ಸ್ಟೇಟ್‌ಬ್ಯಾಂಕ್: ವರ್ಷದ ಹಿಂದೆ ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿ ಆರಂಭ ಗೊಂಡ ಸರ್ವಿಸ್ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪರಿಣಾಮ ಬಿಸಿಲಿನಲ್ಲಿ ನಿಂತುಕೊಂಡು ಸಾರ್ವಜನಿಕರು ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಯಲ್ಲಿ ಮನಪಾ ಮೇಯರ್ ಜಯಾನಂದ ಅಂಚನ್ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಟೇಟ್‌ಬ್ಯಾಂಕ್‌ನಲ್ಲಿ ಹಲವು ವರ್ಷಗ ಳಿಂದ ದುರಸ್ತಿಗಾಗಿ ಕಾಯುತ್ತಿದ್ದ ಈ ಬಸ್ ನಿಲ್ದಾಣವನ್ನು ಪಾಲಿಕೆ, ಸ್ಮಾರ್ಟ್‌ಸಿಟಿ, ಮುಡಾದಿಂದ ಸುಮಾರು 4.2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ಮೇಲ್ಭಾವಣಿ ನಿರ್ಮಾಣ ಇನ್ನೂ ಆಗಿಲ್ಲ. ಎರಡು ಕಡೆಗಳಲ್ಲಿ ಮಾತ್ರ ಶೆಲ್ಟರ್ ನಿರ್ಮಾಣವಾಗಿದೆ. ಬಾಕಿ ಇರುವ ಕಡೆಗಳಲ್ಲಿ ಎತ್ತರದ ಫ್ಲ್ಯಾಟ್ ಫಾರಂ ಮಾತ್ರ ಇದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಗೆ ಆಶ್ರಯಿಸಲು ಏನೂ ಇಲ್ಲದೆ, ತೆರೆದ ಪ್ರದೇಶದಲ್ಲೇ ನಿಲ್ಲಬೇಕಾದ ಅನಿವಾರ್ಯವಿದೆ ಎಂದು ಇತ್ತೀಚೆಗೆ ಉದ ಯ ವಾಣಿ ಸುದಿನದಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.
ಬಸ್‌ಸ್ಟ್ಯಾಂಡ್ ನಲ್ಲಿ ಕಾಮಗಾರಿ ಪರಿಶೀಲಿಸಿದ ಜಯಾನಂದ ಅಂಚನ್ ಮಾತನಾಡಿ, ಸಿಎಸ್‌ಆರ್ ಅನುದಾನಡಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಮುಂದೆ ಬಂದಿರಲಿಲ್ಲ. ಮತ್ತೆ ಟೆಂಡ್ ಕರೆಯಲಾ ಗುವುದು. ಜಾಹೀರಾತು ಸಹಿತ ಬಸ್ ಶೆಲ್ಟರ್ ಅಳವಡಿಕೆಗೆ ಕೌನ್ಸಿಲ್ ಸಭೆಯಲ್ಲಿ ಅನುಮತಿ ಯನ್ನೂ ಪಡೆಯಲಾಗಿದೆ ಎಂದರು.
ಸಮರ್ಪಕ ವ್ಯವಸ್ಥೆ ಇಲ್ಲ
ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸದ್ಯ ಕೆಎಸ್ಸಾರ್ಟಿಸಿ ಬಸ್‌ಗಳು, ಸಿಟಿ ಬಸ್, ಸರ್ವಿಸ್, ಒಪ್ಪಂದದ ಮೇರೆಗೆ ಸಾರಿಗೆ ಬಸ್‌ಗಳಿಗೆ ಅವಕಾಶವಿತ್ತು. ಎ. 1ರಿಂದ ಸಿಟಿ ಬಸ್‌ಗಳೂ ಸರ್ವಿಸ್ ಬಸ್ ನಿಲ್ದಾಣದ ಒಳನಿಂದಲೇ ಪ್ರಯಾಣ ಆರಂಭಿಸುತ್ತಿವೆ. ಸ್ಥಳದಲ್ಲಿ ಸಮರ್ಪಕ ಬಸ್ ಶೆಲ್ಪರ್ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಾರ್ಪೋರೆಟರ್‌ಗಳಾದ ಶೈಲೇಶ್ ಶೆಟ್ಟಿ, ಸಂದೀಪ್ ಗರೋಡಿ ಈ ವೇಳೆ ಉಪಸ್ಥಿತರಿದ್ದರು.