯೆ ಏರುಗತಿಯಲ್ಲಿದೆ. ಹೀಗೆ ಭಾರತ ಪ್ರವಾಸದ ಜೊತೆಗೆ ಸೂಚಿತ ಚಿಕಿತ್ಸೆಯನ್ನೂ ಪಡೆದುಕೊಳ್ಳುವುದನ್ನು “ಮೆಡಿಕಲ್‌ ಟೂರಿಸಂ’ (ಚಿಕಿತ್ಸಾ ಪರ್ಯಟನೆ) ಎನ್ನಲಾಗುತ್ತದೆ.

Advertisement

ಯಾವ್ಯಾವ ದೇಶಗಳಿಂದ?
ಅಮೆರಿಕ, ಬ್ರಿಟನ್‌ನಂತಹ ಪಾಶ್ಚಾತ್ಯ ದೇಶಗಳಿಂದ ಹಿಡಿದು, ಆಫ್ರಿಕ, ಮಧ್ಯಪೂರ್ವ ದೇಶಗಳ ಜೊತೆಗೆ, ನೆರೆಯ ಬಾಂಗ್ಲಾದೇಶ, ಅಫ‌ಘಾನಿಸ್ತಾನ, ಶ್ರೀಲಂಕಾಗಳಿಂದ ಬರುವವರ ಸಂಖ್ಯೆ ಹೆಚ್ಚುತ್ತಿದೆ. 

ಬ್ಯೂರೋ ಆಫ್ ಇಮಿಗ್ರೇಶನ್‌ನ ಪ್ರಕಾರ
2014ರಲ್ಲಿ 1.8 ಲಕ್ಷ 
2015ರಲ್ಲಿ 2.3 ಲಕ್ಷ
2016ರಲ್ಲಿ 4.27 ಲಕ್ಷ ಚಿಕಿತ್ಸಾ ಪ್ರವಾಸಿಗರು ಭಾರತಕ್ಕೆ ಆಗಮಿಸಿ¨ªಾರೆ.
2020ರ ವೇಳೆಗೆ ಈ ಸಂಖ್ಯೆಯು 24 ಲಕ್ಷ ಮುಟ್ಟುತ್ತದೆ ಮತ್ತು ಹೀಗೆ ಪ್ರತಿವರ್ಷ 30% ರಿಂದ 40% ವೃದ್ಧಿ ದಾಖಲಿಸಿ 2025ರ ವೇಳೆಗೆ 49 ಲಕ್ಷದ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಇನ್ನು, ಭಾರತಕ್ಕೆ ಆಗಮಿಸುವ ವಿದೇಶಿ ಯಾತ್ರಿಕರ ಸಂಖ್ಯೆಯಲ್ಲಿ ಅತಿ ಹೆಚ್ಚಿನವರು ಬಾಂಗ್ಲಾದೇಶದವರು. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಅಫ‌ಘಾನಿಸ್ತಾನ್‌, ಇರಾಕ್‌, ಓಮನ್‌ ಮತ್ತು ಮಾಲ್ಡೀವ್ಸ್‌ ನ ಯಾತ್ರಿಕರಿ¨ªಾರೆ. ಹೀಗೆ, ತಮ್ಮ ದೇಶದಲ್ಲಿ ಲಭ್ಯವಿಲ್ಲದ ಅಥವಾ ಚಿಕಿತ್ಸೆಗೆ ತಗಲುವ ವೆಚ್ಚ ಅವರ ಮಿತಿಗಿಂತ ಹೊರಗಿದ್ದರೆ ಅವರಿಗೆ ಭಾರತವೇ ಸೂಕ್ತ ಸ್ಥಳ.

ಉದಯೋನ್ಮುಖ ಉದ್ಯಮವಾಗಿ ಮೆಡಿಕಲ್‌ ಟೂರಿಸಂ
ಮೆಡಿಕಲ್‌ ಟೂರಿಸಂನಿಂದ ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೇ ಮೂಲಭೂತ ಸೌಕರ್ಯ, ಸೇವಾವಲಯಗಳಲ್ಲೂ ಪ್ರತ್ಯಕ್ಷ-ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಜೊತೆಗೆ ಸರ್ಕಾರದ ಬೊಕ್ಕಸವೂ ತುಂಬುತ್ತಿದೆ. ಪ್ರಸಕ್ತ ವರ್ಷ ಮೆಡಿಕಲ್‌ ಟೂರಿಸಂನಿಂದಾಗಿ ಉಂಟಾದ ವ್ಯಾಪಾರ ವಹಿವಾಟು 3 ಕೋಟಿ ಅಮೆರಿಕನ್‌ ಡಾಲರ್‌ ಮೀರಿದ್ದು, ಮುಂದಿನ ವರ್ಷ 9 ಕೋಟಿ ಅಮೆರಿಕನ್‌ ಡಾಲರ್‌ ತಲುಪುವ ನಿರೀಕ್ಷೆ ಇದೆ.

ಭಾರತಕ್ಕೆ ಪ್ರಾಶಸ್ಥ್ಯ ಏಕೆ?
ವಿದೇಶಿಯರು ಚಿಕಿತ್ಸೆಗಾಗಿ ಭಾರತವನ್ನು ಆಯ್ಕೆ ಮಾಡಿಕೊಳ್ಳಲು ಹಲವಾರು ಕಾರಣಗಳಿವೆ. ಅವುಗಳೆಂದರೆ,
1 ಕಡಿಮೆ ಖರ್ಚು:  ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗೆ ತಗಲುವ ವೆಚ್ಚ ಅದರ 10% ರಿಂದ 30% ಮಾತ್ರ. ಅಂದರೆ ಅದೇ ಗುಣಮಟ್ಟದ ಚಿಕಿತ್ಸೆ ಭಾರತದಲ್ಲಿ ಅತೀ ಅಗ್ಗವಾಗಿದೆ. 

Advertisement

2 ನುರಿತ ವೈದ್ಯರು ಮತ್ತು ಕಾಳಜಿ ವಹಿಸುವ ಸಿಬ್ಬಂದಿಗಳು: ಭಾರತದ ವೈದ್ಯರಿಗೆ ಜಾಗತಿಕವಾಗಿ ಒಳ್ಳೆಯ ಹೆಸರಿದೆ. ಗುಣಮಟ್ಟದ ವೈದ್ಯಕೀಯ ಶಿಕ್ಷಣ ಪೂರೈಸಿರುವ ನಮ್ಮ ವೈದ್ಯರು ವೃತ್ತಿಪರರು ಮತ್ತು ಸಹೃದಯಿಗಳೆಂದು ಗುರುತಿಸಲ್ಪಡುತ್ತಾರೆ. ಅಲ್ಲದೆ, ಸಿಬ್ಬಂದಿಯೂ ಸಹ ರೋಗಿಗಳ ಆರೈಕೆಯಲ್ಲಿ ತೋರುವ ಕಾಳಜಿ ಎಲ್ಲೆಡೆ ಮಾನ್ಯವಾಗಿದೆ. ಭಾರತ ಸರ್ಕಾರ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೆಡಿಕಲ್‌ ಟೂರಿಸಂನ ಉತ್ತೇಜನಕ್ಕೆ ತೆಗೆದುಕೊಂಡಿರುವ ಕ್ರಮಗಳು :  

1ಭಾರತದ ಐದು ಪ್ರಮುಖ ವಿಮಾನ ನಿಲ್ದಾಣಗಳಾದ ಮುಂಬೈ, ದೆಹಲಿ, ಚೆನ್ನೆ ç, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಫೆಸಿಲಿಟೇಶನ್‌ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಇಲ್ಲಿ ಮೆಡಿಕಲ್‌ ಟೂರಿಸಂನ ಪ್ರತಿನಿಧಿಗಳು, ಮೆಡಿಕಲ್‌ ಟೂರಿಸಂಗೆಂದು ಬರುವ ಯಾತ್ರಿಗಳಿಗೆ ಸಮಗ್ರ ಮಾಹಿತಿ ನೀಡುತ್ತಾರೆ.

2 ಕೆಲವು ದೇಶಗಳ ನಾಗರಿಕರಿಗೆ on arrival visa  ಸಿಗುವ ಹಾಗೆ ಅನುಕೂಲ ಕಲ್ಪಿಸಿದ್ದು, 24 ಗಂಟೆಗಳೊಳಗೆ ವೀಸಾ ಸಿಗುವ ರೀತಿ ವ್ಯವಸ್ಥೆ ಮಾಡಲಾಗುತ್ತಿದೆ.

3ಪ್ಯಾಕೇಜ್‌ ರೂಪದಲ್ಲಿ ಒಬ್ಬ ವ್ಯಕ್ತಿಯ ಏರ್‌ ಟಿಕೆಟ್‌ನಿಂದ ಹಿಡಿದು, ಚಿಕಿತ್ಸೆ, ಹೊಟೇಲ್‌ ರೂಮ್‌, ಬಾಡಿಗೆ ಕಾರಿನ ತನಕ ಎಲ್ಲಾ ರೀತಿಯ ಅಗತ್ಯತೆ ಪೂರೈಸುವ ವ್ಯವಸ್ಥೆ ಚಾಲ್ತಿಗೆ ಬರುತ್ತಿದೆ.

4ಚೀನಾ, ಜಪಾನ್‌, ಥಾಯ್‌ಲ್ಯಾಂಡ್‌ಗಳಿಗೆ ಹೋಲಿಸಿದರೆ ಭಾರತಕ್ಕೆ ಬರುವ ಪ್ರವಾಸಿಗರಿಗೆ ಭಾಷಾ ಸಮಸ್ಯೆ ಬಾಧಿಸದು. ಆದರೂ ಯುರೋಪಿಯನ್‌ ಯಾತ್ರಿಗಳಿಗೆ ಅನುಕೂಲವಾಗುವಂತೆ ಅವರವರ ಭಾಷೆಗಳಲ್ಲಿಯೇ ವ್ಯವಹರಿಸಲು ಸಂಬಂಧಪಟ್ಟ ವೈದ್ಯಕೀಯ ಸಂಸ್ಥೆಗಳು ದುಭಾಷಿ (translator)ಗಳನ್ನು ನೇಮಿಸುತ್ತಿವೆ.

ಒಟ್ಟಿನಲ್ಲಿ, ಮೆಡಿಕಲ್‌ ಟೂರಿಸಂನಲ್ಲಿ ಏಷ್ಯಾದಲ್ಲೇ ಭಾರತವು ಚೀನಾ, ಜಪಾನ್‌, ಥಾಯ್‌ಲ್ಯಾಂಡ್‌ನ‌ಂತಹ ದೇಶಗಳನ್ನು ಹಿಂದಿಕ್ಕಿ ಮುನ್ನುಗ್ಗುವ ಹಂತದಲ್ಲಿದ್ದು, ಅಂತರಾಷ್ಟ್ರೀಯ ಮನ್ನಣೆಯೂ ಪಡೆಯುತ್ತಿದೆ. ಮತ್ತಷ್ಟು ಯಾತ್ರಿಕ ಸ್ನೇಹಿ ಸೌಲಭ್ಯ, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಗಳಂತಹ ಪೂರಕ ಕ್ರಮಗಳನ್ನು ಕೈಗೊಂಡಲ್ಲಿ ಜಾಗತಿಕವಾಗಿ ಮತ್ತಷ್ಟು ಈ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸುವ ಅವಕಾಶ ಭಾರತಕ್ಕಿದೆ.

ರಾಮಕೃಷ್ಣ ಜೋಶಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next