Advertisement
ಹಿನಕಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ,’ತಳ ಸಮುದಾಯ ಜನ ಜಾಗೃತರಾಗದಿದ್ದರೆ ಬದಲಾವಣೆ ಕಷ್ಟ.ನನಗೆ ಐದು ವರ್ಷ ಸಿಎಂ ಆಗುವ ಅವಕಾಶ ಸಿಕ್ಕಿತ್ತು.ಅಧಿಕಾರಕ್ಕೆ ಬಂದ ಕೂಡಲೇ ಎಸ್‌ಸಿಪಿ, ಟಿಎಸ್‌ಪಿ ಅನುಧಾನ ಮೀಸಲಿಟ್ಟೆ.ನಾನು ಅಧಿಕಾರಕ್ಕೆ ಬರುವ ಮುನ್ನ ಯಾವ ಸರ್ಕಾರಗಳು ಜನಸಂಖ್ಯೆಗನುಗುಣವಾಗಿ ಹಣ ಮೀಸಲಿಟ್ಟಿರಲಿಲ್ಲ.ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾನೂನು ರೂಪಿಸಿದೆ. ಇಂದಿಗೂ ದೇಶದಲ್ಲಿ ಈ ಕಾನೂನನ್ನ ತಂದಿಲ್ಲ.ಫಾರ್ ದಿ ಫಸ್ಟ್ ಟೈಮ್ ಇನ್ ದಿ ಹಿಸ್ಟರಿ ಆಫ್ ಕರ್ನಾಟಕ. ಸಿಎಂ ಆದ ಒಂದು ಘಂಟೆಯೊಳಗೆ ಅಂಬೇಡ್ಕರ್, ವಾಲ್ಮೀಕಿ, ಅರಸು ಅಭಿವೃದ್ಧಿ ನಿಗಮಗಳ ಸಾಲವನ್ನ ಬಡ್ಡಿ ಸಮೇತ ಮನ್ನಾ ಮಾಡಿದೆ’ ಎಂದರು.
ದಲಿತ ಸಿಎಂ ಬಗ್ಗೆ ಭಾಷಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿ , ‘ಹೊಟ್ಟೆಪಾಡಿಗೆ ದಲಿತರು ಬಿಜೆಪಿ ಸೇರುತ್ತಾರೆ ಎಂದು ನನ್ನ ಭಾಷಣವನ್ನ ತಿರುಚಿದರು, ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ದಲಿತರು ಸಿಎಂ ಆದರೆ ನನ್ನದು ಏನೂ ತಕರಾರು ಇಲ್ಲ.ಕಾಂಗ್ರೆಸ್ ನಲ್ಲಿ ಯಾರು ಸಿಎಂ ಆಗಬೇಕು ಅನ್ನೋದನ್ನ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕರು ಸೂಚಿಸಿದವರನ್ನ ಹೈಕಮಾಂಡ್ ಮುಖ್ಯಮಂತ್ರಿ ಅಂತಾ ಸೂಚಿಸುತ್ತಾರೆ. ಒಂದು ವೇಳೆ ದಲಿತರು ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಮೂರ್ನಾಲ್ಕು ರಾಜ್ಯಗಳಲ್ಲಿ ದಲಿತ ಸಿಎಂ ಮಾಡಿದೆ’ ಎಂದರು. ಸೋಲಿನ ಬಗ್ಗೆ ವ್ಯಾಖ್ಯಾನ
ಕೇರ್ಗಳ್ಳಿ ಹೊಂಬಾಳಮ್ಮ ಸಿದ್ದರಾಮೇಶ್ವರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ವ್ಯಾಖ್ಯಾನ ಮಾಡಿದರು.
Related Articles
Advertisement
‘ಜಿ.ಟಿ.ದೇವೇಗೌಡ ಕಾಂಗ್ರೆಸ್ ಗೆ ಬಂದಿದ್ದಾನೆ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಜಿ.ಟಿ. ದೇವೇಗೌಡ ಗೆ ಕಾಂಗ್ರೆಸ್ ಬರುವುದಕ್ಕೆ ಮನಸ್ಸು ಇದೆ .ಆದರೆ ಹೆಚ್.ಡಿ. ದೇವೇಗೌಡ, ಕುಮಾರಸ್ವಾಮಿ ಅಲ್ಲಿಯೇ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸಾಕಷ್ಟು ವರ್ಷಗಳ ಇತಿಹಾಸ ಇದೆ.ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬರೋದಿದ್ದರೆ ಬರಬಹುದು.ಯಾರೇ ಬಂದರು ಪಕ್ಷಕ್ಕೆ ಸ್ವಾಗತ’ ಎಂದರು.