Advertisement

ವೈದ್ಯಕೀಯ ತಂತ್ರಜ್ಞಾನ, ತ್ವರಿತ ಮೂಲಮಾದರಿ ಸೌಲಭ್ಯ

12:19 AM Jul 25, 2019 | Sriram |

ಮಂಗಳೂರು: ಯೇನಪೊಯ(ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾ ನಿಲಯ)ದಲ್ಲಿ ಮೊದಲ ವೈದ್ಯಕೀಯ ತಂತ್ರಜ್ಞಾನ ಮತ್ತು ತ್ವರಿತ ಮೂಲ ಮಾದರಿ (3ಡಿ ಪ್ರಿಂಟಿಂಗ್‌ ಮತ್ತು ಬಯೋಪ್ರಿಂಟಿಂಗ್‌) ಸೌಲಭ್ಯವನ್ನು ಬಿಐಆರ್‌ಎಸಿ ಅಡಿಯಲ್ಲಿ ನ್ಯಾಶನಲ್‌ ಬಯೋಫಾರ್ಮಾ ಮಿಷನ್‌ ನೀಡಿದೆ.

Advertisement

ಮುಂದಿನ ದಶಕದಲ್ಲಿ ಜಾಗತಿಕ ವಾಗಿ ಸ್ಪರ್ಧಾತ್ಮಕವಾಗಲಿರುವ ಮಟ್ಟಕ್ಕೆಲಸಿಕೆಗಳು, ಜೈವಿಕ ಹಾಗೂ ವೈದ್ಯಕೀಯಸಾಧನಗಳು ಮತ್ತು ರೋಗನಿರ್ಣಯ ಸೇರಿದಂತೆ ಜೈವಿಕ ಔಷಧಗಳಲ್ಲಿ ದೇಶದ ತಾಂತ್ರಿಕ ಮತ್ತು ಉತ್ಪನ್ನ ಅಭಿವೃದ್ಧಿ ಸಾಮರ್ಥ್ಯಗಳನ್ನು ರಚಿಸುವ ದೃಷ್ಟಿ ಯಿಂದ ರಾಷ್ಟ್ರೀಯ ಬಯೋಫಾರ್ಮಾ ಮಿಷನ್‌ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಅನುಷ್ಠಾನ ಸಂಸ್ಥೆಯಾದ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್‌ ಅಸಿಸ್ಟೆನ್ಸ್‌ ಕೌನ್ಸಿಲ್‌ಗ‌ಳ ಧನಸಹಾಯದೊಂದಿಗೆ ಯೇನಪೊಯ ದಲ್ಲಿ ವೈದ್ಯಕೀಯ ತಂತ್ರಜ್ಞಾನ ಮತ್ತು ಕ್ಷಿಪ್ರ ಮೂಲ ಮಾದರಿ ಸೌಲಭ್ಯವನ್ನು ಸ್ಥಾಪಿಸಲು ಅವಕಾಶ ನೀಡಿದೆ.

ವೈದ್ಯಕೀಯ ಸಾಧನಗಳ ಪರೀಕ್ಷೆ / ಪರಿಶೀ ಲನೆ / ಕ್ಷಿಪ್ರ ಮೂಲಮಾದರಿ / ಪೈಲಟ್‌ಬ್ಯಾಚ್‌ ಉತ್ಪಾದನೆಗಾಗಿ ವೈದ್ಯಕೀಯ ಸಾಧನಗಳ ಅಭಿವರ್ಧಕರ ಅಗತ್ಯಗಳನ್ನು ಈ ಕೇಂದ್ರವು ತಿಳಿಸುತ್ತದೆ. ಈ ಕಾರ್ಯಕ್ರಮದ ಉದ್ದೇಶವು ಪ್ರಾದೇಶಿಕ ಕೇಂದ್ರಗಳ ಸಾಮರ್ಥ್ಯ ಗಳನ್ನು ಹೆಚ್ಚಿಸುವುದರೊಂದಿಗೆ ಉತ್ಪಾದನೆಯ ಪ್ರಮಾಣ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿ ದಂತೆ ತಂತ್ರಜ್ಞಾನ ಗಳನ್ನು ಬಲಪಡಿಸುವು ದಾಗಿದೆ.

ಹಲ್ಲಿನ ಕ್ಷೇತ್ರದಲ್ಲಿ ಅನ್ವಯವಾಗುವಇಂಪ್ಲಾಂಟ್‌ ಸರ್ಜಿಕಲ್‌ ಗೈಡ್‌ಗಳತಯಾರಿಕೆ, ಹಲ್ಲಿನ ಅಂಗ ನ್ಯೂನತೆ ಸರಿ ಪಡಿಸುವ ಮೇಣದ ಮಾದರಿಗಳು, ಮ್ಯಾಕ್ಸಿಲೋ ಫೇಶಿಯಲ್‌ ಅಂಗ ನ್ಯೂನತೆ ಸರಿಪಡಿಸುವ ಮತ್ತು ಸಂಪೂರ್ಣ ದಂತದ್ರವ್ಯಗಳು, ಶ್ರವಣ ಸಾಧನ, ಜೈವಿಕವಾಗಿ ಸಕ್ರಿಯವಾಗಿರುವ ಇಂಪ್ಲಾಂಟ್‌ಗಳು ಸೇರಿದಂತೆ ಉತ್ಪನ್ನ ಗಳನ್ನು ವಿನ್ಯಾಸಗೊಳಿಸಲು ಮೂಲ ಮಾದರಿಯ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇತ್ತೀಚೆಗೆ ಮೂತ್ರ ಪಿಂಡ ಮತ್ತು ಕೃತಕ ಅಂಗಗಳ ಪುನರ್‌ ನಿರ್ಮಾಣದಲ್ಲಿ ಬಳಸಲು ಕಾರ್ಟಿಲೆಜ್‌ ಅಂಗಾಂಶಗಳ ಉತ್ಪಾದನೆಯಲ್ಲಿ ಬಯೋಪ್ರಿಂಟಿಂಗ್‌ ತಂತ್ರಜ್ಞಾನವು ಪ್ರಗತಿ ಸಾಧಿಸಿದೆ. ಯೇನಪೊಯದಲ್ಲಿ ಈ ಪ್ರಕ್ರಿಯೆ ಗಳನ್ನು ಅಂಗಾಂಗ ದಾನ ಹಾಗೂ ಕಸಿ ಮತ್ತು ಔಷಧೀಯ ಪರೀಕ್ಷೆ ಹಾಗೂ ಸೌಂದರ್ಯವರ್ಧಕ ಶಸ್ತ್ರ ಚಿಕಿತ್ಸೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ.

ಈ ಸೌಲಭ್ಯವು ಯೇನಪೊಯ ಟೆಕ್ನಾಲಜಿ ಇನುಬೇಟರ್ನ್ನ ಭಾಗವಾಗಿದ್ದು, ಯೇನಪೊಯ ಸಂಶೋ ಧನಾ ಕೇಂದ್ರದಲ್ಲಿದೆ. ಎಲ್ಲ ಹೊಸ ಆವಿಷ್ಕಾರಗಳು, ಸ್ಟಾರ್ಟ್‌ಅಪ್‌ಗ್ಳು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಈ ಸೌಲಭ್ಯ ಮುಕ್ತವಾಗಿದೆ ಎಂದು ವಿಶ್ವವಿದ್ಯಾನಿಲಯದ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next