ನ್ಯೂಯಾರ್ಕ್: ಚಂದ್ರನ ಅತ್ಯಂತ ವಿಸ್ತೃತ ಮಾಹಿತಿಯಿರುವ ಚಿತ್ರವನ್ನು ತಾನು ತೆಗೆದಿದ್ದೇನೆಂದು ಅಮೆರಿಕದ ಛಾಯಾಗ್ರಾಹಕ ಆಂಡ್ರೂ ಮೆಕಾರ್ಥಿ ಹೇಳಿಕೊಂಡಿದ್ದಾರೆ. ಅವರು ಟ್ವಿಟರ್ ಖಾತೆಯಲ್ಲಿ ಆ ಚಿತ್ರವನ್ನು ಹಂಚಿಕೊಂಡಿದ್ದು, ಗಾತ್ರ ಒಂದು ಗಿಗಾ ಪಿಕ್ಸೆಲ್‌ಗಿಂತ ಹೆಚ್ಚಿದೆ.
ಡೌನ್‌ಲೋಡ್ ಮಾಡಿಕೊಳ್ಳುವುದೂ ಕಷ್ಟ ಎಂದಿದ್ದಾರೆ. ಚಿತ್ರ ಚಂದ್ರನ ಮೇಲ್ಮೆ„ಯನ್ನು ಬಹಳ ಸುಂದರವಾಗಿ ತೋರಿಸುತ್ತಿದೆ. ಅದರಲ್ಲಿನ ಕುಳಿಗಳನ್ನೂ ನೀವು ಝೂಮ್ ಮಾಡಿ ನೋಡಬಹುದು. ಅವರು ತಮ್ಮ ವೆಬ್‌ಸೈಟ್‌ಗೆ ಲಿಂಕ್ ನೀಡಿದ್ದಾರೆ, ಅಲ್ಲೂ ವೀಕ್ಷಣೆ ಮಾಡಬಹುದು. ಸತತ ಎರಡು ವಾರಗಳಿಂದ ಚಂದ್ರನ ಈ ಚಿತ್ರಗಳನ್ನು ರೂಪಿಸಲು ಅವರು ಶ್ರಮಿಸಿದ್ದಾರೆ. 2 ಟೆಲಿಸ್ಕೋಪ್‌ಗ್ಳನ್ನು ಬಳಸಿ, 2.80 ಲಕ್ಷ ಚಿತ್ರಗಳನ್ನು ತೆಗೆದಿದ್ದಾರೆ. ಅವೆಲ್ಲದರ ಒಟ್ಟು ಮೊತ್ತವೇ ಈ ಚಿತ್ರವೆನ್ನುವುದು ಅವರ ಮಾಹಿತಿ.