Advertisement

ಪಾಕಿಸ್ತಾನ ಮೂಲದವರಿಗೆ ವೈದ್ಯ ವೃತ್ತಿ ಅವಕಾಶ: ಎನ್‌ಎಂಸಿ

11:15 PM Aug 06, 2022 | Shreeram Nayak |

ಹೊಸದಿಲ್ಲಿ: ದೌರ್ಜನ್ಯ, ಹಿಂಸೆಗಳಿಂದ ನಲುಗಿ ಪಾಕಿಸ್ತಾನದಿಂದ ಭಾರತಕ್ಕೆ ಪಲಾಯನ ಮಾಡಿರುವ ಆ ದೇಶದ ಅಲ್ಪಸಂಖ್ಯಾತ ಸಮುದಾಯಗಳ ವೈದ್ಯ ಪದವೀಧರರಿಗೆ ಭಾರತದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಪ್ರಕಟಣೆ ತಿಳಿಸಿದೆ.

Advertisement

ಎನ್‌ಎಂಸಿಯ ವೈದ್ಯ ವ್ಯಾಸಂಗ ಸ್ನಾತಕ ಪದವಿ ಮಂಡಳಿ (ಯುಎಂಇಬಿ) ವತಿಯಿಂದ ಹೊರಡಿಸಲಾಗಿರುವ ಈ ಪ್ರಕಟಣೆಯಲ್ಲಿ, “”2014ರ ಡಿ. 31ರೊಳಗಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ಮೂಲದ ಅಲ್ಪಸಂಖ್ಯಾತ ಸಮುದಾಯದ ವೈದ್ಯ ಪದವೀಧರರಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತದೆ. ಈ ಕುರಿತಂತೆ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ” ಎಂದು ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next