Advertisement

SP ಶಾಸಕನ ಪುತ್ರಿಯೊಂದಿಗೆ ಮಗನ ಮದುವೆ: ನಾಯಕನ್ನು ಬಿಎಸ್ ಪಿಯಿಂದ ಉಚ್ಚಾಟಿಸಿದ ಮಾಯಾವತಿ

10:17 PM Dec 06, 2024 | Team Udayavani |

ಲಕ್ನೋ: ಸಮಾಜವಾದಿ ಪಕ್ಷದ (SP) ಶಾಸಕ ತ್ರಿಭುವನ್ ದತ್ ಅವರ ಪುತ್ರಿಯೊಂದಿಗೆ ಮಗನ ವಿವಾಹವನ್ನು ಮಾಡಿದ ಬಿಎಸ್‌ಪಿ ಹಿರಿಯ ನಾಯಕ ಸುರೇಂದ್ರ ಸಾಗರ್ ಅವರನ್ನು ಮಾಯಾವತಿ ಅವರು ಪಕ್ಷದಿಂದ ಉಚ್ಚಾಟಿಸಿದ್ದಾರೆ.

Advertisement

ಬರೇಲಿ ವಿಭಾಗದ ಪ್ರಮುಖ ಬಿಎಸ್‌ಪಿ ನಾಯಕರಾದ ಸುರೇಂದ್ರ ಸಾಗರ್ ಅವರು ಐದು ಬಾರಿ ರಾಂಪುರದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಮತ್ತು ಕ್ಯಾಬಿನೆಟ್ ಸಚಿವ ಸ್ಥಾನಮಾನವನ್ನು ಅಲಂಕರಿಸಿದ್ದರು.

ಪಕ್ಷದೊಳಗೆ ಅವರ ಸ್ಥಾನಮಾನದ ಹೊರತಾಗಿಯೂ, ಎಸ್ ಪಿ ನಾಯಕನೊಂದಿಗಿನ ಸಂಬಂಧ ಬೆಳೆಸಿದ್ದು ಪಕ್ಷದಿಂದ ಉಚ್ಚಾಟಿಸಲು ಕಾರಣವಾಯಿತು. ಮಾಜಿ ಬಿಎಸ್ ಪಿ ಸಂಸದ ಮತ್ತು ಶಾಸಕ ತ್ರಿಭುವನ್ ದತ್ ಈಗ ಅಂಬೇಡ್ಕರ್ ನಗರದಿಂದ ಎಸ್ ಪಿ ಶಾಸಕರಾಗಿದ್ದಾರೆ.

ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇತ್ತೀಚೆಗೆ ಅಂಬೇಡ್ಕರ್ ನಗರದಲ್ಲಿರುವ ದತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಸಾಗರ್ ಜತೆಗೆ ರಾಂಪುರ ಜಿಲ್ಲಾಧ್ಯಕ್ಷ ಪ್ರಮೋದ್ ಸಾಗರ್ ಅವರನ್ನೂ ಬಿಎಸ್ ಪಿಯಿಂದ ವಜಾಗೊಳಿಸಲಾಗಿದೆ.ಉಚ್ಛಾಟನೆಗೆ “ಪಕ್ಷ ವಿರೋಧಿ ಚಟುವಟಿಕೆಗಳು” ಮತ್ತು “ಅಶಿಸ್ತು” ಕಾರಣ ಎಂದು ಬಿಎಸ್‌ಪಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next