Advertisement

ಎಂಡಿಎಂಎ: ಯುವತಿ ಸಹಿತ ನಾಲ್ವರ ಬಂಧನ

09:07 PM Apr 22, 2023 | Team Udayavani |

ಕಾಸರಗೋಡು: ಲಕ್ಷಾಂತರ ರೂ. ಮೌಲ್ಯದ ಎಂ.ಡಿ.ಎಂ.ಎ. ಯೊಂದಿಗೆ ಯುವತಿ ಸಹಿತ ನಾಲ್ವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಮೇಲ್ಪರಂಬ ಪೊಲೀಸ್‌ ಠಾಣೆ ವ್ಯಾಪ್ತಿಯ ಅಬೂಬಕ್ಕರ್‌ (35), ಈತನ ಪತ್ನಿ ಆಮೀನಾ ಅಸರ (23), ಕರ್ನಾಟಕ ಕಲ್ಯಾಣ ನಗರದ ಎ.ಕೆ. ವಾಸೀಂ (32), ಬೆಂಗಳೂರು ನಿವಾಸಿ ಸೂರಜ್‌ (32)ನನ್ನು ಸಿ.ಐ. ಯು.ಪಿ.ವಿಪಿನ್‌ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

Advertisement

ಕಾಸರಗೋಡಿನಿಂದ ಕಾಂಞಂಗಾಡ್‌ಗೆ ಪ್ರಯಾಣಿಸುತ್ತಿದ್ದ ಕಾರನ್ನು ತಪಾಸಣೆ ಮಾಡಿದಾಗ 150 ಗ್ರಾಂ ಎಂಡಿಎಂಎ ಪತ್ತೆಯಾಯಿತು. ಇದನ್ನು ಬೆಂಗಳೂರಿನಿಂದ ಸಾಗಿಸಲಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ.
————————————————————————————————————–
ಗಡಿ ದಾಟುವ ಅಪರಾಧಿಗಳ ಬಂಧನಕ್ಕೆ ವಿಶೇಷ ಕ್ರಮ
ಕಾಸರಗೋಡು: ಗಡಿ ದಾಟುವ ಅಪರಾಧಿಗಳನ್ನು ಬಂಧಿಸಲು ವಿಶೇಷ ಕ್ರಮ ತೆಗೆದುಕೊಳ್ಳುವುದಾಗಿ ಉತ್ತರ ವಲಯ ಡಿಐಜಿ ಪುಟ್ಟ ವಿಮಲಾದಿತ್ಯ ತಿಳಿಸಿದರು.
ಕಾಸರಗೋಡಿನ ವಿವಿಧ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದರು.

ನೆರೆ ರಾಜ್ಯಗಳಿಗೆ ಪಾರಾಗುವವರನ್ನು ಬಂಧಿಸಲು ಗಡಿ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಸ್ಥಾಪಿಸಲಾಗುವುದೆಂದೂ, ಪೆಟ್ರೋಲಿಂಗ್‌ ನಡೆಸಲಾಗುವುದೆಂದೂ ತಿಳಿಸಿದರು. ಕಳೆದ ಕೆಲವು ತಿಂಗಳಿಂದ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ವಶಪಡಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next