Advertisement

ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಕೊಡುಗೆ

07:14 PM Jul 26, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎರಡುವರ್ಷ ಪೂರೈಸಿದ್ದು, ಜಿಲ್ಲೆಗೆ ಹಲವು ಯೋಜನೆಗಳನ್ನುಜಾರಿ ಗೊಳಿಸಲಾಗಿದೆ.

Advertisement

ರಾಜ್ಯ ಆರೋಗ್ಯ, ಕುಟುಂಬಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ವಿಶೇಷಕಾಳಜಿಯಿಂದ ಅಭಿವೃದ್ಧಿ ಕಾಮಗಾರಿಗಳು ಭರದಿಂದನಡೆಯುತ್ತಿವೆ.ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿಎಂದು ಹೋರಾಟ ಮಾಡಿ ಜಿಲ್ಲಾ ಉಸ್ತುವಾರಿ ಸಚಿವಡಾ.ಕೆ.ಸುಧಾಕರ್‌, ವೈದ್ಯಕೀಯ ಕಾಲೇಜುಮಂಜೂರು ಮಾಡಿಸಿ, ಕಾಮಗಾರಿಯೂ ವೇಗವಾಗಿನಡೆಯುತ್ತಿದೆ.

ಈಗಾಗಲೇ ಸಚಿವರು, ಜಿಲ್ಲಾಧಿ ಕಾರಿಆರ್‌.ಲತಾ ಮತ್ತು ಅ ಧಿಕಾರಿಗಳು ಕಾಮಗಾರಿಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,ಗುಣಮಟ್ಟ ಕಾಪಾಡಿಕೊಂಡು ನಿಗ ದಿತಅವಧಿ ಯಲ್ಲಿ ಕಾಮಗಾರಿಪೂರ್ಣಗೊಳಿಸಲು ಗುತ್ತಿಗೆದಾರರಿಗೆಸೂಚನೆ ನೀಡಿದ್ದಾರೆ.

ಮಾದರಿ ಆರೋಗ್ಯ ಕೇಂದ್ರ: ಜಿಲ್ಲೆಯಲ್ಲಿಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ಸೇವೆಒದಗಿಸುವ ದೃಷ್ಟಿಯಿಂದ ಈಗಾಗಲೇ ಪ್ರತಿಯೊಂದುವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಮಾದರಿಆರೋಗ್ಯ ಕೇಂದ್ರವನ್ನು ನಿರ್ಮಿಸಲು ಕ್ರಮಕೈಗೊಂಡಿದ್ದಾರೆ. ಅಲ್ಲದೆ, ಮತ್ತೂಂದು ಆರೋಗ್ಯಕೇಂದ್ರವನ್ನು ಮಾದರಿಯಾಗಿಅಭಿವೃದ್ಧಿಗೊಳಿಸಲು ಪ್ರಸ್ತಾವನೆಸಲ್ಲಿಸಲು ಈಗಾಗಲೇ ಅ ಧಿಕಾರಿಗಳಿಗೆಜಿಲ್ಲಾ ಉಸ್ತುವಾರಿ ಸಚಿವರುಆದೇಶ ನೀಡಿದ್ದಾರೆ.

ಅದರಂತೆ ಪ್ರಥಮ ಹಂತದಲ್ಲಿಒಂದೊಂದು ಕ್ಷೇತ್ರದಲ್ಲಿ ಒಂದು ಪ್ರಾಥಮಿಕಆರೋಗ್ಯ ಕೇಂದ್ರವನ್ನು ಅಭಿವೃದ್ಧಿಗೊಳಿಸುವ ಜೊತೆಗೆದ್ವಿತೀಯ ಹಂತದಲ್ಲಿ 2ನೇ ಪ್ರಾಥಮಿಕ ಆರೋಗ್ಯಕೇಂದ್ರ ಮಾದರಿಯಾಗಿ ಅಭಿವೃದ್ಧಿಗೊಳಿಸಲುಯೋಜನೆ ರೂಪಿಸಲಾಗಿದೆ.

Advertisement

ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ:ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರ ಪ್ರಭಾವದಿಂದ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಈಗಾಗಲೇ ಮೂರುಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾದರಿಯಾಗಿಅಭಿವೃದ್ಧಿಗೊಳಿಸುವ ಜೊತೆಗೆ ಮುಂದಿನ ಹಂತದಲ್ಲಿಮತ್ತೆ ಮೂರು ಕೇಂದ್ರ ಅಭಿವೃದ್ಧಿಗೊಳಿಸಲುಇಲಾಖೆಯ ಅ ಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಸಾರ್ವಜನಿಕಆಸ್ಪತ್ರೆಗಳಲ್ಲಿ ನಾಗರಿಕರಿಗೆ ಉತ್ತಮ ಆರೋಗ್ಯಸೇವೆ ಒದಗಿಸಲು ಸರ್ಕಾರ ವಿಶೇಷ ಆದ್ಯತೆ ನೀಡಿದೆ.

ಎಂ..ತಮೀಮ್ಪಾಷ

Advertisement

Udayavani is now on Telegram. Click here to join our channel and stay updated with the latest news.

Next