Advertisement
ರಾಜ್ಯದಲ್ಲಿ ಸುಮಾರು 24,000 ಔಷಧಾಲಯಗಳಿದ್ದು, ಬೆಂಗಳೂರಿನಲ್ಲಿ 8000ಕ್ಕೂ ಹೆಚ್ಚು ಔಷಧ ಮಳಿಗೆಗಳಿವೆ ಎಂಬ ಅಂದಾಜು ಇದೆ. ಈ ಎಲ್ಲ ಮಳಿಗೆಗಳು ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿವರೆಗೆ ಬಂದ್ ಆಗಿರಲಿವೆ ಎಂದು ಅಖೀಲ ಭಾರತ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಸಂಸ್ಥೆಯ ಕರ್ನಾಟಕ ಘಟಕದ ಅಧ್ಯಕ್ಷ ಆರ್.ರಘುನಾಥರೆಡ್ಡಿ ಹೇಳಿದ್ದಾರೆ. ಇ- ಫಾರ್ಮಸಿ ವ್ಯವಸ್ಥೆ ವಿರುದ್ಧ ಹೋರಾಟಕ್ಕೆ ಬೃಹತ್ ಬೆಂಗಳೂರು ಕೆಮಿಸ್ಟ್ ಮತ್ತು ಡ್ರಗಿಸ್ಟ್ ಸಂಸ್ಥೆ ಬೆಂಬಲ ಸೂಚಿಸಿದ್ದರೂ ಮಳಿಗೆ ಬಂದ್ ಮಾಡದಿರಲು ನಿರ್ಧರಿಸಿದೆ.
Related Articles
ಈ ಹಿಂದೆ ಎರಡು ಬಾರಿ ಔಷಧ ಮಳಿಗೆಗಳನ್ನು ಬಂದ್ ಮಾಡಿ ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇ- ಫಾರ್ಮಸಿ ವ್ಯವಹಾರಕ್ಕೆ ಸಂಸ್ಥೆಯ ತೀವ್ರ ವಿರೋಧವಿದೆ. ಆದರೆ ಮುಷ್ಕರಕ್ಕೆ ಬದಲಿಗೆ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ. ಮಳಿಗೆಗಳನ್ನು ಬಂದ್ ಮಾಡಿದರೆ ನಾನಾ ಸಂಸ್ಥೆಗಳ ಸರಣಿ ಔಷಧಾಲಯಗಳು ವಿಶೇಷ ರಿಯಾಯ್ತಿ ನೀಡಿ ಗ್ರಾಹಕರನ್ನು ಸೆಳೆಯಲಿವೆ. ಆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಪುರಭವನದ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯಪಾಲರು, ಸಂಸದರು, ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹೋರಾಟ ಮುಂದುವರಿಸಲಾಗುವುದು. ಶುಕ್ರವಾರ ನಗರದಲ್ಲಿ ಶೇ.80ರಷ್ಟು ಮಳಿಗೆಗಳು ತೆರೆದಿರಲಿವೆ ಎಂದು ಬೃಹತ್ ಬೆಂಗಳೂರು ಕೆಮಿಸ್ಟ್ ಮತ್ತು ಡ್ರಗಿಸ್ಟ್ ಸಂಸ್ಥೆ ಅಧ್ಯಕ್ಷ ಎಂ.ಕೆ.ಮಾಯಣ್ಣ ತಿಳಿಸಿದರು.
Advertisement
ಅಗತ್ಯ ಪ್ರಮಾಣದಲ್ಲಿ ಔಷಧ ದಾಸ್ತಾನುಔಷಧಾಲಯಗಳ ಬಂದ್ ಕರೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಮತ್ತು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜೀವನಾವಶ್ಯಕ ಔಷಧಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ವತಿಯಿಂದ ಈ ಹಿಂದೆಯೇ ಸೂಚನೆ ನೀಡಲಾಗಿದೆ. ಎಲ್ಲಿಯೂ ಯಾವುದೇ ರೀತಿಯಲ್ಲಿ ಔಷಧ ಕೊರತೆ ಸೇರಿದಂತೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಔಷಧಾಲಯ ಸೇವೆ ಅಬಾಧಿತ
ರಾಜ್ಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಔಷಧಾಲಯಗಳು, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಕಾರ್ಪೋರೇಟ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಮಳಿಗೆಗಳಿಗೆ ಮುಷ್ಕರದಿಂದ ವಿನಾಯ್ತಿಯಿದ್ದು, ಅವು ಶುಕ್ರವಾರ ಎಂದಿನಂತೆ ತೆರೆದಿರುತ್ತವೆ ಎಂದು ಔಷಧ ನಿಯಂತ್ರಣ ಮಂಡಳಿ ತಿಳಿಸಿದೆ.