Advertisement

ವೈದ್ಯಕೀಯ ಶಿಕ್ಷಣ ಈ ವರ್ಷ ದುಬಾರಿ

03:45 AM Jun 29, 2017 | Harsha Rao |

ಬೆಂಗಳೂರು: ಪ್ರಸಕ್ತ ಸಾಲಿನಿಂದ ವೈದ್ಯಕೀಯ ಶಿಕ್ಷಣದ ಪ್ರವೇಶ ಶುಲ್ಕದಲ್ಲಿ ಶೇ.10ರಷ್ಟು ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಖಾಸಗಿ ವೈದ್ಯ ಕಾಲೇಜು ಸಂಘಟನೆಗಳೊಂದಿಗೆ ಬುಧವಾರ ವಿಧಾನಸೌಧದಲ್ಲಿ ನಡೆದ ಸಭೆ ಬಳಿಕ ಅವರು ಮಾತನಾಡಿದರು. ನೀಟ್‌ ಫ‌ಲಿತಾಂಶ ಪ್ರಕಟವಾಗಿದ್ದು, ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ರಾಜ್ಯಕ್ಕೆ ಕಟ್‌ಆಫ್ ಮಾರ್ಕ್ಸ್ ನೀಡಿದ ತರುವಾಯ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ
ಆರಂಭವಾಗಲಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗೆ ಈ ವರ್ಷದಿಂದ ಶೇ.10ರಷ್ಟು ಶುಲ್ಕ ಹೆಚ್ಚಳವಾಗಲಿದೆ. ಹಾಗೆಯೇ, ಮುಂದಿನ ಮೂರು ವರ್ಷಗಳ ಕಾಲ ಶೇ.10ರಷ್ಟು ಶುಲ್ಕ ಏರಿಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಶೀಘ್ರದಲ್ಲಿಯೇ ಈ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲೇ ಶುಲ್ಕ ಕಡಿಮೆ: ಕಳೆದ ನಾಲ್ಕು ವರ್ಷದಿಂದ ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಶುಲ್ಕ ಏರಿಕೆಯಾಗಿಲ್ಲ. ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ವೈದ್ಯಕೀಯ ಪ್ರವೇಶ ಶುಲ್ಕ ಕಡಿಮೆಯಿದೆ. ಇದರೊಂದಿಗೆ ವೈದ್ಯಕೀಯ ಕಾಲೇಜುಗಳನ್ನು ನಡೆಸಲು ಕಷ್ಟವಾಗುತ್ತಿರುವುದರಿಂದ ಶುಲ್ಕ ಏರಿಸುವಂತೆ ಖಾಸಗಿ ಆಡಳಿತ ಮಂಡಳಿ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷಗಳ ಕಾಲ ಶೇ.10ರಷ್ಟು ಏರಿಕೆ ಮಾಡಲು
ನಿರ್ಧರಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಕಳೆದ ವರ್ಷ ಸರ್ಕಾರಿ ವೈದ್ಯ ಸೀಟಿಗೆ 70 ಸಾವಿರ ಹಾಗೂ ಖಾಸಗಿ ಪ್ರವೇಶ ಶುಲ್ಕ 5.85 ಲಕ್ಷ ರೂ.ಶುಲ್ಕ ವಿಧಿಸಲಾಗಿತ್ತು. ಶೇ.10ರಷ್ಟು ಹೆಚ್ಚಳದಿಂದ ಈ ವರ್ಷ ಸರ್ಕಾರಿ ಕಾಲೇಜು ಪ್ರವೇಶ ಶುಲ್ಕ 77 ಸಾವಿರ ಹಾಗೂ ಖಾಸಗಿ ಸೀಟಿಗೆ 6.35 ಲಕ್ಷ ರೂ.ಶುಲ್ಕವಾಗಲಿದೆ. ಎನ್‌ಆರ್‌ಐ ಕೋಟಾದಡಿಯಲ್ಲಿರುವ ಸೀಟುಗಳ ಶುಲ್ಕವನ್ನು ಖಾಸಗಿ ಆಡಳಿತ ಮಂಡಳಿಗಳು ನಿರ್ಧರಿಸಲಿವೆ.

2020-21ರ ವೇಳೆಗೆ ಸರ್ಕಾರಿ ಕೋಟಾದ ಸೀಟಿಗೆ 1 ಲಕ್ಷ ಹಾಗೂ ಖಾಸಗಿ ಸೀಟಿಗೆ 10 ಲಕ್ಷವಾಗಲಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ಶುಲ್ಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 16,000 ರೂ. ಶುಲ್ಕ ಇರಲಿದೆ.

Advertisement

3500 ವೈದ್ಯ ಸೀಟುಗಳು ಲಭ್ಯ
ಈ ಬಾರಿ ರಾಜ್ಯದಲ್ಲಿ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು 100 ರಿಂದ 150ಕ್ಕೆ ಹಾಗೂ ಕಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ 150 ರಿಂದ 200ಕ್ಕೆ ಏರಿಸಲಾಗಿದೆ. ಇದರಿಂದ ಹೆಚ್ಚುವರಿ 350 ಸರ್ಕಾರಿ ಸೀಟುಗಳು ಲಭ್ಯವಾಗಿದೆ. ಈ ವರ್ಷ 3500 ವೈದ್ಯಕೀಯ ಸೀಟು ಹಂಚಿಕೆಗೆ ಸಿಗಲಿದೆ. ರಾಜ್ಯದಲ್ಲಿರುವ ವೈದ್ಯ ಸೀಟುಗಳನ್ನು ನೀಟ್‌ ರ್‍ಯಾಂಕಿಂಗ್‌ ಮೂಲಕ ಕೌನ್ಸೆಲಿಂಗ್‌ ನಡೆಸಲಾಗುವುದು. ಡೀಮ್ಡ್ ವಿಶ್ವವಿದ್ಯಾಲಯದ ಸೀಟುಗಳನ್ನು ಡಿಎಚ್‌ಎಚ್‌ಎಸ್‌ ಕೌನ್ಸೆಲಿಂಗ್‌ ಮೂಲಕ ವಿತರಿಸಲಾಗುವುದು.

ಎಲ್ಲೆಲ್ಲಿ ಎಷ್ಟು ಸೀಟುಗಳು?
ಸರ್ಕಾರಿ ಕಾಲೇಜಿನಲ್ಲಿ 2,550, ಇಎಸ್‌ಐನಲ್ಲಿ 200, ನಾನ್‌ ಮೈನಾರಿಟಿ 2,015, ಮೈನಾರಿಟಿ 2,200 ಹಾಗೂ
ಡೀಮ್ಡ್ ವಿವಿಯ 1,630 ಸೀಟು ಸೇರಿ ಒಟ್ಟು 58 ಕಾಲೇಜಿನಲ್ಲಿ 8,595 ಸೀಟು ಲಭ್ಯವಿದೆ. ಆಲ್‌ ಇಂಡಿಯಾ
ಕೋಟಾದಡಿ 414 ಹಾಗೂ ಎನ್‌ಆರ್‌ಐ ಕೋಟಾದಡಿ 843 ಸೀಟು ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next