Advertisement

ಮುಂಬೈ ಅಂಗಳದಲ್ಲಿ ಮಿಂಚಿದ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ

04:45 PM Dec 03, 2021 | Team Udayavani |

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

Advertisement

ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿ ಇನ್ನಿಂಗ್ಸ್ ಕಟ್ಟಿದರು. ಶುಭ್ಮನ್ ಗಿಲ್ ಜೊತೆಗೆ 80 ರನ್ ಜೊತೆಯಾಟವಾಡಿದ ಮಯಾಂಕ್ ನಂತರ ಅಯ್ಯರ್ ಜೊತೆ ಅಮೂಲ್ಯ ಜೊತೆಯಾಟವಾಡಿದರು.

196 ಎಸೆತಗಳಲ್ಲಿ ಶತಕ ಪೂರೈಸಿದ ಮಯಾಂಕ್ 13 ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್ ಬಾರಿಸಿದರು. ಇದು ಮಯಾಂಕ್ ಟೆಸ್ಟ್ ಜೀವನದ ನಾಲ್ಕನೇ ಶತಕವಾಗಿದೆ.

ಇದನ್ನೂ ಓದಿ:ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಭಾರತ ತಂಡ 60 ಓವರ್ ಗಳ ಬಳಿಕ ನಾಲ್ಕು ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದೆ. 102 ರನ್ ಗಳಿಸಿರುವ ಮಯಾಂಕ್ ಮತ್ತು 20 ರನ್ ಗಳಿಸಿರುವ ವೃದ್ಧಿಮಾನ್ ಸಾಹಾ ಆಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next