Advertisement
ಮೇಯರ್ ಸಂಪತ್‌ರಾಜ್ ಅವರ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಅನಧಿಕೃತ ಫ್ಲೆಕ್ಸ್ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಮೈಸೂಈರು ಬ್ಯಾಂಕ್ ವೃತ್ತದ ಸುತ್ತಮುತ್ತ ರಾರಾಜಿಸುತ್ತಿದ್ದ ಶಾಸಕ ಆರ್.ವಿ.ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಮೇಯರ್ ಹಿಂದೇಟು ಹಾಕಿದರು.
Related Articles
Advertisement
ಶಾಸಕ ಆರ್.ವಿ.ದೇವರಾಜ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಮತ್ತೆ ಫ್ಲೆಕ್ಸ್ ಅಳವಡಿಸಿದರೆ ದಂಡ ವಿಧಿಸಲಾಗುವುದು ಎಂದು ಹೇಳಿದರು. ಈ ವೇಳೆ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷ ನಾಯಕ ಮಹಮದ್ ರಿಜ್ವಾನ್ ನವಾಬ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಪ್ರಭಾವಿ ಶಾಸಕರಿಗೆ ಪ್ರಚಾರ ಬೇಡ: ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಜಿ.ಕೋಕಿಲಾ ಚಂದ್ರಶೇಖರ್ ಮಾತನಾಡಿ, “ಹೈಕೋರ್ಟ್ ಆದೇಶದಂತೆ ನಗರದಲ್ಲಿನ ಫ್ಲೆಕ್ಸ್, ಬ್ಯಾನರ್‌ಗಳ ತೆರವು ಕಾರ್ಯಕ್ಕೆ ಮುಂದಾಗಿದ್ದೇವೆ. ಯಾವುದೇ ಭಿನ್ನಮತ, ರಾಜಕೀಯ ದ್ವೇಷದಿಂದ ಕಾರ್ಯಾಚರಣೆ ನಡೆಸುತ್ತಿಲ್ಲ. ಆರ್.ವಿ.ದೇವರಾಜ್ ಅವರು ಪ್ರಭಾವಿ ನಾಯಕರಾಗಿದ್ದು ಅವರಿಗೆ ಪ್ರಚಾರ ಅನಗತ್ಯ.
ಆದರೆ, ಅವರ ಬೆಂಬಲಿಗರು ಹುಟ್ಟುಹಬ್ಬದ ಶುಭಾಶಯ ಕೋರಲು ಫ್ಲೆಕ್ಸ್ ಅಳವಡಿಸಿದ್ದು, ಸರ್ಕಾರ, ಖಾಸಗಿ ಸಂಸ್ಥೆಗಳು ಹಾಗೂ ರಾಜಕಾರಣಿಗಳು ಹಾಕಿರುವ ಯಾವುದೇ ಫ್ಲೆಕ್ಸ್, ಬ್ಯಾನರ್‌ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.