Advertisement
ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ವಿವಿಯ ಹೊಸ ಕ್ಯಾಂಪಸ್ ನಲ್ಲಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆಯಲ್ಲದೇ ವಿವಿಯಲ್ಲಿ ಮುಂದಿನ 2019-2020 ನೇ ಶೈಕ್ಷಣಿಕ ಸಾಲಿನಿಂದ ವೈದ್ಯಕೀಯ ಮತ್ತು ಸಂಯೋಜಿತ ಶಿಕ್ಷಣ ನೀಡಲು ತೀರ್ಮಾನಿಸಿದೆ ಎಂದು ಪ್ರಕಟಿಸಿದರು.
Related Articles
Advertisement
ಮಹಿಳಾ ಸಬಲೀಕರಣಕ್ಕಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಕಿಕೊಂಡಿರುವ ಸಂಪ್ರದಾಯಗಳನ್ನು ಮುಂದುವರಿಸಲಿದೆ.
ವಿಶೇಷವಾಗಿ ಇಂಜಿನಿಯರಿಂಗ್ ಮತ್ತು ಮ್ಯಾನೇಜಮೆಂಟ್ ಕೋರ್ಸಗಳನ್ನು ಆಯ್ಕೆ ಮಾಡಿಕೊಳ್ಳುವ ಮಹಿಳಾ ವಿದ್ಯಾರ್ಥಿಗಳಿಗಾಗಿ ಶರಣಬಸವ ವಿಶ್ವವಿದ್ಯಾಲಯವು ಆಡಳಿತ ಮಂಡಳಿಯ ಸೀಟುಗಳನ್ನು ಸರ್ಕಾರಿ ಕೋಟಾದಲ್ಲಿ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಿ ಕೇವಲ ಹಣ ಗಳಿಕೆಯೇ ತಮ್ಮ ಉದ್ದೇಶ ಎಂದು ಸ್ಥಾಪಿಸಲ್ಪಟ್ಟ ದೇಶದ ಇತರೆ ಖಾಸಗಿ ವಿಶ್ವವಿದ್ಯಾಲಯಗಳಂತಲ್ಲದೇ, ಶರಣಬಸವ ವಿಶ್ವವಿದ್ಯಾಲಯವು ಮಾನವಿಯತೆಯಿಂದ ಸಮಾಜಕ್ಕೆ ಪೂರ್ಣ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸಮಾಜ ವಿಜ್ಞಾನಗಳ ಜೊತೆ ಇಂಜಿನಿಯರಿಂಗ್ ಶಿಕ್ಷಣವನ್ನು ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದೆ ಎಂದರು.
ಕುಲಪತಿಗಳಾದ ಡಾ| ನಿರಂಜನ ನಿಷ್ಟಿ, ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಸಹ ಕುಲಪತಿಗಳಾದ ಪ್ರೊ| ವಿ.ಡಿ. ಮೈತ್ರಿ ಮತ್ತು ಎನ್.ಎಸ್. ದೇವರಕಲ್, ಕುಲಸಚಿವರಾದ ಪ್ರೊ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವರಾದ ಡಾ| ಎಸ್.ಎಚ್. ಹೊನ್ನಳ್ಳಿ, ಡೀನ್ ಡಾ| ಲಿಂಗರಾಜ ಶಾಸ್ತ್ರೀ ಹಾಗೂ ಹಣಕಾಸು ಅಧಿಕಾರಿಗಳಾದ ಶಿವಲಿಂಗಪ್ಪ ಅವರು ನಿಗದಿತ ಅವಧಿಯನ್ನು ಮೀರಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಆರಂಭವಾದ ವಿವಿಯು ಮೊದಲ ಹಂತವಾಗಿ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಿ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿತ್ತು. ಮುಂದಿನ ದಿನಗಳಲ್ಲಿ ಶರಣಬಸವ ವಿಶ್ವವಿದ್ಯಾಲಯದ ಅಡಿಯಲ್ಲಿ ಇಂಜಿನಿಯರಿಂಗ್, ಮ್ಯಾನೇಜಮೆಂಟ್, ಕಂಪ್ಯೂಟರ್ ಅಪ್ಲಿಕೇಶನ್ ಸ್ನಾತಕ ಪದವಿ ಕೋರ್ಸ್‌ಗಳಾದ ಬಿ.ಇ, ಬಿಬಿಎಂ, ಬಿಸಿಎ ಆರಂಭಿಸಲು ನಿರ್ಧರಿಸಿದೆ. ಸಧ್ಯ ಸ್ನಾತಕೋತ್ತರ ಪದವಿಯಲ್ಲಿ ಇಂಗ್ಲಿಷ್, ಕನ್ನಡ, ಭೌತಶಾಸ್ತ್ರ ಗಣಿತಶಾಸ್ತ್ರ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸಂಗೀತ ಮತ್ತು ಕಲೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕಂಪ್ಯೂಟರ್ ನೆಟವರ್ಕ್,ಡಿಜಿಟಲ್ ಇಲೆಕ್ಟ್ರಾನಿಕ್ಸ್, ಡಿಜಿಟಲ್ ಕಮ್ಯೂನಿಕೇಶನ್, ಸ್ಟ್ರಕ್ಚರಲ್ ಇಂಜಿನಿಯರಿಂಗ್, ಮಶೀನ್ ಡಿಜೈನ್, ನ್ಯಾನೊ ಟೆಕ್ನಾಲಜಿ, ಎಂ.ಕಾಂ, ಎಂಬಿಎ, ಮಾಸ್ಟರ್ ಆಫ್ ಟೂರಿಸಂ, ಮತ್ತು ಇತರೆ ಕೋರ್ಸಗಳು ಕಾರ್ಯನಿರ್ವಹಿಸುತ್ತಿವೆ. ಸಂಶೋಧನೆಯ ಭಾಗವಾಗಿ ನೂತನ ಬೋಧನಾ ವಿಧಾನವನ್ನು ಪರಿಚಯಿಸಲಾಗಿದ್ದು. ವಿಶ್ವವಿದ್ಯಾಲಯವು ಮೂರು ಗಂಟೆಯ ಬೋಧನಾ ಅವಧಿ ಪರಿಚಯಿಸಿ ವಿದ್ಯಾರ್ಥಿಗಳು ತರಗತಿಯ ಕೊಠಡಿಯಲ್ಲಿ ಆ ದಿನ ಏನು ಕಲಿತಿದ್ದಾರೆ ಎಂದು ಅರಿಯಲು ಕಲಿತದ್ದನ್ನು ಬರೆಯಿಸುವ ಮೂಲಕ ಬರಹಗಾರಿಕೆಗೆ ಒತ್ತು ನೀಡಲಾಗಿದೆ. ಇದು ದೇಶವ್ಯಾಪಿ ಖ್ಯಾತಿ ಪಡೆಯುವಂತಾಗಿದೆ ಎಂದು ಹೇಳಿದರು. ಶರಣಬಸವ ವಿಶ್ವವಿದ್ಯಾಲಯವು ಸಂಶೋಧನಾ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ನಿರ್ಧರಿಸಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಭಾಷೆ, ಮಾನವಿಯತೆ, ಸಮಾಜ ವಿಜ್ಞಾನ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವ್ಯವಹಾರ ಅಧ್ಯಯನ, ವಿಜ್ಞಾನ ಹಾಗೂ ಅದರ ಸಂಬಂಧ ವಿಷಯಗಳ ವಿಭಾಗದಲ್ಲಿಯೂ ಸಂಶೋಧನೆಗೆ ಅವಕಾಶ ದೊರೆಯಲಿದೆ ಎಂದು ತಿಳಿಸಿದರು ಶೈಕ್ಷಣಿಕವಾಗಿ ಹಿಂದುಳಿದ ಹೈಕ ಪ್ರದೇಶವನ್ನು ಶಿಕ್ಷಣದ ಸಂಕೀರ್ಣವನ್ನಾಗಿ ಪರಿವರ್ತಿಸಿದ್ದ ಶ್ರೇಯಸ್ಸು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ಸಲ್ಲುತ್ತದೆ. ಮಾಂಟೇಸ್ಸರಿ ಶಿಕ್ಷಣದಿಂದ ಹಿಡಿದು ಸಂಶೋಧನಾ
ಚಟುವಟಿಕೆಗಳ ವರೆಗೆ ಶಿಕ್ಷಣ ಒದಗಿಸಿ, ನಿರಂತರ ಸರಣಿ ಶಾಲೆ-ಕಾಲೇಜುಗಳನ್ನು ಆರಂಭಿಸಿ ಖಾಸಗಿ ವಿಶ್ವವಿದ್ಯಾಲಯ ಪ್ರಾರಂಭಿಸಿ ಬಾನೆತ್ತರದ ವರೆಗೆ ತನ್ನ ಶೈಕ್ಷಣಿಕ ಕಾರ್ಯ ಮುಂದುವರಿಸಿದೆ.
ಡಾ| ಶರಣಬಸವಪ್ಪ ಅಪ್ಪಾ, ಕುಲಾಧಿಪತಿಗಳು, ಶರಣಬಸವ ವಿವಿ