Advertisement

ಪತಿ ಲಂಚ ಸ್ವೀಕರಿಸಿದ್ದಕ್ಕೆ ಮೇಯರ್‌ ಸಸ್ಪೆಂಡ್‌

08:16 PM Aug 06, 2023 | Team Udayavani |

ಜೈಪುರ: ರಾಜಸ್ಥಾನ ರಾಜಧಾನಿ ಜೈಪುರ ಮಹಾನಗರ ಪಾಲಿಕೆಯ ಮೇಯರ್‌ ಮುನೇಶ್‌ ಗುಜ್ಜರ್‌ ಅವರನ್ನು ರಾಜ್ಯ ಸರ್ಕಾರ ಸಸ್ಪೆಂಡ್‌ ಮಾಡಿದೆ. ಕಾರಣ ಇಷ್ಟೇ ಅವರ ಪತಿ ಸುಶೀಲ್‌ ಗುರ್ಜಾರ್‌ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ 2 ಲಕ್ಷ ರೂ. ಲಂಚ ಸ್ವೀಕರಿಸಿದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಮೇಯರ್‌ ಮುನೇಶ್‌ ಗುರ್ಜಾರ್‌ ಅಡುಗೆ ಮನೆಯಲ್ಲಿ ಇರುವ ಸಂದರ್ಭದಲ್ಲಿಯೇ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯಾಚರಣೆ ನಡೆಸಿದೆ. ಜತೆಗೆ 40 ಲಕ್ಷ ರೂ. ನಗದನ್ನೂ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಮೇಯರ್‌ ಪತಿ ಜತೆಗೆ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ. ಜಮೀನು ನೀಡುವ ವಿಚಾರದಲ್ಲಿ ಮೇಯರ್‌ ಕೂಡ ಬೀರಲು ಪ್ರಯತ್ನಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದ್ದು, ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next