Advertisement

ಮೇಧಾಗೆ ರಾಷ್ಟ್ರಮಟ್ಟದಲ್ಲಿ 3ನೇ ಸ್ಥಾನ

12:50 PM Apr 29, 2021 | Team Udayavani |

ಬೆಂಗಳೂರು: ಸೇವ್‌ ದ ಸ್ಪ್ಯಾರೋ (ಗುಬ್ಬಿ ಉಳಿಸಿ) ಅಭಿಯಾನದಡಿ ಸಂಸ್ಥೆಯೊಂದು ರಾಷ್ಟ್ರ ಮಟ್ಟದಲ್ಲಿ ನಡೆಸಿದ ಆನ್‌ಲೈನ್‌ ಚಿತ್ರಕಲಾಸ್ಪರ್ಧೆಯಲ್ಲಿ ಬೆಂಗಳೂರಿನ 13 ವರ್ಷದ ಬಾಲಕಿ ಮೇಧಾ ಉಮೇಶ್‌ ತೃತೀಯ ಸ್ಥಾನ ಪಡೆದಿ ದ್ದಾಳೆ.

Advertisement

ದೇಶಾದ್ಯಂತ ಮೂರು ವಯೋಮಾನದ ಮಕ್ಕ ಳಿಗೆ ಪ್ರತ್ಯೇಕವಾಗಿ ಆನ್‌ಲೈನ್‌ ಮೂಲಕ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.ಅದರಲ್ಲಿ ಬೆಂಗಳೂರಿನ ಸೇಂಟ್‌ ಡಾಮಿನಿಕ್ಸ್‌ ಶಾಲೆಯಲ್ಲಿ8ನೇ ತರಗತಿ ಓದುತ್ತಿ ರುವ ಮೇಧಾ ಉಮೇಶ್‌ ರಾಷ್ಟ್ರಮಟ್ಟದಲ್ಲಿ 13 ರಿಂದ 14 ವಯೋಮಾನದ ಮಕ್ಕಳಿಗೆ ಏರ್ಪಡಿಸಿದ್ದ ಪ್ರತ್ಯೇಕ ಚಿತ್ರಕಲಾಸ್ಪರ್ಧೆಯಲ್ಲಿ ಪಾಲ್ಗೊಂಡು 3ನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next