Advertisement

ಬಂಡವಾಳ ಶಾಹಿಗಳ ಹಿಡಿತದಲ್ಲಿ ಮಾಧ್ಯಮ

01:07 PM Nov 30, 2017 | |

ನಂಜನಗೂಡು: ರಾಜ್ಯದಲ್ಲಿ ದೃಶ್ಯ ಮಾಧ್ಯಮಗಳು ಬಂಡವಾಳ ಶಾಹಿಗಳ ಮತ್ತು ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿವೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ.ದೀಪಕ್‌ ವಿಷಾದಿಸಿದರು. ಶ್ರಾವಣ ಕಲ್ಯಾಣ ಮಂಟಪದಲ್ಲಿ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರ ದಿನಾಚರಣೆ ಉದ್ಘಾಟಿಸಿ ಹಾಗೂ ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ವಿತರಿಸಿ ಮಾತನಾಡಿದರು.

Advertisement

ರಾಜ್ಯದಲ್ಲಿ 7 ಪ್ರಮುಖ ರಾಜಕಾರಣಿಗಳು ಹಾಗೂ 3 ಬಂಡವಾಳ ಶಾಹಿಗಳು ಸುದ್ದಿ ಚಾನೆಲ್‌ಗ‌ಳನ್ನು ಹೊಂದಿದ್ದಾರೆ. ಇದರಿಂದಾಗಿಯೇ ಜಗತ್ತಿನಲ್ಲಿ ದೇಶದ ಪತ್ರಿಕೋದ್ಯಮ 150 ನೇ ಸ್ಥಾನ ಪಡೆದುಕೊಂಡು ಅಪಾಯದಲ್ಲಿದೆ ಎಂದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಪತ್ರಿಕಾ ರಂಗದ ಮೂಲಕವೇ ಬಂದವರು. ಒಂದು ಮಾಧ್ಯಮವೂ ದೇಶ ಉಳಿಸಲೂಬಹುದು, ಅಳಿಸಲುಬಹುದು ಎಂದು ಹೇಳಿದರು. 

 2016 ರ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಗೆ ಭಾಜನರಾದ ವರ್ತಮಾನ ಪತ್ರಿಕೆ ವರದಿಗಾರರು ಹಾಗೂ ಕಪಿಲ ವಾಹಿನಿ ಪಾಕ್ಷಿಕ ಪತ್ರಿಕೆ ಸಂಪಾದಕ ಪಿ.ಮಹದೇವ ಪ್ರಸಾದ್‌ರನ್ನು ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಶಾಸಕ ಕಳಲೆ ಎನ್‌ ಕೇಶವಮೂರ್ತಿ ಸನ್ಮಾನಿಸಿದರು.

ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ, ಸಿ.ಜಿ.ಬೆಟಸೂರಮಠ ಮಾತನಾಡಿ, ತಾಲೂಕಿನ ಕ್ರಿಯಾಶೀಲ ಪತ್ರಕರ್ತರಗಾಗಿಯೇ  ಜೆಎಸ್‌ಎಸ್‌ ಮಹಾ ವಿದ್ಯಾಪೀಠ 1 ಲಕ್ಷ ರೂ ದತ್ತಿ ಸ್ಥಾಪಿಸಿ ಈ ನಿಧಿಯಿಂದ 10 ಸಾವಿರ ನಗದು ಪ್ರಶಸ್ತಿ ಪತ್ರ ಹಾಗೂ ಫ‌ಲಕ ನೀಡುತ್ತಿದೆ ಎಂದರು.

ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ಸನ್ಮಾನಿತ ಪಿ.ಮಹದೇವ ಪ್ರಸಾದ್‌, ತಮ್ಮ  ಬೆಳವಣಿಗೆಗೆ ಸಹಕಾರಿಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಬಿಜೆಪಿ ರಾಜ್ಯ ಉಪಾಧ್ಯಕ್ಷ  ಎಸ್‌.ಮಹದೇವಯ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹುಲ್ಲಹಳ್ಳಿ ಮೋಹನ್‌, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ನಂಜನಗೂಡು ಮಧು, ಜಿಪಂ ಸದಸ್ಯ ಎಚ್‌.ಎಸ್‌.ದಯಾನಂದಮೂರ್ತಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರತಾಪ್‌, ಉಪಾಧ್ಯಕ್ಷ ಮಹದೇವ ಪ್ರಸಾದ್‌, ರಾಘವೇಂದ್ರ ಮತ್ತಿತರರಿದ್ದರು.
 
ಪ್ರಜಾಪ್ರಭುತ್ವದಲ್ಲಿ ನಡೆಯುವ ಅನ್ಯಾಯ, ಅಕ್ರಮ, ದೌರ್ಜನ್ಯ, ದಬ್ಟಾಳಿಕೆ, ಶೋಷಣೆಗಳು ನಡೆದಾಗ ಪತ್ರಕರ್ತರು ಪ್ರಾಮಾಣಿಕತೆಯಿಂದ ವಸ್ತು ಸ್ಥಿತಿಗೆ ಆದ್ಯತೆ ನೀಡಬೇಕು. ಇಂದಿನ ಪೀತ ಪತ್ರಿಕೊದ್ಯಮದಿಂದಾಗಿ ಇಡೀ ಮಾಧ್ಯಮ ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. 
-ಕಳಲೆ ಎನ್‌.ಕೇಶವಮೂರ್ತಿ, ಶಾಸಕ 

Advertisement
Advertisement

Udayavani is now on Telegram. Click here to join our channel and stay updated with the latest news.

Next