ನವದೆಹಲಿ: ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ)ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೊರೊನಾ ಲಸಿಕೆಗಳಿಂದ ಅಡ್ಡ ಪರಿಣಾಮ ಉಂಟಾಗುತ್ತವೆ ಎಂಬುದನ್ನು ಒಪ್ಪಿಕೊಂಡಿವೆ ಎಂದು ಮಾಧ್ಯಮಗಳು ಇತ್ತೀಚೆಗೆ ನೀಡಿದ್ದ ವರದಿ ಆಧಾರರಹಿತ ಹಾಗೂ ವದಂತಿ ಅಷ್ಟೇ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಮಾಧ್ಯಮಗಳ ವರದಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದ ಬಳಿಕ ಆರ್‌ಟಿಐ ಅರ್ಜಿದಾರರೊಬ್ಬರು ಈ ಕುರಿತು ಸರ್ಕಾರದಿಂದ ಸ್ಪಷ್ಟನೆ ಕೋರಿದ್ದರು.
ಈ ಹಿನ್ನೆಲೆ ಸರ್ಕಾರ ಪ್ರತಿಕ್ರಿಯಿಸಿದ್ದು, ಅಂಥ ಯಾವುದೇ ಹೇಳಿಕೆಯನ್ನು ಸಿಡಿಎಸ್‌ಸಿಒ, ಐಸಿಎಂಆರ್ ನೀಡಿಲ್ಲ ಎಂದಿದೆ. ಜತೆಗೆ ಜನರನ್ನು ವದಂತಿಗಳನ್ನು ನಂಬದಿರುವಂತೆ ಕೋರಿದೆ.