ತುಮಕೂರು: ಕೋವಿಡ್ ಆರ್ಭಟದ ನಡುವೆಯೇ ಕಲ್ಪತರುನಾಡಿನಲ್ಲಿ ಹಿಂದೂಗಳ ಹೊಸ ವರ್ಷದ ಸಂಭ್ರಮದ ಯುಗಾದಿಹಬ್ಬ ಆಚರಣೆಯ ನಂತರ 2ನೇ ದಿನ ನಡೆಯುವ ವರ್ಷತೊಡಕು ಆಚರಣೆಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಹಿನ್ನೆಲೆ ಮಾಂಸದಂಗಡಿ ಬಂದ್ ಮಾಡಿದ್ದು, ಇದರಿಂದ ಮಾಂಸಪ್ರಿಯರು ಬುಧವಾರ ಚಿಕನ್ ಮಟನ್‌ಗಾಗಿ ಪರದಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 130ನೇಜಯಂತಿ ನೆಪವಾಗಿಟ್ಟು ಕೊಂಡು ಮಹಾನಗರ ಪಾಲಿಕೆಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನುನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡಿದೆ. ಈ ಸಂಬಂಧನಗರಾದ್ಯಂತ ಮುಂಜಾಗ್ರತಾ ಕ್ರಮವಾಗಿ ಜನಸಂದಣಿ ಸೇರದಂತೆ ವರ್ಷದ ತೊಡಕು ದಿನವಾದ ಬುಧವಾರ ಜಯಂತಿ ಹಿನ್ನೆಲೆಮಾಂಸ ಮಾರಾಟವನ್ನು ನಿಷೇಧಿಸಿದ್ದರಿಂದ ನಗರದಲ್ಲಿ ಚಿಕನ್,ಮಟನ್ ಖರೀದಿಗಾಗಿ ಜನರ ಪರದಾಟ ಹೇಳತೀರದಾಗಿತ್ತು.
ಜಯಂತಿ ನೆಪದಲ್ಲಿ ನಗರದಲ್ಲಿ ಮಾಂಸ ಮಾರಾಟನಿಷೇಧಿಸಿರುವುದು ನಗರದ ಜನತೆಯ ಆಕ್ರೋಶಕ್ಕೆಕಾರಣವಾಗಿತ್ತು. ವರ್ಷಕ್ಕೊಮ್ಮೆ ಬರುವ ಯುಗಾದಿ ಹಬ್ಬದಮಾರನೇ ದಿನ ವರ್ಷದ ತೊಡಕನ್ನು ಆಚರಿಸಲು ಮಾಂಸಪ್ರಿಯರು ಬಹಳ ಉತ್ಸುಕತೆಯಿಂದ ತುದಿಗಾಲಲ್ಲಿನಿಂತಿರುತ್ತಾರೆ.
ಆದರೆ, ಈ ಬಾರಿ ನಗರದಲ್ಲಿ ಮಾಂಸ ಮಾರಾಟನಿಷೇಧಿಸಿರುವುದಿಂದ ಮಟನ್ ಮತ್ತು ಚಿಕನ್ ಅಂಗಡಿಗಳುಬಂದ್ ಆಗಿದ್ದವು. ನಗರ ವ್ಯಾಪ್ತಿ ಹೊರತುಪಡಿಸಿಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿರುವ ಚಿಕನ್‌ಮತ್ತು ಮಟನ್ ಅಂಗಡಿಗಳಲ್ಲಿ ಮಾಂಸ ಖರೀದಿಗಾಗಿ ಜನತೆಮುಗಿ ಬಿದ್ದಿರುವುದರಿಂದ ಅಂಗಡಿಗಳ ಮುಂದೆ ಕಿ.ಮೀ.ಗಟ್ಟಲೆಸರದಿಯ ಸಾಲುಗಳು ಕಂಡು ಬಂದವು.
ಗುಡ್ಡೆ ಬಾಡಿಗೆ ಹೆಚ್ಚಿದ ಬೇಡಿಕೆ: ವರ್ಷದ ತೊಡಕನ್ನುಆಚರಿಸಲು ಹಳ್ಳಿಗಳಲ್ಲಿ ಬಾಡಿನ ಚೀಟಿ ಮಾಡಿಕೊಂಡಿರುತ್ತಾರೆ.ಇಂತಹ ಹಳ್ಳಿಗಳ ಮಾಹಿತಿ ಪಡೆದುಕೊಂಡಿರುವ ನಗರಪ್ರದೇಶದ ಜನತೆ ತಮ್ಮ ಸ್ನೇಹಿತರ ಮೂಲಕ ಗುಡ್ಡೆ ಬಾಡಿಗೆಬೇಡಿಕೆ ಇಟ್ಟಿರುವ ಪರಿಣಾಮ ಹಳ್ಳಿಗಳಲ್ಲೂ ಮಾಂಸಮಾರಾಟಕ್ಕೆ ಹೊಸ ಹುರುಪು ಬಂದಂತಾಗಿದೆ. ತಡರಾತ್ರಿಯೇಹಳ್ಳಿಗಳಿಗೆ ತೆರಳಿರುವ ನಗರದ ಜನತೆ ಬೆಳಗಿನ ಜಾವದವರೆಗೂಅಲ್ಲಿಯೇ ಕಾದು ಕುಳಿತು ಮಾಂಸ ಖರೀದಿಸಿಕೊಂಡುನಗರಗಳತ್ತ ಮರಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.