Advertisement
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನೆಲೆಸಿರುವ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ಮೂಲತ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಮುಚ್ಚಂಡಿ ಗ್ರಾಮದವರು. ಭೀಮರಾಯ ಅವರ ತಾಯಿ ಸಕ್ರೆವ್ವ ಅವರಿಗೆ ಬಾಬಾನಗರದಲ್ಲಿ ತವರಿನಿಂದ ಬಂದಿದ್ದ 1 ಎಕರೆ ಜಮೀನಿ ಬಳುವಳಿ ಬಂದಿತ್ತು. ಇದರಲ್ಲೇ ಜೀವನ ರೂಪಿಸಿಕೊಳ್ಳಲು ಭೀಮರಾಯ ಪತ್ನಿ ಮಹಾದೇವಿ ಸಮೇತ ಇಡೀ ಕುಟುಂಬ ಕರ್ನಾಟಕದ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಬಾಬಾನಗರಕ್ಕೆ ಬಂದು ನೆಲೆಸಿದ್ದರು.
Related Articles
Advertisement
ಇಂಥ ಸಂಕಷ್ಟದ ಮಧ್ಯೆ ಉತ್ತಮ ಪ್ರತಿಭಾವಂತ ಮಗನಿಗೆ ವೈದ್ಯ ಶಿಕ್ಷಣ ಕೊಡಿಸಲಾಗದೇ ಪರದಾಡುತ್ತಿದ್ದಾಗ ಗ್ರಾಮಸ್ಥರ ಸಲಹೆ ಮೇರೆಗೆ ಬಬಲೇಶ್ವರ ಶಾಸಕರೂ ಆಗಿರುವ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿಕೊಂಡರು.
ಕೂಡಲೇ ಸ್ಪಂದಿಸಿದ ಎಂ.ಬಿ.ಪಾಟೀಲ, ಯಲ್ಲಾಲಿಂಗ ಅವರ ಎಂಬಿಬಿಎಸ್ ಪ್ರವೇಶಕ್ಕೆ ಅಗತ್ಯವಾಗಿರುವ ಮೊದಲ ಕಂತಿನ 3,43,096 ರೂ. ಮೊತ್ತದ ಚೆಕ್ ವಿತರಿಸಿ, ಉತ್ತಮ ಶಿಕ್ಷಣ ಪಡೆದು, ಬಡವರ ಸೇವೆ ಮಾಡಿಡುವ ಬಸವನಾಡಿನ ಆದರ್ಶ ವೈದ್ಯನಾಗುವಂತೆ ಆಶಿಸಿದರು.
ಎಂ.ಬಿ.ಪಾಟೀಲ ಅವರಿಂದ ಆರ್ಥಿಕ ನೆರವು ಪಡೆದ ಬಳಿಕ ಮಾತನಾಡಿದ ಯಲ್ಲಾಲಿಂಗ, ನನ್ನಲ್ಲಿ ಪ್ರತಿಭೆಗೆ ಅವಕಾಶ ಸಿಕ್ಕರೂ ಕುಟುಂಬದ ಆರ್ಥಿಕ ದುಸ್ಥಿತಿ ವೈದ್ಯಕೀಯ ಶಿಕ್ಷಣ ನನ್ನ ಪಾಲಿಗೆ ಗಗನ ಕುಸುಮವಾಗಿತ್ತು. ಎಂ.ಬಿ.ಪಾಟೀಲ ಅವರ ಮಾನವೀಯತೆ ನನ್ನ ಕನಸಿಗೆ ರೆಕ್ಕೆ ಮೂಡಿಸಿದ್ದು, ನನ್ನಂಥ ಸಾವಿರ ಮಕ್ಕಳಿಗೆ ಸಹಾಯಮಾಡುವ ಶಕ್ತಿ ದೇವರು ಅವರಿಗೆ ನೀಡಬೇಕು ಎಂದು ಕಣ್ಣಾಲಿ ತುಂಬಿಕೊಂಡರು.
ಬಡವರ ಪಾಲಿಗೆ ದೇವರಾಗಿರುವ ಎಂ.ಬಿ.ಪಾಟೀಲ ಅವರು ನೀಡಿರುವ ಈ ನೆರವನ್ನು ಸದ್ಬಳಕೆ ಮಾಡಿಕೊಂಡು, ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡುತ್ತೇನೆ. ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ವೈದ್ಯನಾಗುವ ನನ್ನ ಕನಸಿಗೆ ನೀರೆರೆದ ಆರ್ಥಿಕ ದಾನಿಯ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಬಡವರ ವೈದ್ಯಕೀಯ ಸೇವೆಯ ಮೂಲಕ ಸೇವೆಯ ಅವರ ಹೆಸರಿಗೆ ಕೀರ್ತಿ ತರುತ್ತೇನೆ ಎಂದರು.
ಭೀಮರಾಯ ಜೈನಾಪುರ ಮಾತನಾಡಿ, ಮಗ ನೀಟ್ ಪಾಸಾಗಿ, ಪ್ರವೇಶಕ್ಕೆ ಅವಕಾಶ ಸಿಕ್ಕರೂ ವೈದ್ಯಕೀಯ ಶಿಕ್ಷಣ ಕೊಡಿಸಲು ನಮ್ಮಿಂದ ಸಾಧ್ಯವಾಗಿರಲಿಲ್ಲ. ನಮ್ಮ ಮಗನ ವೈದ್ಯಕೀಯ ಓದಿಗೆ ಹಾಗೂ ಆತನ ಭವಿಷ್ಯಕ್ಕೆ ದಾರಿಯಾಗಿರುವ ಎಂ.ಬಿ.ಪಾಟೀಲ ಅವರಿಗೆ ನಮ್ಮ ಕುಟುಂಬ ಸದಾ ಚಿರಋಣಿ ಆಗಿರಲಿದೆ ಎಂದರು.ಕೆಲವೇ ದಿನಗಳ ಹಿಂದೆ ಇದೇ ರೀತಿ ಎಂಬಿಬಿಎಸ್ ಶಿಕ್ಷಣಕ್ಕೆ ಅವಕಾಶ ಸಿಕ್ಕರೂ, ಆರ್ಥಿಕ ಸಂಕಷ್ಟದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಎಂ.ಬಿ.ಪಾಟೀಲ ಅವರು 8 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನೂ ಓದಿ: ನಿರುದ್ಯೋಗ ಹೆಚ್ಚಳಕ್ಕೆ ಕಾರಣ ನೀಡಿ ಕೇಂದ್ರದ ವಿರುದ್ದ ಕಿಡಿ ಕಾರಿದ ಜೈರಾಮ್ ರಮೇಶ್