Advertisement

ಕ್ಯಾನ್ಸರ್‌ ಪೀಡಿತೆಗೆ ಸಂಘಟನೆಗಳಿಂದ ಧನಸಹಾಯ

03:55 AM Nov 05, 2018 | Team Udayavani |

ಮಂಜೇಶ್ವರ: ಮೀಟಿಂಗ್‌ ಪಾಯಿಂಟ್‌ ಚಾರಿಟಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಮತ್ತು  ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಕೊಡ್ಲಮೊಗರು ಇವುಗಳ ಜಂಟಿ ಆಶ್ರಯದಲ್ಲಿ  ಸಮಾನ ಮನಸ್ಕರ ಯುವಕರ ತಂಡವು ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೌಡುಗೋಳಿ ಬಳಿಯ ತೋಕೆ ನಿವಾಸಿ ಕ್ಯಾನ್ಸರ್‌ ರೋಗದಿಂದ ತೀವ್ರವಾಗಿ ಬಳಲುತ್ತಿರುವ ಗೀತಾ ಅವರಿಗೆ ಚಿಕಿತ್ಸಾ ಸಹಾಯ ಧನವನ್ನು ಒದಗಿಸಿತು.

Advertisement

ಕೂಲಿ ಕಾರ್ಮಿಕರಾದ ಹರಿಶ್ಚಂದ್ರ (09164092820) ಅವರ ಪತ್ನಿಯಾಗಿರುವ ಗೀತಾ ಅವರು ಕಳೆದ ಕೆಲವು ಸಮಯಗಳಿಂದ ಮಾರಕ ಕ್ಯಾನ್ಸರ್‌ ರೋಗದೊಂದಿಗೆ ಹೋರಾಡುತ್ತಿದ್ದು, ಅವರ ಚಿಕಿತ್ಸೆಗಾಗಿ ಕೈಯಲ್ಲಿದ್ದ ಹಣವನ್ನೆಲ್ಲ ವ್ಯಯಿಸಿ ಕೊನೆಗೆ ಕುಟುಂಬವು ಸಾಲದ ಸುಳಿಗೆ ಸಿಲುಕಿತು. ಪುತ್ರನ ವಿದ್ಯಾಭ್ಯಾಸವು ಇದೇ ಕಾರಣದಿಂದ ಮೊಟಕುಗೊಂಡಿತು.

ಗೀತಾ ಅವರಿಗೆ ಸೂಕ್ತ  ಚಿಕಿತ್ಸೆ ಒದಗಿಸಿದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವರೆಂಬ ವೈದ್ಯರ ಭರವಸೆಯ ಹಿನ್ನೆಲೆಯಲ್ಲಿ ಸಮಾಜ ಸೇವಕರಾದ ಹಮೀದ್‌ ಬೋರ್ಕಳ (09447761654) ಅವರ ಮುಂದಾಳುತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಾಟ್ಸ್‌ ಆ್ಯಪ್‌ ಗ್ರೂಪ್‌ನ ಮುಖಾಂತರ ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸಿ ಚಿಕಿತ್ಸಾ ಧನ ಸಂಗ್ರಹಕ್ಕೆ ನಾಂದಿ ಹಾಡಲಾಯಿತು. ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ಲಭಿಸಿದ್ದು, ಅಲ್ಪ ಕಾಲಾವಧಿಯಲ್ಲಿ  63,000 ರೂ. ಗಳ ಮೊತ್ತ ಸಂಗ್ರಹವಾಗಿದೆ.

ಗೀತಾ ಅವರ ಚಿಕಿತ್ಸೆಗಾಗಿ ಪ್ರತೀ ತಿಂಗಳು ಸುಮಾರು 25,000 ರೂ. ಗಳು ಬೇಕಾಗಿದ್ದು, ಸದ್ಯ ಯಾವುದೇ ವರಮಾನವಿಲ್ಲದೆ ದೈನಂದಿನ ವೆಚ್ಚಗಳಿಗೂ ಪರದಾಡುತ್ತಿರುವ ಕುಟುಂಬಕ್ಕೆ ಉದಾರ ಮನಸ್ಕರ ಸಹಾಯ ಅತ್ಯಗತ್ಯವಾಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಸಂದೇಶಕ್ಕೆ ಸ್ಪಂದಿಸಿದ ದೇಶ ವಿದೇಶಗಳಲ್ಲಿರುವ ಸಹೃದಯಿಗಳು ನೀಡಿದ ಮೊತ್ತವನ್ನು ಗೀತಾ ಅವರಿಗೆ ಹಮೀದ್‌ ಬೋರ್ಕಳ, ಉಮ್ಮರ್‌ ಬೋರ್ಕಳ, ಮನೋಜ್‌ ಶೆಟ್ಟಿ  ಕೊಡ್ಲಮೊಗರು, ಟಿ.ಎಂ. ಮೂಸ ಅವರು ಹಸ್ತಾಂತರಿಸಿದರು.

ಧನ ಸಹಾಯ ನೀಡಲು ಮನವಿ: ಕ್ಯಾನ್ಸರ್‌ ಪೀಡಿತೆ ಗೀತಾ ಅವರಿಗೆ ಹೆಚ್ಚಿನ ಚಿಕಿತ್ಸೆ ತುರ್ತು ಅಗತ್ಯವಿದ್ದು, ಸಹೃದಯರ ಉದಾರ ಧನ ಸಹಾಯ ಅನಿವಾರ್ಯವಾಗಿದೆ. ನಮ್ಮ ಸಹಾಯದಿಂದ ಒಂದು ಕುಟುಂಬದಲ್ಲಿ ಸಂತೋಷ ಮತ್ತು  ನೆಮ್ಮದಿ ತರಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ  ಪುಣ್ಯ ಕಾರ್ಯ ಬೇರೆ ಇರಲಾರದು. ಸಹೃದಯರು ಈ ಕೆಳಗಿನ ಅಕೌಂಟ್‌ ನಂಬರ್‌ಗೆ ತಮ್ಮ  ಕೈಲಾದ ಮೊತ್ತವನ್ನು  ನೀಡಬೇಕೆಂದು ವಿನಂತಿಸಲಾಗಿದೆ. 

Advertisement

ಗೀತಾ ಅವರ ಖಾತೆ ನಂಬರ್‌ ವಿವರ: ಸಿಂಡಿಕೇಟ್‌ ಬ್ಯಾಂಕ್‌, ವರ್ಕಾಡಿ ಶಾಖೆ, ಅಕೌಂಟ್‌ ನಂಬರ್‌ – 42282200148894, ಐಎಫ್‌ಎಸ್‌ಸಿ ಕೋಡ್‌ – SYNB 0004228 ಈ ಬ್ಯಾಂಕ್‌ ಖಾತೆಗೆ ಹಣ ಪಾವತಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next