Advertisement
ಮೇಯರ್ ಹಳೆಯ ಹುಲಿಕವಿತಾ ಸನಿಲ್ ಅವರು ಕರಾಟೆಯಲ್ಲಿ ಹಳೆಯ ಹುಲಿ. 2008ಕ್ಕೆ ಮೊದಲು ಎಲ್ಲೇ ಕರಾಟೆ ಸ್ಪರ್ಧೆ ನಡೆಯುವುದಾದರೂ ಅಲ್ಲಿ ಅವರು ಸ್ಪರ್ಧಿಯಾಗಿರುತ್ತಿದ್ದರು. ಕವಿತಾ ಇದುವರೆಗೆ 58 ಚಿನ್ನ ಹಾಗೂ 18 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ದೇಶದ ವಿವಿಧೆಡೆ ಸೇರಿದಂತೆ ಆಸ್ಟ್ರೇಲಿಯಾ, ಮಲೇಶಿಯಾ, ಸ್ವಿಜರ್‌ಲ್ಯಾಂಡ್ ಮೊದಲಾದ ದೇಶಗಳ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಕಟಾ ಹಾಗೂ ಕುಮಿಟೆ ಎರಡೂ ವಿಭಾಗಗಳಲ್ಲೂ ಇವರು ಚಾಂಪಿಯನ್. 1992ರಿಂದ 2006ರ ವರೆಗೆ ನಿರಂತರವಾಗಿ ರಾಷ್ಟ್ರಮಟ್ಟದಲ್ಲಿ ಸ್ವರ್ಣ ಪದಕ ಪಡೆದವರು.
ಸಾಮಾನ್ಯವಾಗಿ ಕರಾಟೆಪಟುಗಳೆಂದರೆ ಅವರು ಇಂಡಿಯನ್ ಅಥವಾ ಬುಡೊಕಾನ್ ಶೈಲಿಯಲ್ಲಿ ಚಾಂಪಿಯನ್‌ಗಳಾಗಿರುತ್ತಾರೆ. ಆದರೆ ಕವಿತಾ ಎರಡೂ ಶೈಲಿಗಳಲ್ಲೂ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಏಕಮಾತ್ರ ಮಹಿಳೆ ಎಂಬ ಗೌರವಕ್ಕೆ ಪಾತ್ರರು. 1997-98ರಲ್ಲಿ ಮೇ ಡೇಯ ಸಂದರ್ಭದಲ್ಲಿ ನೆಹರೂ ಮೈದಾನದಲ್ಲಿ ತನ್ನ ಹೊಟ್ಟೆಯಿಂದ 360 ಸಿಸಿಯ ಬುಲೆಟ್ ಬೈಕ್ ಪಾಸ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಇಂಡಿಯನ್ ಶೈಲಿಯಲ್ಲಿ ಸುರೇಂದ್ರ, ಸುರೇಶ್, ಈಶ್ವರ ಕಟೀಲ್ ಇವರು ಮಾಸ್ಟರ್‌ಗಳಾಗಿದ್ದು, ನರಸಿಂಹನ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ. ಬುಡೋಕಾನ್‌ನಲ್ಲಿ ಪದ್ಮನಾಭ ಮಾಸ್ಟರ್ ಆಗಿದ್ದು, ಪರಮೇಶ್ವರ್ ಗ್ರ್ಯಾಂಡ್‌ಮಾಸ್ಟರ್ ಹಾಗೂ ಆಸ್ಟ್ರೇಲಿಯಾದ ರಿಚ್ಚಾರ್ಡ್ ಚೂ ಅವರು ಮೈನ್ ಗ್ರ್ಯಾಂಡ್‌ಮಾಸ್ಟರ್.
Related Articles
ಮೇಯರ್ ಅವರು ಕರಾಟೆಯಲ್ಲಿ ಇಷ್ಟು ಸಾಧನೆ ಮಾಡಲು ಕಾರಣವಾದ ಅಂಶವೆಂದರೆ, ಅವರು ಕರಾಟೆ ಕಲಿಯುತ್ತಿದ್ದ ವೇಳೆ ಹುಡುಗಿಯರು ಕರಾಟೆ ಕಲಿಯಲು ಬಂದರೂ ಅರ್ಧದಲ್ಲಿ ಬಿಡುತ್ತಿದ್ದರು. ಹೀಗಾಗಿ ಇವರು ಪುರುಷರೊಂದಿಗೆ ಕರಾಟೆ ಅಭ್ಯಾಸ ಮಾಡಬೇಕಿತ್ತು. ಇದೇ ನನ್ನ ಯಶಸ್ಸಿನ ಗುಟ್ಟು ಎನ್ನುತ್ತಾರೆ ಮೇಯರ್. ಇವರ ಜತೆಗೆ ಪವರ್ ಲಿಫ್ಟಿಂಗ್, ವೈಟ್ ಲಿಫ್ಟಿಂಗ್‌ನಲ್ಲೂ ಉತ್ತಮ ಸಾಧನೆ ತೋರಿದ್ದಾರೆ.
Advertisement
ಭಾಗವಹಿಸಲು ಸಂತೋಷ2008ರಲ್ಲಿ ಕೊನೆಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ಇದೀಗ ಮಂಗಳೂರಿನಲ್ಲೇ ದೊಡ್ಡಮಟ್ಟದ ಸ್ಪರ್ಧೆಯೊಂದು ಆಯೋಜನೆಗೊಳ್ಳುತ್ತಿರುವುದರಿಂದ ಭಾಗವಹಿಸಬೇಕೆಂಬ ಇಚ್ಛೆ ಇದೆ. ಈಗಾಗಲೇ ಬೆಳಗ್ಗೆ 5ರಿಂದ 7ರ ವರೆಗೆ ಅಭ್ಯಾಸ ಮಾಡುತ್ತಿದ್ದೇನೆ. ರವಿವಾರ ಕರಾಟೆ ತರಗತಿಗೆ ಹೋಗುತ್ತೇನೆ. ಹೀಗಾಗಿ ಇದರಿಂದ ನನ್ನ ಮೇಯರ್ ಹೊಣೆಗೆ ಯಾವುದೇ ತೊಂದರೆಯಾಗದು. ಮತ್ತೂಮ್ಮೆ ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ಭಾಗವಹಿಸಲು ಸಂತೋಷವಾಗುತ್ತದೆ.
– ಕವಿತಾ ಸನಿಲ್, ಮೇಯರ್
ಅವರು ಗಟ್ಟಿ ಮಹಿಳೆ
ನಾಲ್ಕನೇ ತರಗತಿಯಲ್ಲಿರುವಾಗ ಕವಿತಾ, ಕರಾಟೆ ಕಲಿಯಲು ನನ್ನಲ್ಲಿ ಸೇರಿದ್ದರು. ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ್ದರು. ಅವರು ಗಟ್ಟಿ ಮಹಿಳೆಯಾಗಿರುವುದರಿಂದ ಸಾಧ್ಯವಾಗಿದೆ. ಹೊಟ್ಟೆಯ ಮೂಲಕ ಬುಲೆಟ್ ಪಾಸ್ ಮಾಡಿದ ಏಕಮಾತ್ರ ಮಹಿಳೆ ಅವರು. ಇದರೊಂದಿಗೆ ಮಾನವೀಯ ಗುಣವೂ ಅವರಲ್ಲಿದೆ. ಅವರ ಗುರುಗಳು ಎನಿಸುವುದಕ್ಕೆ ಹೆಮ್ಮೆ ಇದೆ. ಒಂದು ತಿಂಗಳು ಅಭ್ಯಾಸ ಮಾಡಿದರೆ ಮಾತ್ತೂಮ್ಮೆ ಸ್ಪರ್ಧಿಸಬಹುದು.
– ಸುರೇಂದ್ರ ಬಿ., ಮೇಯರ್ ಅವರ ಕರಾಟೆ ಮಾಸ್ಟರ್ – ಕಿರಣ್ ಸರಪಾಡಿ