ಹುಮನಾಬಾದ: ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ಅಕ್ರಮವಾಗಿ ದನಗಳ ಮಾಂಸ ಸಾಗಿಸುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಿಎಸ್ಐ ರವಿಕುಮಾರ ನಾಯ್ಕೋಡಿ ಬುಧವಾರ ದಾಳಿನಡೆಸಿ ಎರಡು ವಾಹನ ಜಪ್ತಿಮಾಡಿದ್ದಾರೆ.
ಮಹಾರಾಷ್ಟ್ರದ ಜಾಮಖೇಡ ಮೂಲದ ವಾಹನ ಚಾಲಕರಾದ ಮಜೂರ್ ಹಾಗೂ ಅಫರೋಜ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಟ್ಟಣದ ಕೆಇಬಿ ಬೈಪಾಸ ಹತ್ತಿರದಲ್ಲಿ ವಾಹನ ಜಪ್ತಿ ಮಾಡಲಾಗಿದ್ದು, ಎರಡು ವಾಹನಗಳಲ್ಲಿ ದನಗಳ ಮಾಂಸ, ದನಗಳ ಬಾಲಗಳು ಇರುವ ಬಗ್ಗೆ ಪಶು ಅಧಿಕಾರಿಗಳು ಖಚಿತ ಪಡೆಸಿದ್ದಾರೆ.
ಪಶು ಅಧಿಕಾರಿ ಪ್ರತ್ವಿರಾಜ ಹಾಗೂ ಡಾ। ಗಣಾಧೀಶ್ವರ ಹಿರೆಮಠ ಭೇಟಿನೀಡಿ ತಪಾಸಣೆ ನಡೆಸಿದ್ದು, ಹೆಚ್ಚಿನ ಪರೀಕ್ಷೆಗಾಗಿ ಮಾಂಸದ ಮಾದರಿ ಹೈದ್ರಾಬಾದ ಮೀಟ್ ಪಿಸೇಸ್ ಐಡೆಂಟಿಫಿಕೇಷನ್ ಲ್ಯಾಬೋರೇಟರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;- ಅರ್ಹರಿಗೆಲ್ಲರಿಗೂ ನ್ಯಾಯದಾನಕ್ಕೆ ಆದ್ಯತೆ
ರಾಜ್ಯದಲ್ಲಿ ಗೋ ಹತ್ಯೆ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ನೇರೆ ರಾಜ್ಯಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿದ್ದು, ದನಗಳ ಮಾಂಸ ಸಾಗಿಸುವ ವಾಹನಗಳು ಆರ್.ಟಿ.ಓ ಅಧಿಕಾರಿಗಳ ಕಣ್ಣು ತಪ್ಪಿಸುವ ನಿಟ್ಟಿನಲ್ಲಿ ಗ್ರಾಮಗಳ ರಸ್ತೆಗಳನ್ನು ಕಳ್ಳ ಧಾರಿಮಾಡಿಕೊಂಡು ಅಕ್ರಮ ಎಸಗುತ್ತಿದ್ದಾರೆ ಎಂದು ಕನಕಟ್ಟ ಮೂಲದ ಗ್ರಾಮ ದೂರುತ್ತಿದ್ದಾರೆ.
ಸದ್ಯ ಘಟನೆಯ ಕುರಿತು ಹುಮನಾವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ಪೊಲೀಸರು ನಡೆಸಿದ್ದಾರೆ.