Advertisement

ಮಾಂಸದ ಅಂಗಡಿ ತೆರವಿಗೆ ಆಗ್ರಹಿಸಿ ಧರಣಿ

05:41 PM Nov 17, 2021 | Team Udayavani |

ಜೇವರ್ಗಿ: ಪಟ್ಟಣದ ಬುಟ್ನಾಳ ರಸ್ತೆಯಲ್ಲಿರುವ ಮಾಂಸದ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್‌ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ದನ, ಕುರಿ, ಕೋಳಿ ಮಾಂಸದ ಅಂಗಡಿಗಳು ತಲೆ ಎತ್ತುತ್ತಿವೆ. ಇದರಿಂದ ಪಟ್ಟಣದಲ್ಲಿ ವಾತಾವರಣ ಕಲುಷಿತಗೊಳ್ಳುತ್ತಿದೆ.

Advertisement

ಪರವಾನಗಿ ನೀಡಿದ ಮಳಿಗೆಗಳಲ್ಲಿ ಮಾರಾಟ ಮಾಡುವುದನ್ನು ಬಿಟ್ಟು ಎಲ್ಲೆಂದರಲ್ಲಿ ಅಂದರೆ ತಳ್ಳುವ ಗಾಡಿಗಳ ಮೂಲಕ ಮಾಂಸ ಮಾರಾಟ ಮಾಡಲಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಮದರಿ, ಯನಗುಂಟಿ, ನರಿಬೋಳ ಸೇರಿದಂತೆ ವಿವಿಧ ಕಡೆ ಅಕ್ರಮ ಮರಳು ಸಾಗಿಸುವರ ವಿರುದ್ಧ ಸಹಾಯಕ ಆಯುಕ್ತರ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆಂದೋಲಾ-ಕೆಲ್ಲೂರ ರಸ್ತೆ ಕಾಮಗಾರಿ ನಡೆದ ಎರಡು ತಿಂಗಳಲ್ಲಿಯೇ ಹಾಳಾಗಿದ್ದು, ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಆಂದೋಲಾ ಗ್ರಾಮದ ಕರುಣೇಶ್ವರ ಮಠದ ಆವರಣದ ಮೇಲೆ ಹಾಯ್ದು ಹೋಗಿರುವ ಹೈಟೆನ್ಶನ್‌ ವಿದ್ಯುತ್‌ ತಂತಿ ಸ್ಥಳಾಂತರ ಮಾಡಬೇಕು.

ದೇವದುರ್ಗದಿಂದ ಜೇವರ್ಗಿ ಪಟ್ಟಣದ ಮೂಲಕ ಸಾಗುವ ಮರಳು ಟಿಪ್ಪರ್‌ ವಾಹನಗಳ ವೇಗದ ಮಿತಿಗೆ ಕಡಿವಾಣ ಹಾಕಬೇಕು. ಫಿರೋಜಾಬಾದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ತಡೆಗಟ್ಟಬೇಕು ಎಂಬಿತ್ಯಾ ದಿ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ಧರಣಿ ಸ್ಥಳಕ್ಕೆ ತಹಶೀಲ್ದಾರ್‌ ವಿನಯಕುಮಾರ ಪಾಟೀಲ, ಲೋಕೋಪಯೋಗಿ ಇಲಾಖೆ ಎಇಇ ಮುರುಳಿಧರರಾವ್‌ ಹಂಚಾಟೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲಾ ಅಧಿಕಾರಿ ಮೋಹನಕುಮಾರ, ಪಿಎಸ್‌ಐ ಸಂಗಮೇಶ ಅಂಗಡಿ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

Advertisement

ಧರಣಿಯಲ್ಲಿ ಶ್ರೀರಾಮಸೇನೆಯ ಈಶ್ವರ ಹಿಪ್ಪರಗಿ, ತಾಲೂಕು ಘಟಕದ ಅಧ್ಯಕ್ಷ ನಿಂಗಣ್ಣಗೌಡ ಮಾಲಿಪಾಟೀಲ ರಾಸಣಗಿ, ಮಲ್ಲಣಗೌಡ ಮಾಲಿಪಾಟೀಲ, ಶರಣಪ್ಪ ರೆಡ್ಡಿ ಲಖಣಾಪುರ, ಕಿರಣ ಪಾಟೀಲ ಚನ್ನೂರ, ವಿಶ್ವ ಪಾಟೀಲ ಹಳ್ಳಿ, ಸುನೀಲ ಗುತ್ತೇದಾರ, ನಾಗರಾಜ ಮಾಲಿಪಾಟೀಲ, ಚೇತನ ಗುತ್ತೇದಾರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next