Advertisement

ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ವೃತ್ತಿ ಸವಾಲಿನ ಕೆಲಸ

02:56 PM Oct 03, 2018 | |

ಬಳ್ಳಾರಿ: ಹಿಂದೆ ಸೇವೆಯನ್ನಾಗಿ ಪರಿಗಣಿಸುತ್ತಿದ್ದ ವೈದ್ಯ ವೃತ್ತಿ ಇಂದು ಉದ್ಯಮವಾಗಿ ಬದಲಾವಣೆಯಾಗಿದ್ದರೂ, ವೈದ್ಯ ವೃತ್ತಿಯನ್ನು ಸೇವೆಯೆಂದು ಪರಿಗಣಿಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಿದೆ ಎಂದು ಸಿರುಗುಪ್ಪದ ವೈದ್ಯ ಡಾ| ಮಧುಸೂದನ್‌ ಕಾರಿಗನೂರು ಹೇಳಿದರು.

Advertisement

ನಗರದ ಪೊಲೀಸ್‌ ಜಿಮ್‌ಖಾನಾದಲ್ಲಿ ಸನ್ಮಾರ್ಗ ಗೆಳೆಯರ ಬಳಗ, ಜಿಮ್‌ಖಾನಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರವೂ ಉದ್ಯಮವಾಗಿ ಬದಲಾವಣೆಯಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೂ, ಹಿಂದಿನಂತೆಯೇ ಇಂದು ಸಹ ವೈದ್ಯಕೀಯ ವೃತ್ತಿಯನ್ನು ಸೇವೆಯೆಂದು ಪರಿಗಣಿಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಿದೆ. ನಾನು ಸಹ ವೈದ್ಯನಾಗಿ ಸಮಾಜದೊಂದಿಗೆ ಗುರುತಿಸಿಕೊಂಡಿದ್ದೇ ಇಂದು
ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿಯಿಂದ ಚುನಾಯಿತಗೊಳ್ಳಲು ಪ್ರಮುಖ
ಕಾರಣ ಎಂದು ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂದ ವೈದ್ಯವೃತ್ತಿಯೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅದು ನನ್ನ ಮನಸ್ಸು ತೃಪ್ತಿಗಾಗಿ ಮಾಡುತ್ತಿರುವ ಅಳಿಲು ಸೇವೆಯಷ್ಟೇ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ವೈದ್ಯ ವೃತ್ತಿಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ವೈದ್ಯರ ನಿಯಂತ್ರಣಕ್ಕಾಗಿ ಸರ್ಕಾರಗಳು ಜಾರಿಗೆ ತಂದಿರುವ ಹಲವು ಕಾನೂನು ಚೌಕಟ್ಟುಗಳ ನಡುವೆ ಕೆಲಸ ನಿರ್ವಹಿಸುವುದು ವೃತ್ತಿ ಬದುಕಿನಲ್ಲಿ ಸವಾಲು, ಸಂಕಷ್ಟಗಳಿಗೆ ಈಡು ಮಾಡಿದೆ ಎಂದರು.

Advertisement

ಬಳಿಕ ಸನ್ಮಾರ್ಗ ಗೆಳೆಯರ ಬಳಗ, ಪೊಲೀಸ್‌ ಜಿಮ್‌ಖಾನಾ, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಘಟಕ ಸೇರಿದಂತೆ ವಿವಿಧ ಹತ್ತಾರು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಡಾ| ಮಧುಸೂದನ್‌ ಕಾರಿಗನೂರು ದಂಪತಿ ಸನ್ಮಾನಿಸಲಾಯಿತು. ಶಿಕ್ಷಕ ಮೆಹತಾಬ್‌ ಅವರು ಡಾ| ಮಧುಸೂದನ್‌ ಅವರ ಸೇವಾ ಕಾರ್ಯಗಳ ಕುರಿತು ಪರಿಚಯಿಸಿದರು. ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್‌ ಜಿಮ್‌ಖಾನಾ ಕಾರ್ಯಾಧ್ಯಕ್ಷ ಕೆ.ಜಿತೇಂದ್ರಗೌಡ, ಕಾರ್ಯದರ್ಶಿ ರವಿರಾಜಶೇಖರ ರೆಡ್ಡಿ, ಬಳಗದ ಪ್ರಸಾದ ಗೋಖಲೆ, ಡಾ| ಪರಸಪ್ಪ ಬಂದ್ರಕಳ್ಳಿ, ಚಂದ್ರಶೇಖರ ಆಚಾರ್‌ ಕಪ್ಪಗಲ್‌ ಇದ್ದರು. ಬಳಿಕ ತತ್ವಪದಕಾರ ಶ್ರೀನಾದ ಮಣಿನಾಲ್ಕೂರ್‌ ಅವರಿಂದ ತತ್ವಪದಗಾಯನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next