Advertisement

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ

09:50 PM Sep 09, 2019 | Team Udayavani |

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಲು ಹೇರಳ ಅವಕಾಶಗಳಿದ್ದು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಕ್ರಮ ವಹಿಸುವುದಾಗಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು. ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡಿದ್ದ ಸಾಂಸ್ಥಿಕ ಚುನಾವಣೆ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮಾಡಲು ಅವಕಾಶವಿದ್ದು, ಪ್ರಕೃತಿಯೇ ಪ್ರವಾಸೋದ್ಯಮ ವನ್ನು ವರದಾನವಾಗಿ ಕೊಟ್ಟಿದೆ ಎಂದರು.

Advertisement

ಇರುವ ಅರಣ್ಯ ಉಳಿಸಿದರೆ ಪ್ರವಾಸೋದ್ಯಮ: ಸಿಂಗಾಪುರದಲ್ಲಿ ಅರಣ್ಯವನ್ನು ಕೃತಕವಾಗಿ ನಿರ್ಮಾಣ ಮಾಡಿಕೊಂಡು ಪ್ರವಾಸೋದ್ಯಮವನ್ನಾಗಿ ಬೆಳೆಸಿದ್ದಾರೆ. ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪತ್ತು ಹೇರಳವಾಗಿದೆ. ಇಲ್ಲಿ ಇರುವುದನ್ನು ಬೆಳೆಸಿದರೆ ಅದೇ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ ಎಂದು ತಿಳಿಸಿದರು. ಬಿಜೆಪಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ. ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಸಿ ಸಕ್ರಿಯ ಸದಸ್ಯನಿಗೆ ಪಕ್ಷದ ಜವಾಬ್ದಾರಿ ನೀಡಿ ಜನಪರ ಕೆಲಸಗಳನ್ನು ಗಮನಿಸಿ ಜನನಾಯಕನ್ನಾಗಿ ಮಾಡಲಾಗುತ್ತದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಯ್ಕೆಗೆ ಚುನಾವಣೆ: ಸೆ. 11ರಿಂದ 30ರ ವರೆಗೆ ಬೂತ್‌ ಮಟ್ಟದಲ್ಲಿ ಅ. 11ರಿಂದ 30ರ ವರಗೆ ತಾಲೂಕು ಮಟ್ಟದಲ್ಲಿ ನ. 11ರಿಂದ 30ರ ವರಗೆ ಜಿಲ್ಲಾ ಮಟ್ಟದಲ್ಲಿ ಡಿ. 11ರಿಂದ 30ರ ವರಗೆ ರಾಜ್ಯ ಮಟ್ಟದಲ್ಲಿ ಜ. 11ರಿಂದ 30ರವರಗೆ ರಾಷ್ಟ್ರಮಟ್ಟದಲ್ಲಿ ಪಕ್ಷದ ಆಂತರಿಕ ಚುನಾವಣೆ ನಡೆಸಲಾಗುವುದು. ಪಕ್ಷದಲ್ಲಿ ಪ್ರಜಾಪ್ರಭುತ್ವದ ಮೇಲೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 5-6 ದಿನಗಳು ಪ್ರವಾಸವನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿಯಲ್ಲಿ ಜಾತಿ ಬೆಳೆಸಲ್ಲ: ದೇಶ ಕಟ್ಟುವ ಸಿದ್ಧಾಂತ ಬಿಜೆಪಿ ಪಕ್ಷದಲ್ಲಿದ್ದು, ಪಕ್ಷದಲ್ಲಿ ಕುಟುಂಬ ಹಾಗೂ ಒಂದು ಜಾತಿಯನ್ನು ಬೆಳೆಸುವ ಸಿದ್ಧಾಂತ ಇಲ್ಲ. ಬಿಜೆಪಿ ಪಕ್ಷ ಬೂತ್‌ ಮಟ್ಟದ ನಾಯಕನನ್ನು ಚುನಾವಣೆ ನಡೆಸಿ ಆಯ್ಕೆ ಮಾಡುತ್ತದೆ. 6 ವರ್ಷದ ನಂತರ ಸದಸ್ಯ ಸದಸ್ಯತ್ವ ನವೀಕರಣ ಮಾಡಿಕೊಳ್ಳಬೇಕು ಇದು ಬಿಜೆಪಿ ಪಕ್ಷದ ಹೆಚ್ಚುಗಾರಿಕೆ ಎಂದರು. ಪಕ್ಷದಲ್ಲಿ ಬೂತ್‌ ಮಟ್ಟದಲ್ಲಿ ನಾಯಕನನ್ನು ಆಯ್ಕೆ ಮಾಡಲು ನಡೆಸುವ ಚುನಾವಣೆಯು ಪಕ್ಷವನ್ನು ಪ್ರಬಲಗೊಳಿಸಲು ಕಾರ್ಯಕರ್ತನಿಗೆ ನೀಡುವ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಅವಕಾಶ ಸಿಗಲಿಲ್ಲವೆಂಬ ಭಾವನೆ ಇಲ್ಲ: ಬಿಜೆಪಿ ಸಾಮಾಜಿಕ ನ್ಯಾಯದ ಮೇಲೆ ಬದ್ಧತೆ ಹೊಂದಿರುವ ಪಕ್ಷ. ಎಲ್ಲಾ ವರ್ಗದ ಜನರಿಗೂ ಅವಕಾಶ ಸಿಗಲಿಲ್ಲ ಎಂಬ ಭಾವನೆ ಪಕ್ಷದಲ್ಲಿ ಇಲ್ಲ ಎಂದು ಭಾವಿಸಬಾರದು. ಪಕ್ಷವನ್ನು ಶಕ್ತಿಶಾಲಿ ಮಾಡಲು ಬೂತ್‌ ಮಟ್ಟದಲ್ಲಿ ಯೋಗ್ಯವ್ಯಕ್ತಿಯನ್ನು ಸದಸ್ಯನನ್ನಾಗಿ ಮಾಡಿ ಪಕ್ಷದ ಜವಾಬ್ದಾರಿಯನ್ನು ಕೊಡಬೇಕು ಎಂಬ ನಿಟ್ಟಿನಲ್ಲಿ ಬೂತ್‌ ಮಟ್ಟದಲ್ಲಿ ಚುನಾವಣೆ ನಡೆಸುತ್ತಿದೆ ಎಂದರು.

Advertisement

ರಾಜ್ಯ ಸಂಚಾಲಕ ಅಶ್ವತ್ಥ ನಾರಾಯಣ, ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಮೈಸೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಣೀಶ್‌, ಶಾಸಕ ನಿರಂಜನ್‌ ಕುಮಾರ್‌, ಮಾಜಿ ಶಾಸಕರಾದ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಆರ್‌. ಮಲ್ಲಿಕಾರ್ಜುನಪ್ಪ, ಸಿ. ಗುರುಸ್ವಾಮಿ, ಪರಿಮಳ ನಾಗಪ್ಪ, ಸಂಚಾಲಕ ದತ್ತೇಶ್‌, ಜಿಲ್ಲಾ ಪ್ರಧಾನಕಾರ್ಯದರ್ಶಿ ನಾಗೇಂದ್ರ ಸ್ವಾಮಿ, ನಗರಸಭೆ ಸದಸ್ಯ ಶಿವು, ಮುಖಂಡರಾದ ನೂರೊಂದುಶೆಟ್ಟಿ, ನಿಜಗುಣರಾಜು ಇತ ರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next