Advertisement

ಪ್ರಜಾಪ್ರಭುತ್ವ ಉಳಿವಿಗೆ ಮಾಧ್ಯಮ ಅವಶ್ಯ: ಪ್ರಿಯಾಂಕ್

10:40 AM Jul 03, 2022 | Team Udayavani |

ಚಿತ್ತಾಪುರ: ಪ್ರಜಾಪ್ರಭುತ್ವ ಉಳಿಯಬೇಕಾದರೆ ಎರಡು ಶಕ್ತಿಗಳು ಅವಶ್ಯಕವಾಗಿದ್ದು, ಅದರಲ್ಲಿ ಒಂದು ಸಮರ್ಥ ವಿರೋಧ ಪಕ್ಷ ಹಾಗೂ ಇನ್ನೊಂದು ಸ್ವತಂತ್ರ ಮಾಧ್ಯಮ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ನಡೆದ ಪತ್ರಿಕಾ ದಿನಾಚರಣೆ, ನೂತನ ಪದಾಧಿಕಾರಿಗಳ ಪದಗ್ರಹಣ, ವಿಶೇಷ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.

ವಸ್ತುನಿಷ್ಠ ವರದಿ ಮಾಡಿದ್ದರಿಂದ ದೇಶದಲ್ಲಿ 210 ಪತ್ರಕರ್ತರ ಹತ್ಯೆ, 78 ಪತ್ರಕರ್ತರ ಬಂಧನ, 154 ಪತ್ರಕರ್ತರ ಮೇಲೆ ಪ್ರಕರಣಗಳಿವೆ. ಹೀಗಾಗಿ ಸರ್ಕಾರಗಳು ಪತ್ರಕರ್ತರ ಪರ ಜವಾಬ್ದಾರಿ ತೆಗೆದುಕೊಂಡು ಅವರಿಗೆ ರಕ್ಷಣೆ ಜೊತೆಗೆ ಸ್ವಾತಂತ್ರ್ಯ ನೀಡಬೇಕು ಎಂದು ಹೇಳಿದರು.

ಸಾಹಿತಿ ಡಾ| ರಹಮತ್‌ ತರೀಕೆರೆ ವಿಶೇಷ ಉಪನ್ಯಾಸ ನೀಡಿದರು. ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ವಿಶ್ವಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್‌ ಯಡ್ರಾಮಿ, ರಾಜ್ಯ ಸಮಿತಿ ಸದಸ್ಯ ಡಾ| ಶಿವರಂಜನ ಸತ್ಯಂಪೇಟ್‌, ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ಧರಾಜ ಮಲಕಂಡಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ವಾಡಿ ಪುರಸಭೆ ಅಧ್ಯಕ್ಷೆ ಝರೀನಾ ಬೇಗಂ, ಸಂಪಾದಕ ಶಿವರಾಯ ದೊಡ್ಡಮನಿ, ತಾಪಂ ಇಒ ನೀಲಗಂಗಾ ಬಬಲಾದ್‌, ಬಿಇಒ ಸಿದ್ಧವೀರಯ್ಯ ರುದೂ°ರ್‌, ಟಿಎಚ್‌ಒ ಡಾ| ಅಮರದೀಪ ಪವಾರ, ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ವಕೀಲರ ಸಂಘದ ಅಧ್ಯಕ್ಷ ಗಂಗಾಧರ ಸಾಲಿಮಠ, ಮುಖಂಡರಾದ ಭೀಮಣ್ಣ ಸಾಲಿ, ಅರುಣಕುಮಾರ ಪಾಟೀಲ, ಮುಕ್ತಾರ ಪಟೇಲ್‌, ಚಂದ್ರಶೇಖರ ಕಾಶಿ, ರಮೇಶ ಮರಗೋಳ, ಶಿವಾನಂದ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಶಿವರುದ್ರ ಭೀಣಿ, ರಾಜಶೇಖರ ತಿಮ್ಮನಾಯಕ, ರಸೂಲ್‌ ಮುಸ್ತಫಾ, ಮಲ್ಲಿಕಾರ್ಜುನ ಎಮ್ಮೆನೋರ, ನಾಗರಾಜ ಭಂಕಲಗಿ, ಸಾಬಣ್ಣ ಕಾಶಿ, ವಿನೋದ ಗುತ್ತೇದಾರ, ಶಿವಕಾಂತ ಬೆಣ್ಣೂರಕರ್‌, ಸಂತೋಷ ಪೂಜಾರಿ, ಸಂಜಯ ಬುಳಕರ್‌ ಇದ್ದರು.

Advertisement

ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಿರೇಂದ್ರ ಕೊಲ್ಲೂರ, ಡಾ| ಸಾಯಬಣ್ಣ ಗುಡುಬಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪತ್ರಕರ್ತರಾದ ನಾಗಯ್ಯಸ್ವಾಮಿ ಅಲ್ಲೂರ, ರವಿಶಂಕರ ಬುರ್ಲಿ, ಎಂ.ಡಿ.ಮಶಾಕ್‌, ಅನಂತನಾಗ ದೇಶಪಾಂಡೆ, ಸಂತೋಷ ಕಟ್ಟಿಮನಿ, ಜಗದೇವ ದಿಗ್ಗಾಂವಕರ್‌, ಜಗದೇವ ಕುಂಬಾರ, ಅಣ್ಣಾರಾಯ ಮಾಡಬೂಳ, ವಿಕ್ರಂ ತೇಜಸ್‌, ದಯಾನಂದ ಖಜೂರಿ, ಸೈಯ್ಯದ್‌ ಮನ್ಸೂರ್‌, ಪೃಥ್ವಿ ಸಾಗರ ಇದ್ದರು.

ವಸ್ತುನಿಷ್ಠ ವರದಿಗಳ ಆಧಾರದ ಮೇಲೆ ಸರ್ಕಾರ ಮತ್ತು ಆಡಳಿತ ಬದಲಾವಣೆಯಾದ ಉದಾಹರಣೆಗಳು ಸಾಕಷ್ಟು ಇವೆ. ಅಂತಹ ಶಕ್ತಿ ಪತ್ರಕರ್ತರಲ್ಲಿದೆ. ಇತ್ತೀಚೆಗೆ ನಡೆದ ಪಿಎಸ್‌ಐ ಹಗರಣ ಕುರಿತು ಪತ್ರಕರ್ತರೊಬ್ಬರು ಸರಣಿ ಸುದ್ದಿ ಮಾಡಿದ ಪರಿಣಾಮ ಪ್ರಕರಣ ಬಯಲಿಗೆ ಬಿದ್ದು ಅನೇಕರು ಜೈಲಿನಲ್ಲಿದ್ದಾರೆ. ಇದೇ ಪತ್ರಕರ್ತರ ಪ್ರಾಬಲ್ಯಕ್ಕೆ ಸಾಕ್ಷಿ. ಪ್ರಿಯಾಂಕ್ಖರ್ಗೆ, ಶಾಸಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next